ಆರೋಗ್ಯ

ಆಹಾರದಲ್ಲಿ ಆಲೂಗೆಡ್ಡೆಯನ್ನು ಬಳಸುವುದರಿಂದ ಈ 8 ಲಾಭಗಳನ್ನ ಪಡ್ಕೊಬಹುದು

ಆಹಾರದಲ್ಲಿ ಆಲೂಗೆಡ್ಡೆಯನ್ನು ಬಳಸುವುದರಿಂದ ಆಗುವ ಉಪಯೋಗಗಳು..

 

 

ಆಲೂಗೆಡ್ಡೆಯನ್ನು ಸಾಮಾನ್ಯವಾಗಿ ಎಲ್ಲರು ಆಹಾರದಲ್ಲಿ ಸೇವಿಸುತ್ತಾರೆ.ಇನ್ನು ಕುರುಕುಲು ತಿಂಡಿಯಲ್ಲಿ ಆಲೂಗೆಡ್ಡೆಯನ್ನೇ ಹೆಚ್ಚಾಗಿ ಬಳಸುತ್ತಾರೆ. ಆಲೂಗಡ್ಡೆಯನ್ನು ಆಹಾರದಲ್ಲಿ ಸೇವಿಸುವುದರ ಬಗ್ಗೆ ಕೆಲವರು ಆಲೂಗಡ್ಡೆ ಸೇವನೆಯಿಂದ ವಾತ ಹೆಚ್ಚಾಗುತ್ತದೆ, ದೇಹಕ್ಕೆ ಅದು ಒಳ್ಳೆಯದಲ್ಲ ಎನ್ನುತ್ತಾರೆ. ಆದರೆ ಆಲೂಗೆಡ್ಡೆಯಲ್ಲಿ ಮನುಷ್ಯನಿಗೆ ಬೇಕಾಗಿರುವ ಅನೇಕ ಜೀವಸತ್ವಗಳು ಅಡಗಿವೆ.

*ರೋಗ ನಿರೋಧಕ:

ಆಲೂಗೆಡ್ಡೆಯು ಮನುಷ್ಯನ ದೇಹದಲ್ಲಿ ರೋಗ ನಿರೋಧಕವಾಗಿ ಕೆಲಸ ಮಾಡಿತ್ತದೆ. ಇದರಲ್ಲಿ ಇರುವ ವಿಟಮಿನ್ ‘ಸಿ’ಯು ರೋಗಗಳು ಬರದಂತೆ ರಕ್ಷಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

*ಆಲೂಗೆಡ್ಡೆಯು ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಪೊಟಾಷಿಯಂನನ್ನು ಹೇರಳವಾಗಿ ಪೂರೈಕೆ ಮಾಡುತ್ತದೆ.

*ಹೃದಯ ನಾಳದ ಸಮಸ್ಯೆಯಲ್ಲಿ ಬಳಲುತ್ತಿರುವವರು ಆಲೂಗೆಡ್ಡೆಯನ್ನು ಬಳಸಬೇಕು ಏಕೆಂದರೆ ಇದರಲ್ಲಿ ತುಂಬ ಕಡಿಮೆ ಪ್ರಮಾಣದಲ್ಲಿ ಕೊಬ್ಬಿನ ಅಂಶ ಇರುತ್ತದೆ. ಇದು ಹೃದಯದ ನಾಳಗಳಿಗೆ ಹಾನಿಯನ್ನುಂಟುಮಾಡುವುದಿಲ್ಲ.

*ಹಲ್ಲು ನೋವು ಇರುವವರು ಆಲೂಗೆಡ್ಡೆಯನ್ನು ಬಳಸಬಹುದು.ಇದರಲ್ಲಿರುವ ಫಾಸ್ಫರಸ್(ಗಂಧಕಾಂಶವು) ಹಲ್ಲು ನೋವಿಗೆ ಔಷಧಿಯಾಗಿ ಕೆಲಸ ಮಾಡುತ್ತದೆ

*ಆಲೂಗಡ್ಡೆಯಲ್ಲಿ ಫೈಬರ್ ಅಂಶವು ಹೆಚ್ಚಾಗಿರುವುದರಿಂದ ಇದು ಮಲಬದ್ಧತೆಯನ್ನು ನಿಯಂತ್ರಿಸುತ್ತದೆ ಹಾಗೂ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

*ಆಲೂಗೆಡ್ಡೆಯಲ್ಲಿರುವ ವಿಟಮಿನ್ B6 ಜೀವಸತ್ವವು ಮೆದುಳಿನ ಕ್ಷಮತೆಯನ್ನು ಹೆಚ್ಚಿಸಿ ನೆನೆಪಿನ ಶಕ್ತಿಯನ್ನು ಹೆಚ್ಚಿಗೆ ಮಾಡುತ್ತದೆ.

*ಆಲೂಗೆಡ್ಡೆಗೆ ಸುಟ್ಟ ಗಾಯವನ್ನು ವಾಸಿ ಮಾಡುವ ಶಕ್ತಿ ಇದೆ. ಸುಟ್ಟ ಗಾಯದಮೇಲೆ ಆಲೂಗೆಡ್ಡೆಯ ಒಂದು ಪೀಸ್ ಅನ್ನು ಇಟ್ಟರೆ ಗಾಯ ಉರಿಯುದಿಲ್ಲ ಮಾತು ಬೇಗ ವಾಸಿಯಾಗುತ್ತದೆ.

*ಆಲೂಗಡ್ಡೆಗಳು ಕಡಿಮೆ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಹಾಯ ಮಾಡುತ್ತದೆ. ಇದರಲ್ಲಿರುವ ಪೊಟಾಶಿಯಂ ಅಂಶವು ಕಡಿಮೆ ರಕ್ತದೊತ್ತಡವನ್ನು ನಿವಾರಣೆ ಮಾಡಲು ಸಹಾಯಮಾಡುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top