ಆರೋಗ್ಯ

ಗಂಟಲು ನೋವು ಬಂದ್ರೆ ತಕ್ಷಣ ಈ ಮನೆಮದ್ದುಗಳಿಂದ ಶಮನ ಮಾಡಿಕೊಳ್ಳಿ.

ಈ ಮನೆಮದ್ದುಗಳನ್ನು ಬಳಸಿ ನಿಮ್ಮ ಗಂಟಲು ಬೇನೆಯನ್ನು ದೂರಮಾಡಿಕೊಳ್ಳಿ..!

 

Image result for throat pain

 

ಗಂಟಲು ನೋವಿಗೆ ಮನೆಮದ್ದುಗಳು

*ಉಪ್ಪು ನೀರು: ಗಂಟಲು ನೋವಿಗೆ ರಾಮಬಾಣ ಎನಿಸಿಕೊಂಡಿರುವ ಪರಿಹಾರ ಉಪ್ಪು ನೀರು. ಹೌದು ನೀರಿಗೆ ಸ್ವಲ್ಪ ಉಪ್ಪನ್ನು ಬೆರೆಸಿಕೊಂಡು ಅದನ್ನು ಮುಕ್ಕಳಿಸುವ ಮೂಲಕ ನಿಮ್ಮ ಗಂಟಲ ನೋವನ್ನು ನಿವಾರಿಸಿಕೊಳ್ಳಬಹುದು. ಇಷ್ಟೇ ಅಲ್ಲದೆ ಇದು ನಿಮ್ಮ ಗಂಟಲ ನೋವಿಗೆ ತಕ್ಷಣದ ಪರಿಹಾರವನ್ನು ನೀಡುತ್ತದೆ. ಒಂದು ವೇಳೆ ನಿಮಗೆ ಉಪ್ಪು ಅಷ್ಟಾಗಿ ರುಚಿಸದಿದ್ದಲ್ಲಿ, ಈ ನೀರಿಗೆ ಸ್ವಲ್ಪ ಪ್ರಮಾಣದ ಜೇನು ತುಪ್ಪವನ್ನು ಬೆರೆಸಿಕೊಳ್ಳಿ. ಈ ಮಿಶ್ರಣವನ್ನು ಮುಕ್ಕಳಿಸಿ, ಆದರೆ ನುಂಗಬೇಡಿ. ಮುಕ್ಕಳಿಸಿದ ನೀರನ್ನು ಹೊರಗೆ ಉಗಿಯಿರಿ. ದಿನಕ್ಕೆ ನಾಲ್ಕೈದು ಬಾರಿ ಇದನ್ನು ಮಾಡಿದರೆ ನಿಮ್ಮ ಗಂಟಲು ನೋವು ನಿವಾರಣೆಯಾಗುತ್ತದೆ.

 

*ಜೇನು ಮತ್ತು ಲಿಂಬೆ: ಸಮ ಪ್ರಮಾಣದಲ್ಲಿ ಜೇನು ಮತ್ತು ಲಿಂಬೆಯನ್ನು ಮಿಶ್ರಣ ಮಾಡಿ ಸೇವಿಸುವುದರಿಂದಲೂ ಗಂಟಲ ಬೇನೆ ಶೀಘ್ರವಾಗಿ ಗುಣವಾಗುತ್ತದೆ. ಇದಕ್ಕಾಗಿ ಒಂದು ಲೋಟ ನೀರನ್ನು ಬಿಸಿಮಾಡಿ ತಲಾ ಒಂದು ಚಿಕ್ಕ ಚಮಚ ಜೇನು ಮತ್ತು ಲಿಂಬೆರಸವನ್ನು ಬೆರೆಸಿ ಬಿಸಿಬಿಸಿಯಾಗಿ ಸೇವಿಸುವ ಮೂಲಕ ಗಂಟಲ ತೊಂದರೆ ಹಾಗೂ ಇದರಿಂದಾಗಿ ಎದುರಾಗಿದ್ದ ನೋವು ಕಡಿಮೆಯಾಗುತ್ತದೆ.

 

* ದಾಳಿಂಬೆ ಹಣ್ಣನ್ನು ಸೇವಿಸಿ: ಒಂದು ದಾಳಿಂಬೆಯ ಕಾಳುಗಳಿಂದ ಹಿಂಡಿ ತೆಗೆದ ರಸ ಹಾಗೂ ಸುಮಾರು ಮೂರರಿಂದ ನಾಲ್ಕು ಕಪ್ ನೀರನ್ನು ಇದಕ್ಕೆ ಬೆರೆಸಿ ಒಂದು ಬಾಟಲಿಯಲ್ಲಿ ಸಂಗ್ರಹಿಸಿ. ಈ ನೀರನ್ನು ಇಡಿಯ ದಿನ ಕೊಂಚಕೊಂಚವಾಗಿ ಕುಡಿಯುತ್ತಾ ಖಾಲಿ ಮಾಡಿ. ಗಂಟಲ ಕಿರಿಕಿರಿ ನಿವಾರಿಸಲು ಇದೂ ಒಂದು ಉತ್ತಮ ವಿಧಾನವಾಗಿದೆ.

 

*ಹಬೆಯನ್ನು ಉಸಿರಾಡಿ: ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ ಇನ್ನೂ ಹಬೆಯಾಡುತ್ತಿರುವಂತೆಯೇ ಇದರ ಮೇಲೆ ಮುಖವಿರಿಸಿ ದಪ್ಪ ಟವೆಲ್ಲಿನಿಂದ ಪಾತ್ರೆಯನ್ನು ಆವರಿಸಿ ಹಬೆಯನ್ನು ಮೂಗಿನಿಂದ ಉಸಿರಾಡಿ. ಇನ್ನೂ ಉತ್ತಮ ಪರಿಣಾಮ ಪಡೆಯಲು ಈ ನೀರಿಗೆ ಒಂದೆರಡು ತೊಟ್ಟು ನೀಲಗಿರಿ ಎಣ್ಣೆಯನ್ನು ಹಾಕಿ ಈ ಹಬೆಯನ್ನು ಕೆಲವಾರು ನಿಮಿಷಗಳವರೆಗೆ ಉಸಿರಾಡಿ.

 

Related image

 

* ಹಸಿಶುಂಠಿ ಬಳಸಿ: ಬಿಸಿನೀರಿಗೆ ಕೊಂಚ ಹಸಿಶುಂಠಿಯನ್ನು ಹಾಕಿ ಕುದಿಸಿ ಸೋಸಿ ತಯಾರಿಸಿದ ಟೀ ದಿನಕ್ಕೆರಡು ಕಪ್ ನಂತೆ ಕುಡಿಯಿರಿ. ಗಂಟಲ ಬೇನೆಗೆ ತಕ್ಷಣದ ಪರಿಹಾರ ನೀಡಲು ಈ ವಿಧಾನ ಉತ್ತಮವಾಗಿದೆ. ಒಂದು ವೇಳೆ ಕಫ ಗಟ್ಟಿಯಾಗಿದ್ದಂತೆ ಅನ್ನಿಸಿದರೆ ಈ ಟೀ ಯಲ್ಲಿ ಒಂದು ಚಮಚ ಜೇನು ಬೆರೆಸಿ ಕುಡಿಯಿರಿ.

 

Related image

 

* ಲವಂಗ : ಎರಡು ಲವಂಗವನ್ನು ಬಾಯಿಗೆ ಹಾಕಿಕೊಂಡು ಅದು ಮೆತ್ತಗೆ ಆಗುವ ತನಕ ಜಗಿಯುತ್ತಾ ಇರಿ. ಜಗಿದ ಬಳಿಕ ಇದನ್ನು ನುಂಗಿ. ಗಂಟಲು ನೋವಿಗೆ ಇದು ತುಂಬಾ ಪರಿಣಾಮಕಾರಿ.

 

* ಮೆಂತೆಯ ನೀರು: ಒಂದು ಲೀಟರ್ ನೀರಿಗೆ ಎರಡು ದೊಡ್ಡಚಮಚ ಮೆಂತೆಕಾಳುಗಳನ್ನು ಹಾಕಿ ಚಿಕ್ಕ ಉರಿಯಲ್ಲಿ ಕುದಿಸಿ. ನೀರು ಕುದಿಯುತ್ತಿದ್ದಂತೆಯೇ ನೀರಿನ ಬಣ್ಣವನ್ನು ಗಮನಿಸಿ. ಯಾವಾಗ ನೀರಿನಲ್ಲಿ ಮೆಂತೆ ಬಣ್ಣ ಬಿಡತೊಡಗುತ್ತದೆಯೋ ಆಗ ತಕ್ಷಣ ಉರಿ ಆರಿಸಿ ನೀರನ್ನು ಹಾಗೇ ತಣಿಯಲು ಬಿಡಿ. ಈ ನೀರಿನಿಂದ ಬಾಯಿಯನ್ನು ದಿನಕ್ಕೆ ಎರಡು ಬಾರಿ ಅಥವಾ ಮೂರು ಬಾರಿ ಮುಕ್ಕಳಿಸುತ್ತಿರಿ. ವಿಶೇಷವಾಗಿ ಮುಖ ಮೇಲೆತ್ತಿ ಗಂಟಲಿಗೆ ಗಳಗಳ ಮಾಡಿದರೆ ಗಂಟಲ ಬೇನೆ ಶೀಘ್ರವಾಗಿ ಕಡಿಮೆಯಾಗುತ್ತದೆ

 

* ಬೆಳ್ಳುಳ್ಳಿ: ಬೆಳ್ಳುಳ್ಳಿಯು ಒಂದು ಆಂಟಿ ಬ್ಯಾಕ್ಟೀರಿಯಾ ಅಂಶಗಳು ಇರುವ ಪದಾರ್ಥವಾಗಿದೆ. ಇದರಲ್ಲಿರುವ ಆಂಟಿಸೆಪ್ಟಿಕ್ ಗುಣಗಳು ಮತ್ತು ಔಷಧೀಯ ಗುಣಗಳು ಗಂಟಲು ನೋವಿಗೆ ಒಳ್ಳೆಯ ಆರಾಮವನ್ನು ನೀಡುತ್ತವೆ. ಅಲ್ಲದೆ ಇದು ಈ ನೋವನ್ನು ಬೇಗ ನಿವಾರಿಸುವ ಮನೆ ಮದ್ದು ಸಹ ಆಗಿದೆ. ಕಚ್ಛಾ ಬೆಳ್ಳುಳ್ಳಿಯನ್ನು ಪ್ರತಿದಿನ ಸೇವಿಸುವುದರಿಂದ ಅಲ್ಲಿಸಿನ್ ಎಂಬ ರಾಸಾಯನಿಕವು ಬಿಡುಗಡೆಯಾಗುತ್ತದೆ. ಇದು ಗಂಟಲಿನಲ್ಲಿ ಬೆಳೆಯುವ ಬ್ಯಾಕ್ಟೀರಿಯಾವನ್ನು ನಿವಾರಿಸಲು ಸಹಾಯ ಮಾಡಿ, ಗಂಟಲು ನೋವು ಬರದಂತೆ ತಡೆಯುತ್ತದೆ.ಬದಲಿಯಾಗಿ, ನೀವು ಬೆಳ್ಳುಳ್ಳಿ ಎಣ್ಣೆಯನ್ನು ಸಹ ಬಳಸಬಹುದು. ಒಂದು ಲೋಟ ನೀರಿಗೆ ನಾಲ್ಕನೇ ಒಂದು ಭಾಗ ಬೆಳ್ಳುಳ್ಳಿ ರಸವನ್ನು ಬೆರೆಸಿಕೊಳ್ಳಿ. ಇದನ್ನು ದಿನಕ್ಕೊಮ್ಮೆ ಬಾಯಿ ಮುಕ್ಕಳಿಸಲು ಬಳಸಿ. ಅಲ್ಲದೆ ಇದರ ಜೊತೆಗೆ ಆಹಾರದಲ್ಲಿ ದೊರೆಯುವ ಬೆಳ್ಳುಳ್ಳಿಯನ್ನು ಸಹ ಸೇವಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top