ಹೆಚ್ಚಿನ

ನಾಳೆ ಜೂನ್ 12 ನೇ ತಾರೀಖು ಅಧಿಕ ಜ್ಯೇಷ್ಠ ಮಾಸದ ಚತುರ್ದಶಿ ಮತ್ತು ಮಾಸ ಶಿವರಾತ್ರಿ ಈ ದಿನ ಶಿವನನ್ನು ಹೇಗೆ ಪೂಜಿಸಿ್ದರೆ ನಿಮ್ಮ ಸಕಲ ಕೋರಿಕೆಗಳು ನೆರವೇರುತ್ತದೆ .

ನಾಳೆ ಜೂನ್ 12 ನೇ ತಾರೀಖು ಅಧಿಕ ಜ್ಯೇಷ್ಠ ಮಾಸದ ಚತುರ್ದಶಿ ಮತ್ತು ಮಾಸ ಶಿವರಾತ್ರಿ ಈ ದಿನ ಶಿವನನ್ನು ಹೇಗೆ ಪೂಜಿಸಿ್ದರೆ ನಿಮ್ಮ ಸಕಲ ಕೋರಿಕೆಗಳು ನೆರವೇರುತ್ತದೆ .

 

 

ಜೂನ್ ಹನ್ನೆರಡನೇ ತಾರೀಖು ತುಂಬಾ ವಿಶೇಷವಾದ ದಿನ . ಯಾಕೆಂದರೆ ಮೂರು ವರ್ಷಗಳಿಗೊಮ್ಮೆ ಬರುವ ಅಧಿಕ ಜ್ಯೇಷ್ಠ ಮಾಸದ ದಿನವಾಗಿದ್ದು ,ಇದರ ನಂತರದ ದಿನ 13ನೇ ತಾರೀಖು ಅಧಿಕ ಜ್ಯೇಷ್ಠ ಮಾಸದ ಕೊನೆಯ ದಿನವಾಗಿದ್ದು, ಅದೇ ಕೊನೆಯ ದಿನವೇ, ಅಧಿಕ ಜ್ಯೇಷ್ಠ ಮಾಸದ ಅಮಾವಾಸ್ಯೆಯ ದಿನವಾಗಿದೆ . ಈ ಅಮಾವಾಸ್ಯೆಯ ಹಿಂದಿನ ದಿನವಾದ ಜುನ್ 12 ನೇ ತಾರೀಖಿನಂದು ಈ ಸಮಯದಲ್ಲಿ ಈ ಕೆಲವು ಕೆಲಸಗಳನ್ನು ಮಾಡಿದರೆ ನಿಮ್ಮ ಏಳು ಜನ್ಮಗಳ ಪಾಪಗಳು ತೊಲಗಿ ಹೋಗಿ ಅದೃಷ್ಟವೂ ಒಲಿದು ಬರುತ್ತದೆ .

ಯಾಕೆಂದರೆ ಜೀವನದಲ್ಲಿ ಯಾವುದೇ ಬಗೆಯ ಕಷ್ಟಗಳು ಬಾರದೇ ಇರಲಿ. ಜೀವನವು ಸುಖಮಯವಾಗಿ ಸಾಗಲಿ, ಸರಳವಾಗಿ ಜೀವನವೂ ಮುಂದೆ ಸಾಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಹಣದ ಸಮಸ್ಯೆಯಾಗಲಿ, ಉದ್ಯೋಗ ಸಮಸ್ಯೆಯಾಗಲಿ, ಪ್ರಮೋಷನ್ , ವಿವಾಹ ಇನ್ನು ಇತ್ಯಾದಿಗಳನ್ನು ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ಜರುಗಿದರೆ ಅದೊಂದು ಥರ ಸುಖಮಯವಾದ ಜೀವನ ಎಂದು ಹೇಳಬಹುದು .

ಒಮ್ಮೊಮ್ಮೆ ಇಂತಹ ಆಸೆಗಳು, ಕೋರಿಕೆಗಳು ಈಡೇರದೆ ಇದ್ದಾಗ ಜೀವನದಲ್ಲಿ ಹತಾಶೆ, ನಿರಾಸೆ ಉಂಟಾಗುವುದು ಸಹಜವೇ . ಅಂತಹ ನಿರಾಸೆಗಳು ಉಂಟಾದಾಗ ನಾವು ಒಮ್ಮೊಮ್ಮೆ ಜೀವನದಲ್ಲಿ ಬೇಸರಗೊಂಡು ಕೂರುತ್ತೇವೆ.ಆದರೆ ಈ ರೀತಿ ಬೇಸರಗೊಂಡು ಎಲ್ಲೋ ಒಂದು ಕಡೆ ಯೋಚನೆ ಮಾಡಿ ಕುಳಿತುಕೊಳ್ಳುವ ಅವಶ್ಯಕತೆ ಇಲ್ಲ . ಯಾಕೆಂದರೆ ಜೂನ್ ಹನ್ನೆರಡನೇ ತಾರೀಖು, ಜ್ಯೇಷ್ಠ ಮಾಸದ ಕಟ್ಟ ಕಡೆಯ ಕೃಷ್ಣ ಅಂಗಾರಕ ಚತುರ್ಥಿ ಮತ್ತು ಇದೇ ದಿನ ಮಾಸ ಶಿವರಾತ್ರಿ ಕೂಡ ಇದೆ.

ಹೀಗಾಗಿ ನಿಮಗೆ ಎಂಥದ್ದೇ ಗಂಭೀರ ಸಮಸ್ಯೆ ಇದ್ದರೂ ಕೂಡ ನಿಮಗೆ ಪರಿಹಾರವಾಗುತ್ತದೆ. ಅಷ್ಟೇ ಅಲ್ಲದೆ ನಿಮ್ಮ ಜೀವನದಲ್ಲಿ ಸುಖ, ಸಂತೋಷ, ಸಂಪತ್ತು, ಸಮೃದ್ಧಿಯನ್ನು ಹೊಂದುವಂತೆ ಮಾಡುತ್ತದೆ. ಆದ್ದರಿಂದ ಜೂನ್ ಹನ್ನೆರಡು ಮಂಗಳವಾರ ಮತ್ತು ಕೃತ್ತಿಕಾ ನಕ್ಷತ್ರ ಇವೆರಡೂ ಕೂಡಿ ಬಂದಿರುವುದರಿಂದ, ಆ ದಿನದ ವೈಶಿಷ್ಟ್ಯತೆ ಇಮ್ಮಡಿಗೊಂಡಿದೆ. ಆ ದಿನ ಪರಮ ಪಿತನಾದ ಪರಮೇಶ್ವರನನ್ನು ಪೂಜಿಸಿ, ಪ್ರಾರ್ಥಿಸಿ ಅಭಿಷೇಕ ಮಾಡಿಸಿ ಜಪಿಸುವುದರಿಂದ ಸಕಲ ಇಷ್ಟಾರ್ಥಗಳು ಈಡೇರುತ್ತವೆ.

 

 

ಈ ದಿನ ನಾವು ಮಾಡಬೇಕಾಗಿರುವುದು ಏನೆಂದರೆ ಕೆಂಪು ಬಣ್ಣದ ವಸ್ತ್ರವನ್ನು ಧರಿಸಬೇಕು. ಅದರಲ್ಲೂ ಕಂಕಣ ಭಾಗ್ಯ, ವಿವಾಹ ಯೋಗ ಪ್ರಾಪ್ತಿಯಾಗಬೇಕು ಎಂದರೆ , ಕೆಂಪು ಬಣ್ಣದ ವಸ್ತ್ರಗಳನ್ನು ಧರಿಸಿ ,ಪರಮೇಶ್ವರನನ್ನು ಪರಮ ಭಕ್ತಿಯಿಂದ, ಕೆಂಪು ವರ್ಣದ ಪುಷ್ಪಗಳನ್ನು ಅರ್ಪಿಸಿ ಪೂಜಿಸಬೇಕು.
ಅಷ್ಟೇ ಅಲ್ಲದೆ ಆರ್ಥಿಕ ಬಿಕ್ಕಟ್ಟುಗಳು ದೂರವಾಗಬೇಕು ಎಂದರೆ, ಕೆಂಪು ವಸ್ತ್ರವನ್ನು ಆ ದಿನ ಸಾಧ್ಯವಾದಷ್ಟು ಧರಿಸಿ, ಅಭಿಷೇಕ ಪ್ರಿಯನಾದ ಪರಮೇಶ್ವರನಿಗೆ ಕೆಂಪು ಪುಷ್ಪಗಳನ್ನು ಭಕ್ತಿ, ಶ್ರದ್ಧೆಯಿಂದ ಅರ್ಪಿಸಿ,ಪೂಜಿಸಿ. ಶಿವಪಂಚಾಕ್ಷರಿ ಮಂತ್ರವಾದ “ಓಂ ನಮಃ ಶಿವಾಯ” ಎಂಬ ಈ ಮಂತ್ರವನ್ನು ಜಪಿಸಿದರೆ ಮಹಾ ಭಾಗ್ಯವೂ ಒದಗಿ ಬರುತ್ತದೆ. ಹಣದ ಸಮಸ್ಯೆಯೂ ಕೂಡ ತೊಲಗಿ ಹೋಗುತ್ತದೆ. ಅಷ್ಟೇ ಅಲ್ಲದೆ ಶುಭಫಲಗಳು ಕೂಡ ನಿಮಗೆ ಪ್ರಾಪ್ತಿಯಾಗುತ್ತವೆ.

 

 

ಯಾಕೆಂದರೆ ಇಂತಹ ಒಂದು ಸಂಯೋಗವಿರುವ ಈ ಒಳ್ಳೆಯ ದಿನ ವರ್ಷಕ್ಕೆ ಒಂದು ಬಾರಿ ಮಾತ್ರವೇ ಬರುತ್ತದೆ.ಆದರೆ 3 ವರ್ಷಕ್ಕೆ ಒಮ್ಮೆ ಬಂದಿರುವ ಈ ಅಧಿಕ ಮಾಸದಲ್ಲಿ ಬಂದಿರುವುದು ಮತ್ತಷ್ಟು ವಿಶೇಷವೇ ಸರಿ. ಇಂತಹ ಸುದಿನವನ್ನು ಪೂಜೆ,ಪ್ರಾರ್ಥನೆಯನ್ನು ಆ ಶಿವನಿಗೆ ಸಲ್ಲಿಸಿ,ಈ ವಿಧವಾದ ನಿಯಮವನ್ನು ಪಾಲಿಸುತ್ತಾ, ನಮ್ಮ ಬೇಡಿಕೆಗಳನ್ನು ಮತ್ತು ನಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಬಹುದು.
ನಾವು ಮಾಡಬೇಕಾಗಿರುವುದು ಇಷ್ಟೇ. ಈ ದಿನ ಬೆಳಗ್ಗೆ ಬೇಗನೆ ಎದ್ದು, ಸ್ನಾನಾದಿಗಳನ್ನು ಮುಗಿಸಿಕೊಂಡು ಕೆಂಪು ವಸ್ತ್ರವನ್ನು ಧರಿಸಿ ,ಕೆಂಪು ಪುಷ್ಪಗಳನ್ನು ಪರಮೇಶ್ವರನನ್ನು ಭಕ್ತಿ, ಶ್ರದ್ಧೆಯಿಂದ ಪೂಜಿಸಿದರೆ ಸಾಕು. ಅದರಿಂದ ಸಂಪೂರ್ಣ ಫಲವು ನಮಗೆ ಲಭಿಸುತ್ತದೆ .ಈ ರೀತಿಯಾಗಿ ಜೂನ್ ಹನ್ನೆರಡು ನೇ ತಾರೀಖಿನಂದು ಪರಮೇಶ್ವರನನ್ನು ಭಕ್ತಿ ,ಶ್ರದ್ಧೆ, ನಂಬಿಕೆ ಮತ್ತು ಏಕಾಗ್ರತೆಯಿಂದ ಪೂಜಿಸಿದರೆ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ .

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top