ಹೆಚ್ಚಿನ

ನಿಮ್ಮ ಕೈಯಲ್ಲಿ ಈ ರೀತಿಯ ಮೀನಿನ ಆಕಾರವಿರುವ ರೇಖೆ ಅಥವಾ ಚಿತ್ರವಿದ್ದರೆ ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ಅದು ಏನನ್ನು ಸೂಚಿಸುತ್ತದೆ ? ಎಂಬುದನ್ನು ನೋಡೋಣ ಬನ್ನಿ.

ನಿಮ್ಮ ಕೈಯಲ್ಲಿ ಈ ರೀತಿಯ ಮೀನಿನ ಆಕಾರವಿರುವ ರೇಖೆ ಅಥವಾ ಚಿತ್ರವಿದ್ದರೆ ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ಅದು ಏನನ್ನು ಸೂಚಿಸುತ್ತದೆ ? ಎಂಬುದನ್ನು ನೋಡೋಣ ಬನ್ನಿ.

ಹಸ್ತ ಸಾಮುದ್ರಿಕಾ ಶಾಸ್ತ್ರದ ಪ್ರಕಾರ, ನಿಮ್ಮ ಕೈಯಲ್ಲಿರುವ ಮೀನಿನ ಆಕಾರದಲ್ಲಿರುವ ಚಿತ್ರ ಅಥವಾ ರೇಖೆಗಳು ಮೂಡಿದ್ದರೆ ಅವರ ಜೀವನದಲ್ಲಿ ಖ್ಯಾತಿ, ಯಶಸ್ಸು ಮತ್ತು ಸಮೃದ್ಧಿ ಭರಿತವಾದ ಐಷಾರಾಮಿ ಜೀವನವನ್ನು ನಡೆಸುತ್ತಾರೆ. ಕೆಲವು ತೊಂದರೆಗಳಿದ್ದರೂ ಇವರು ತಮ್ಮ ಜೀವನದಲ್ಲಿ ಹಣದ ಕೊರತೆಯನ್ನು ಎಂದಿಗೂ ಎದುರಿಸುವುದಿಲ್ಲ.

 

 

ಈ ರೀತಿಯ ಮೀನಿನ ಆಕಾರವನ್ನು ಹೊಂದಿದ್ದರೆ, ಇದು ತುಂಬಾ ಶುಭ ಮತ್ತು ಮಂಗಳಕರ ಎಂದು ಪರಿಗಣಿಸಲಾಗಿದೆ. ಮೀನು ಅಪಾರ ಬುದ್ಧಿವಂತಿಕೆ ಮತ್ತು ಜ್ಞಾನವನ್ನು ನೀಡುತ್ತದೆ. ಜೀವನದಲ್ಲಿ ಕಷ್ಟಗಳನ್ನು ಎದುರಿಸುವಾಗ ಜೀವನದ ಪ್ರಾರಂಭಿಕ ದಿನಗಳಲ್ಲಿ ಮತ್ತು ನಂತರದ ದಿನಗಳಲ್ಲಿ ಇವರು ಶ್ರೀಮಂತರಾಗಿ ಜೀವನವನ್ನು ಸುಖಮಯವಾಗಿ ಕಳೆಯುತ್ತಾರೆ .

ಇಲ್ಲಿ ತೋರಿಸಿರುವ ಅಂಗೈ, ಖ್ಯಾತ ನಟಿ ಜೆನಿಫರ್ ಲೊಪೆಜ್ ಅವರದ್ದು. ಇಲ್ಲಿ ನೀವು ಸ್ಪಷ್ಟವಾಗಿ ಕಾಣಬಹುದು ಸೂರ್ಯನ ಪರ್ವತದ ಮೇಲೆ ಮೀನಿನ ಆಕಾರದಲ್ಲಿರುವ ರೇಖೆಯನ್ನು. ಇಲ್ಲಿ ಮೀನಿನ ರೇಖೆಯು ಸ್ವಲ್ಪ ಬುಧನ ಪರ್ವತದ ಕಡೆಗೆ ಬಾಗಿದೆ. ಸೂರ್ಯನ ಪರ್ವತದ ಮೇಲೆ ಇದ್ದರೆ ಅದು ಒಬ್ಬ ಮನುಷ್ಯನ ಮಾತು ಮತ್ತು ಕೌಶಲ್ಯವನ್ನು ಸೂಚಿಸುತ್ತದೆ. ಈ ಎರಡನ್ನೂ ಉಪಯೋಗಿಸಿಕೊಂಡು ಕಲಾತ್ಮಕವಾಗಿ ಆ ವ್ಯಕ್ತಿಯೂ ಇರುತ್ತಾನೆ. ಸೂರ್ಯನ ಪರ್ವತದ ಮೇಲೆ ಮೀನಿನ ಆಕಾರವು ಹೆಸರು, ಗೌರವ ಮತ್ತು ಸಮೃದ್ಧಿಯನ್ನು ತಂದುಕೊಡುತ್ತದೆ.

ಜೆನಿಫರ್ ಲೋಪೆಜ್ ತುಂಬಾ ಪ್ರಖ್ಯಾತಿ ಪಡೆದಿರುವ ಅಮೆರಿಕದ ಖ್ಯಾತ ಗಾಯಕಿ ಮತ್ತು ನಟಿಯಾಗಿದ್ದಾಳೆ. ಟೈಮ್ಸ್ ಮತ್ತು ಫೋರ್ಬ್ಸ್ ಪತ್ರಿಕೆಗಳು ಇವಳಿಗೆ ಅಗ್ರ ಶ್ರೇಯಾಂಕದ ಶ್ರೇಣಿಯನ್ನು ನೀಡಿದ್ದಾರೆ. ಇವಳು ತುಂಬಾ ಶಕ್ತಿಶಾಲಿ ಮತ್ತು ಪ್ರಭಾವಶಾಲಿ ನಟಿಯಾಗಿದ್ದಾಳೆ ಈ ಜಗತ್ತಿನಲ್ಲಿ ಎಂದು ಹೇಳಿದ್ದಾರೆ. ಇವಳು ಯಶಸ್ವಿ ನಿರ್ಮಾಪಕಿ, ವ್ಯವಹಾರ ಮಾಡುವ ಸ್ತ್ರೀಯಾಗಿದ್ದಾಳೆ. ಅವಳು ಬಟ್ಟೆ, ರೇಖಾತ್ಮಕ ಪರಿಕರಗಳು ಮತ್ತು ಪರಿಮಳಗಳನ್ನು ಹೊಂದಿದ್ದಾಳೆ. ಇವಳು ಲೋಕೋಪಕಾರಿ ಮತ್ತು ಒಂದು ಸ್ವಂತ ಸಂಸ್ಥೆಯನ್ನು ಕೂಡ ಹೊಂದಿದ್ದಾಳೆ. ಮುನ್ನೂರು ಮಿಲಿಯನ್ ಡಾಲರ್ ಗಿಂತಲೂ ಹೆಚ್ಚಿನ ಆದಾಯವನ್ನು ಒಂದು ವರ್ಷಕ್ಕೆ ನಿವ್ವಳ ಲಾಭವಾಗಿ ಗಳಿಸುತ್ತಿದ್ದಾಳೆ.

ಬನ್ನಿ ಮೀನಿನ ಆಕಾರವಿರುವ ರೇಖೆಯೂ ಅಂಗೈಯಲ್ಲಿ ಯಾವ ? ಸ್ಥಳದಲ್ಲಿ ಅಂದರೆ ಯಾವ ಗ್ರಹದ ಪರ್ವತದ ಸ್ಥಳದಲ್ಲಿದ್ದರೆ ಏನು ಲಾಭ ? ಅದು ಏನನ್ನು ಸೂಚಿಸುತ್ತದೆ ? ಎಂಬುದನ್ನು ತಿಳಿದುಕೊಳ್ಳೋಣ.

1.ಮೀನಿನ ರೇಖೆಯು ಶನಿಯ ಪರ್ವತದ ಮೇಲೆ ಇದ್ದರೆ.
ಮೀನಿನ ರೇಖೆಯು ಶನಿಯ ಪರ್ವತದ ಮೇಲೆ ಇದ್ದರೆ, ಅದು ಅ ವ್ಯಕ್ತಿಯ ಹೆಸರು ಮತ್ತು ಖ್ಯಾತಿಯನ್ನು ಹೆಚ್ಚಿಸುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಆಸಕ್ತಿಯನ್ನು ಇವರು ಹೆಚ್ಚಾಗಿ ಹೊಂದಿರುತ್ತಾರೆ .ಈ ರೀತಿಯ ವ್ಯಕ್ತಿಗಳು ಅವರಿಗೆ ಅವರೇ ಅದೃಷ್ಟವಂತರಾಗಿರುತ್ತಾರೆ. ರಹಸ್ಯಗಳನ್ನು ಭೇದಿಸುವುದರಲ್ಲಿ ಮತ್ತು ರಹಸ್ಯ ಕಲೆಗಳನ್ನು ಬೇದಿಸಲು ಇವರು ಅಧಿಕವಾಗಿ ಕೆಲಸ ಮಾಡುತ್ತಾರೆ. ಮೀನಿನ ರೇಖೆಯು ಒಬ್ಬ ವ್ಯಕ್ತಿಯನ್ನು ಅವರ ಜೀವನದಲ್ಲಿ ತುಂಬಾ ಶಿಸ್ತುಬದ್ಧರನ್ನಾಗಿ ಮಾಡುತ್ತದೆ.

2.ಮೀನಿನ ರೇಖೆಯು ಗುರು ಪರ್ವತದ ಮೇಲೆ ಇದ್ದರೆ .
ಗುರು ಪರ್ವತದ ಮೇಲೆ ಮೀನಿನ ರೇಖೆ ಇದ್ದರೆ ಅವರು ಜೀವನದಲ್ಲಿ ಖ್ಯಾತಿ ಮತ್ತು ಹೆಸರನ್ನು ಅವರ ಬುದ್ಧಿವಂತಿಕೆ ಮತ್ತು ಜ್ಞಾನದ ಮೂಲಕ ಗಳಿಸುತ್ತಾರೆ.ಇದು ಒಬ್ಬ ವ್ಯಕ್ತಿಯ ಜೀವನವನ್ನು ಶ್ರೀಮಂತರನ್ನಾಗಿಸುತ್ತದೆ.

 

 

3.ಮೀನಿನ ರೇಖೆಯೂ ಬುಧನ ಪರ್ವತದ ಮೇಲೆ ಇದ್ದರೆ.
ಮೀನಿನ ರೇಖೆಯು ಬುಧನ ಪರ್ವತದ ಮೇಲೆ ಇದ್ದರೆ, ಅದು ತುಂಬಾ ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗಿದೆ. ವ್ಯಾಪಾರ, ಮದುವೆ ಮತ್ತು ವೃತ್ತಿ ಜೀವನವನ್ನು ಅದು ತುಂಬಾ ಉನ್ನತ ಮಟ್ಟಕ್ಕೆ ಕೊಂಡೊಯ್ಯುವುದಷ್ಟೇ ಅಲ್ಲದೆ ಉತ್ತಮ ಮಾತುಗಾರಿಕೆ ಮತ್ತು ವಾಕ್ ಸಾಮರ್ಥ್ಯದ ಕಲೆಗಳು ಇವರಲ್ಲಿ ಅಧಿಕವಾಗಿ ಇರುತ್ತವೆ .

4.ಮೀನಿನ ಆಕಾರ ಚಂದ್ರನ ಪರ್ವತದ ಮೇಲೆ ಇದ್ದರೆ .
ಮೀನಿನ ಆಕಾರವೂ ಚಂದ್ರನ ಪರ್ವತದ ಮೇಲೆ ಇದ್ದರೆ, ಈ ವ್ಯಕ್ತಿಯ ಹೆಸರು, ಖ್ಯಾತಿ ಮತ್ತು ಕಲಾತ್ಮಕ ಕಲೆ ಮತ್ತು ವೃತ್ತಿಯಲ್ಲಿ ಕೂಡ ಕ್ರಿಯಾತ್ಮಕವಾಗಿ ಕೂಡ ಗಾಡವಾದ ಕಲ್ಪನೆಯನ್ನು ಹೊಂದಿರುತ್ತಾರೆ. ಜೊತೆಗೆ ತುರ್ತಾಗಿ ನಿಮಗೆ ಉಪಯೋಗವಾಗುವಂತಹ ಪ್ರಯಾಣಗಳು ನಿಮಗೆ ದೊರೆಯುತ್ತದೆ, ಆದರಿಂದ ಜೀವನದಲ್ಲಿ ನಿಮ್ಮ ಅದೃಷ್ಟವೇ ಬದಲಾಗುತ್ತದೆ.

5.ಮೀನಿನ ಆಕಾರ ಕೇತುವಿನ ಪರ್ವತದ ಮೇಲೆ ಇದ್ದರೆ.
ಅದೆಷ್ಟೋ ಬಾರಿ ಮೀನಿನ ಆಕಾರವುಳ್ಳ ರೇಖೆಯೂ ಅಂಗೈನ ಕೆಳಭಾಗದಲ್ಲಿ ಕೇತುವಿನ ಪರ್ವತದಲ್ಲಿ ಇರುತ್ತದೆ. ಕೇತುವಿನ ಪರ್ವತವು ಮನುಷ್ಯನನ್ನು ತುಂಬಾ ಆಧ್ಯಾತ್ಮಿಕರನ್ನಾಗಿ ಮಾಡುತ್ತದೆ. ಮತ್ತು ಒಬ್ಬ ಮನುಷ್ಯ ಶ್ರೀಮಂತನಾಗಿ ಹೆಸರು ಮತ್ತು ಖ್ಯಾತಿಯನ್ನು ಸಹ ಪಡೆಯುತ್ತಾನೆ.
ಉದಾಹರಣೆಗೆ – ಮೀನಿನ ಆಕಾರವುಳ್ಳ ರೇಖೆಯು ಕೇತುವಿನ ಪರ್ವತದ ಮೇಲೆ ಮೂಡಿದ್ದರೆ ಮತ್ತು ಮೀನಿನ ರೇಖೆ ಸೂರ್ಯನ ಪರ್ವತದ ಕಡೆಗೆ ಮುಖ ಮಾಡಿದ್ದರೆ, ಅದು ಆ ಮನುಷ್ಯನು ಸೂರ್ಯನಿಂದ ಶಕ್ತಿಯನ್ನು ಪಡೆದು ಅವನ ವೃತ್ತಿಯಲ್ಲಿ ಏಳಿಗೆಯನ್ನು ಮತ್ತು ಉನ್ನತಿಯನ್ನು ಸಾಧಿಸಲು ಸಹಾಯಕವಾಗುತ್ತದೆ . ಜೊತೆಗೆ ಕೇತುವು ಕೂಡ ಅವರನ್ನು ಆಧ್ಯಾತ್ಮಿಕ ಪಯಣದ ಕಡೆಗೆ ಕೊಂಡೊಯ್ದು ಯಶಸ್ಸನ್ನು ಗಳಿಸಲು ಸಹಾಯ ಮಾಡುತ್ತದೆ. ಈ ರೀತಿಯಲ್ಲಿ ವ್ಯಾಖ್ಯಾನ ಮಾಡಲಾಗುತ್ತದೆ. ಮೀನಿನ ಆಕಾರದ ರೇಖೆಯೂ ಗುರುವಿನ ಪರ್ವತದ ಕಡೆಗೆ ಮುಖ ಮಾಡಿದ್ದರೆ ಮತ್ತು ಶನಿ ಪರ್ವತದ ಕಡೆಗೆ ಮತ್ತು ಬುಧನ ಪರ್ವತದ ಕಡೆಗೆ ಮುಖ ಮಾಡಿದ್ದರೆ , ಒಂದು ವೇಳೆ ಮೀನಿನ ಆಕಾರದ ರೇಖೆಯೂ ಪರ್ವತಗಳ ಮಧ್ಯದಲ್ಲಿ ಇದ್ದರೆ ಅದು ಏನನ್ನು ಸೂಚಿಸುತ್ತದೆ ? ಎಂದರೆ ಆ ವ್ಯಕ್ತಿ ಎರಡೂ ಗ್ರಹದ ಶಕ್ತಿಯನ್ನು ಅವರು ಎರಡು ಗ್ರಹಗಳ ಸಂಯೋಗವು ಅವರ ಜೀವನದಲ್ಲಿ ಉತ್ತಮ ಪರಿಣಾಮವನ್ನು ಬೀರಲಿದೆ.

 

 

6.ಮೀನಿನ ಆಕಾರವೂ ಪರ್ವತದ ಕೆಳಮುಖವಾಗಿ ಮುಖ ಮಾಡಿದ್ದರೆ.
ಮೀನಿನ ಆಕಾರದ ರೇಖೆಯು ಯಾವುದೇ ಪರ್ವತದ ಕಡೆಗೆ ಬಾಲ ಇದ್ದರೆ, ಯಾವುದೇ ಪರ್ವತದ ಕಡೆಗೆ ಕೆಳಮುಖವಾಗಿ ಇದ್ದರೆ, ಅದು ಅವರ ಜೀವನದಲ್ಲಿ ಯಶಸ್ಸು ಸ್ವಲ್ಪ ಲೇಟಾಗಿ ಸಿಗುತ್ತದೆ ಎಂಬುದನ್ನು ಸೂಚಿಸುತ್ತದೆ. ಏನಾದರೂ ? ಹೇಗಾದರೂ ? ಒಟ್ಟಿನಲ್ಲಿ ಮೀನಿನ ಆಕಾರದ ಮಹತ್ವವೂ ಒಂದೇ ರೀತಿಯಾಗಿರುತ್ತದೆ. ನಿಮ್ಮ ಕೈಯಲ್ಲಿರುವ ಮೀನಿನ ಆಕಾರದ ಇದೆಯೇ ಎಂದು ನೋಡಿಕೊಳ್ಳಿ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top