ಆರೋಗ್ಯ

ಹಾಲಿನಲ್ಲಿ ಬೆಳ್ಳುಳ್ಳಿಯನ್ನು ಬೇಯಿಸಿಕೊಂಡು ಸೇವಿಸಿದರೆ ಯಾವ್ಯಾವ ಉಪಯೋಗವಾಗುತ್ತೆ ಗೊತ್ತಾ?

ನಮ್ಮ ದಿನನಿತ್ಯದ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಉಪಯೋಗಿಸಿತ್ತೇವೆ.ಇದರಲ್ಲಿ ನಮ್ಮ ದೇಹಕ್ಕೆ ಪ್ರಯೋಜವಾಗುವ ಅನೇಕ ಔಷಧಿ ಗುಣಗಳಿವೆ. ಹಾಲನ್ನೂ ಸಹ ನಾವು ಪ್ರತಿದಿನ ಉಪಯೋಗಿಸುತ್ತೇವೆ. ಹಾಲು ಸಂಪೂರ್ಣ ಪೌಷ್ಟಿಕ ಆಹಾರ ಎಂದು ಹೇಳುತ್ತಾರೆ. ಆದರೆ ಬೆಳ್ಳುಳ್ಳಿ ಎಸಳನ್ನು ಜಜ್ಜಿ ಹಾಲಿನಲ್ಲಿ ಹಾಕಿ ಕಾಯಿಸಿಕೊಂಡು ಕುಡಿಯುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಲಾಗುತ್ತದೆ..ಅವು ಯಾವುವೆಂದು ಇಲ್ಲಿ ತಿಳಿದುಕೊಳ್ಳಿ.

 

1.ಮೂಳೆಗಳು ಬಲಿಷ್ಠವಾಗುತ್ತವೆ:

ಬೆಳ್ಳುಳ್ಳಿಯ ಎಸಳನ್ನು ಹಾಲಿಗೆ ಹಾಕಿ ಕಾಯಿಸಿ ಕುಡಿಯುದರಿಂದ ಮನುಷ್ಯನ ದೇಹದ ಮೂಳೆಗಳು ದೃಢ ಮತ್ತು ಬಲಿಷ್ಠವಾಗುತ್ತವೆ.ಮೈಮೂಳೆ ಮುರಿತಕ್ಕೆ ಒಳಗಾಗಿರುವ ರೋಗಿಗಳಿಗೆ ಇದನ್ನು ಕೊಡುತ್ತಿದ್ದಾರೆ ಮೂಳೆಯು ಬಹುಬೇಗ ಕೂಡಿಕೊಳ್ಳುತ್ತದೆ.

 

2.ಚರ್ಮ ಕಾಯಿಲೆಯ ನಿರ್ಮೂಲನೆ:

ಬೆಳ್ಳುಳ್ಳಿಯನ್ನು ಹಾಲಿಗೆ ಹಾಕಿ ಕಾಯಿಸಿ ಸೇವಿಸುವುದರಿಂದ ಚರ್ಮಕ್ಕೆ ಸಂಭಂದಿಸಿದ ಅಲರ್ಜಿ, ಕಜ್ಜಿ ಮುಂತಾದ ಕಾಯಿಲೆಗಳು ಗುಣಮುಖವಾಗುತ್ತವೆ.ಚರ್ಮದ ಸೌಂದರ್ಯವು ಹೆಚ್ಚುತ್ತದೆ ಅಲ್ಲದೆ ಮೊಡವೆಗುಳ್ಳೆಗಳೂ ಸಹ ಬರುವುದಿಲ್ಲ

 

3.ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ.

ಹಾಲಿನಲ್ಲಿ ಬೆಳ್ಳುಳ್ಳಿ ಎಸಳನ್ನು ಕುದಿಸಿ ಕುಡಿಯುವುದರಿಂದ ದೇಹದಲ್ಲಿನ ಜೀರ್ಣ ಕ್ರಿಯೆಯು ಸರಾಗವಾಗಿ ನಡೆಯುತ್ತದೆ

 

4.ತೂಕ ಇಳಿಸಿಕೊಳ್ಳಲು:

 

 

ಹಾಲಿನಲ್ಲಿ ಬೆಳ್ಳುಳ್ಳಿ ಎಸಳನ್ನು ಕುದಿಸಿ ಕುಡಿಯುವುದರಿಂದ ದೇಹದಲ್ಲಿನ ಅನಾವಶ್ಯಕ ಬೊಜ್ಜುಕರಗಿ ದೇಹದ ತೂಕವನ್ನು ಇಳಿಸುತ್ತದೆ.

 

5.ಗಾಯಗಳನ್ನು ಬೇಗ ವಾಸಿಮಾಡುತ್ತದೆ:

ದೇಹದ ಮೇಲೆ ಗಾಯಗಳಾಗಿರುವವರು ಹಾಲಿನಲ್ಲಿ ಬೆಳ್ಳುಳ್ಳಿ ಎಸಳನ್ನು ಕುದಿಸಿ ಕುಡಿಯುವುದರಿಂದ ಅವರ ಗಾಯಗಳು ಬಹುಬೇಗ ವಾಸಿಯಾಗುತ್ತವೆ.

 

6.ಶ್ವಾಸಕೋಶ ಕಾಯಿಲೆಗಳಿಂದ ಬಳಲುತ್ತಿರುವವರಿಗೂ ಇದು ರಾಮಬಾಣ. ಅಸ್ತಮಾ ಮತ್ತು ನ್ಯುಮೋನಿಯ ರೋಗಿಗಳಿಗೂ ಇದು ಔಷಧಿಯಾಗಿ ಕೆಲಸ ಮಾಡುತ್ತದೆ.

 

7.ಜಂತು ಹುಳುಗಳ ನಿವಾರಣೆ:

ಹೊಟ್ಟೆಯಲ್ಲಿ ಜಂತುಹುಳುಗಳಾಗಿ ಸಂಕಟ ಪಡುತ್ತಿರುವವರು ಹಾಲಿನಲ್ಲಿ ಬೆಳ್ಳುಳ್ಳಿ ಎಸಳನ್ನು ಕುದಿಸಿ ಕುಡಿಯುವುದರಿಂದ ಈ ಸಮಸ್ಯೆಯನ್ನು ಹೋಡಿಸಬಹುದು.

 

8.ರಕ್ತವನ್ನು ಶುದ್ದಿಗೊಳಿಸುತ್ತದೆ.

ಹಾಲಿನಲ್ಲಿ ಬೆಳ್ಳುಳ್ಳಿ ಎಸಳನ್ನು ಕುದಿಸಿ ಕುಡಿಯುವುದರಿಂದ ದೇಹದ ರಕ್ತವು ಶುದ್ದಿಗೊಂಡು ರಕ್ತ ಪರಿಚಲನೆಯು ಉತ್ತಮವಾಗಿ ನಡೆಯುವಂತೆ ಸಹಕಾರಿಯಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top