ಮನೋರಂಜನೆ

ಎರಡು ವಾರದ ನಂತರ ಹೊಸ ಅಥಿತಿಯನ್ನು ಹೊರಗಡೆ ಕರೆದುಕೊಂಡು ಬಂದ್ರು ಚಾಲೆಂಜಿಂಗ್ ಸ್ಟಾರ್.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಸಿನಿಮಾ ಹೊರತಾಗಿ ನೋಡಿದರೆ ಅವರಿಗಿರೋ ಅಪಾರವಾದ ಪ್ರಾಣಿಪ್ರೀತಿ ಮತ್ತು ಎಂಥವರೂ ಅರೆಕ್ಷಣ ಅವಾಕ್ಕಾಗುವಂಥಾ ಕಾರಿನ ಕ್ರೇಜ್ ಕಣ್ಣಿಗೆ ಬೀಳುತ್ತದೆ. ಕನ್ನಡದ ಮಟ್ಟಿಗೆ ಹೇಳೋದಾದರೆ ದರ್ಶನ್ ಅವರಂಥಾ ಕಾರಿನ ಕ್ರೇಜ಼್ ಇರೋ ಬೇರೊಬ್ಬ ನಟನನ್ನು ಹುಡುಕೋದು ಕಷ್ಟ! ಭಾರತದಲ್ಲಿ ಕೆಲವೇ ಕೆಲ ಮಂದಿಯ ಬಳಿ ಮಾತ್ರವೇ ಇರುವ ದುಬಾರಿ ಕಾರುಗಳನ್ನು ಖರೀದಿಸೋದು ದರ್ಶನ್ ಅವರಿಗಿರುವ ಪ್ರಧಾನ ಆಸಕ್ತಿ. ಇತ್ತೀಚೆಗಷ್ಟೇ ಹತ್ತು ಕೋಟಿ ಮೊತ್ತದ ಲ್ಯಾಂಬೊರ್ಗಿನಿ ಕಾರನ್ನು ದರ್ಶನ್ ಖರೀದಿಸಿದ್ದ ವಿಚಾರ ಭಾರೀ ಸುದ್ದಿ ಮಾಡಿತ್ತು.

 

 

ಹತ್ತು ಕೋಟಿಯ ಕಾರು ಖರೀದಿಸಿದ ಬೆನ್ನಲ್ಲೇ ದರ್ಶನ್ ಅವರು ಮತ್ತೊಂದು ದುಬಾರಿ ಕಾರನ್ನು ಖರೀದಿಸಿದ್ದಾರೆ. ಇದನ್ನು ಖರೀದಿಸಿ ಸರಿಸುಮಾರು ಎರಡು ಮೂರು ವಾರಗಳೇ ಸರಿಯುತ್ತ ಬಂದಿವೆ. ಮೇ 19ರಂದು ಹಳದಿ ಬಣ್ಣದ ಫೋರ್ಡ್ ಮಸ್ಟಂಗ್ ಖರೀಧಿಸಿದ್ದ ದರ್ಶನ್ ಈವರೆಗೂ ಅದನ್ನು ಹೊರಗಡೆ ತಂದಿರಲಿಲ್ಲ ಆದರೆ ಇದೀಗ ಸ್ವತಃ ತಾವೇ ಮೊದಲ ಬಾರಿಗೆ ಈ ದುಬಾರಿ ಕಾರನ್ನು ಓಡಿಸಿಕೊಂಡು ಆಚೆ ತಂದಿದ್ದಾರೆ.

ಕಾರಿಗೆ ಪೂಜೆ ಮಾಡಿಸಲು ದರ್ಶನ್ ನೆನ್ನೆ ಚಾಮುಂಡಿ ಬೆಟ್ಟದತ್ತ ಪ್ರಯಾಣ ಬೆಳೆಸಿ ತಾಯಿ ಚಾಮುಂಡೇಶ್ವರಿಯ ದರ್ಶನವನ್ನು ಪಡೆದಿದ್ದಾರೆ.. ಚಾಮುಂಡೇಶ್ವರಿ ಸನ್ನಿಧಿ ತಲುಪುತ್ತಿದ್ದಂತೆಯೇ ಮೈಸೂರಿನಲ್ಲಿ ಭಾರೀ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಜಮಾಯಿಸಿದ್ದರು. ದರ್ಶನ್ ಹೊಸ ಕಾರಿನ ಫೋಟೋ ಜೊತೆಗೆ ದರ್ಶನ್ ಜೊತೆ ಫೋಟೋ ತೆಗೆಸಿಕೊಂಡು ಖುಷಿಪಟ್ಟರು. ಖರೀಧಿಸಿ ತುಂಬಾ ದಿನ ಆಗಿದ್ದರು ಸಮಯದ ಅಭಾವವಿದ್ದುದರಿಂದ ಕಾರಿಗೆ ಪೂಜೆ ಮಾಡಿಸಲು ಆಗಿರಲಿಲ್ಲ ನೆನ್ನೆ ಸಮಯಮಾಡಿಕೊಂಡು ಮಾಮೂಲಿನಂತೆ ಮೈಸೂರಿನ ಚಾಮುಂಡೇಶ್ವರಿ ಸನ್ನಿಧಿಗೆ ದರ್ಶನ್ ಅವರೇ ಸ್ವತಃ ಹೋಗಿಬಂದಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top