fbpx
ಸಮಾಚಾರ

“ಅನುಕಂಪ ವರ್ಸಸ್ ಮೈತ್ರಿ ಸಾಮರ್ಥ್ಯ” ಜಯನಗರ ಕ್ಷೇತ್ರದ ವಿಜಯಮಾಲೆ ಯಾರಿಗೆ

ಬಿಜೆಪಿ ಪಕ್ಷದ ಅಭ್ಯರ್ಥಿ ಆಗಿದ್ದ ವಿಜಯ್ ಕುಮಾರ್ ಅಕಾಲಿಕ ನಿಧನದಿಂದ ಜಯನಗರ ವಿಧಾನ ಸಭಾ ಕ್ಷೇತ್ರದ ಚುನಾವಣೆ ಮುಂದೂಡಿಕೆಯಾಗಿತ್ತು. ಈ ಕ್ಷೇತ್ರದಲ್ಲಿ ಇಂದು(ಸೋಮವಾರ ಜೂನ್ 11 ) ಮತದಾನ ನಡೆಯುತ್ತಿದೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಿದ್ದು ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸುತ್ತಿದ್ದಾರೆ. ಈ ಮೂಲಕ ಚುನಾವಣಾ ಕಣ ರಂಗೇರಿದೆ. ಸಂಜೆ 6 ರ ವೆರೆಗೆ ಮತದಾನ ನಡೆಯಲಿದೆ.

 

 

ಬಿಜೆಪಿಯ ವಿಜಯ್ ಕುಮಾರ್ ಅವರ ನಿಧನದಿಂದ ಬಿಜೆಪಿಗೆ ಜಯನಗರ ಕ್ಷೇತ್ರ ಅನುಕಂಪದ ಆಧಾರದ ಮೇಲೆ ಗೆಲ್ಲುವ ನಿರೀಕ್ಷೆಯಲ್ಲಿದ್ದರೆ, ಕಾಂಗ್ರೆಸ್ ಹಾಗು ಜೆಡಿಎಸ್ ಒಗ್ಗಟ್ಟಾಗಿ ಸೌಮ್ಯ ರೆಡ್ಡಿಯವರನ್ನು ಕಣಕ್ಕೆ ಇಳಿಸಿದ್ದು ಸರ್ಕಾರಕ್ಕೆ ಈ ಕ್ಷೇತ್ರ ಪ್ರತಿಷ್ಠೆಯ ಗೆಲುವಿನ ಪ್ರಶ್ನೆಯಾಗಿದೆ. ಇದೇ ಬುಧವಾರ ಫಲಿತಾಂಶ ಹೊರಬೀಳಲಿದೆ.

ಜಯನಗರ ವಿಧಾನಸಭಾ ಮತಕ್ಷೇತ್ರದ ಚುನಾವಣೆ ವಿಶೇಷತೆಗಳು
ಒಟ್ಟು ಮತಗಟ್ಟೆಗಳು – 216
ಪಿಂಕ್ ಮತಗಟ್ಟೆಗಳು – 05
ಒಟ್ಟು ಮತದಾರರು – 2,03,184

ಪುರುಷ ಮತದಾರರು – 1.02,668
ಮಹಿಳಾ ಮತದಾರರು! -1,00,500
ಇತರೆ – 16

ಒಟ್ಟು ಅಭ್ಯರ್ಥಿಗಳು – 19
ಕಾಂಗ್ರೆಸ್ ಅಭ್ಯರ್ಥಿ – ಸೌಮ್ಯ ರೆಡ್ಡಿ
ಬಿಜೆಪಿ ಅಭ್ಯರ್ಥಿ – ಬಿ.ಎನ್ ಪ್ರಹ್ಲಾದ್

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top