ಸಿನಿಮಾ

ಜಯನಗರದಲ್ಲಿ ಸರತಿ ಸಾಲಲ್ಲೇ ನಿಂತು ಮತದಾನ ಮಾಡಿದ ಚಿತ್ರರಂಗದ ಗಣ್ಯರು

ಬಿಜೆಪಿ ಪಕ್ಷದ ಅಭ್ಯರ್ಥಿ ಆಗಿದ್ದ ವಿಜಯ್ ಕುಮಾರ್ ಅಕಾಲಿಕ ನಿಧನದಿಂದ ಜಯನಗರ ವಿಧಾನ ಸಭಾ ಕ್ಷೇತ್ರದ ಚುನಾವಣೆ ಮುಂದೂಡಿಕೆಯಾಗಿತ್ತು. ಈ ಕ್ಷೇತ್ರದಲ್ಲಿ ಇಂದು(ಸೋಮವಾರ ಜೂನ್ 11 ) ಮತದಾನ ನಡೆಯುತ್ತಿದೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಿದ್ದು ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸುತ್ತಿದ್ದಾರೆ. ಈ ಮೂಲಕ ಚುನಾವಣಾ ಕಣ ರಂಗೇರಿದೆ. ಸಂಜೆ 6 ರ ವೆರೆಗೆ ಮತದಾನ ನಡೆಯಲಿದೆ.

 

 

ಜಯನಗರ ವಿಧಾಸಭಾ ಕ್ಷೇತ್ರದಲ್ಲಿ ವಾಸವಾಗಿರುವ ಸ್ಯಾಂಡಲ್ ವುಡ್ ನಟ ನಟಿಯರು ಮತದಾನ ಮಾಡುತ್ತಿದ್ದಾರೆ. ಜಯನಗರದ ಸುದರ್ಶನ ವಿದ್ಯಾಮಂದಿರದಲ್ಲಿ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಮತದಾನ ಮಾಡಿದ್ದಾರೆ. ಸಾಲಿನಲ್ಲಿ ಜನರ ಜೊತೆಗೆ ನಿಂತು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಜೆಪಿ ನಗರದ ಬೂತ್ ನಂಬರ್ 173ರಲ್ಲಿ ಕುಟುಂಬ ಸಮೇತ ನಟಿ ತಾರಾ ಮತ ಚಲಾವಣೆ ಮಾಡಿದ್ದಾರೆ. ಕ್ಲಾರೆನ್ಸ್ ಪಬ್ಲಿಕ್‌ ಸ್ಕೂಲ್‌‌‌ನಲ್ಲಿ ಮತಯಂತ್ರ ದೋಷ ಕಂಡು ಬಂದಿದ್ದು ಮುಖ್ಯಮಂತ್ರಿ ಚಂದ್ರು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿರಿಯ ಹಾಸ್ಯ ನಟ ಉಮೇಶಣ್ಣ ಜೆ.ಪಿ ನಗರದ 4ನೇ ರಸ್ತೆಯಲ್ಲಿ ಇರುವ ಕ್ಲಾರೆನ್ಸ್ ಪಬ್ಲಿಕ್ ಸ್ಕೂಲ್ ನಲ್ಲಿ ಮತದಾನ ಮಾಡಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top