ಮನೋರಂಜನೆ

ಜನತೆಗೆ ಪವರ್‌ಫುಲ್ ಸಂದೇಶ ರವಾನಿಸುತ್ತಿದ್ದಾರೆ ಪುನೀತ್ ರಾಜಕುಮಾರ್.

ಸಿನಿಮಾ ತಾರೆಯರು ಕೇವಲ ಸಿನಿಮಾದಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸುವುದಲ್ಲದೇ ಆಗಾಗ್ಗೆ ಹಲವಾರು ರೀತಿಯ ಸಾಮಾಜಿಕ ಕಳಕಳಿಯ ಕೆಲಸಗಳನ್ನು ಕೈಗೊಳ್ಳುತ್ತಿರುತ್ತಾರೆ. ಅದೇ ರೀತಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೂಡ ಸಮಾಜ ಮುಖಿ ಕೆಲಸಗಳಲ್ಲೂ ಸದಾ ಮುಂದಿರುತ್ತಾರೆ.ಈ ಹಿಂದೆ ನೇತ್ರದಾನ, ಶಿಕ್ಷಣ ಸೇರಿದಂತೆ ಅನೇಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಲ್ಲಿ ಸರ್ಕಾರದ ಜೊತೆ ಕಾಣಿಸಿಕೊಂಡಿದ್ದ ಪುನೀತ್ ಇದೀಗ ಮತ್ತೊಮ್ಮೆ ಅದೇ ರೀತಿಯ ಕೆಲಸವೊಂದಕ್ಕೆ ಕೈ ಹಾಕಿದ್ದಾರೆ.

 

 

ರಸ್ತೆ ಅಪಘಾತಕ್ಕೀಡಾದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರೆ ತನಿಖೆಯ ಹೆಸರಿನಲ್ಲಿ ಪೊಲೀಸರಿಂದ ಸಮಸ್ಯೆ ಆಗೋಲ್ಲ ಎಂಬ ಅರಿವು ಮೂಡಿಸುವ ಉದ್ದೇಶದಿಂದ ಬಳ್ಳಾರಿ ಜಿಲ್ಲೆ ತೋರಣಗಲ್ಲು ಠಾಣೆಯ ಸಬ್ ಇನ್​ಸ್ಪೆಕ್ಟರ್ ಮೊಹಮದ್ ರಫಿ ಅವರು ಸಾಮಾಜಿಕ ಜಾಲತಾಣದಲ್ಲಿ “ಬಿ ಎ ಗುಡ್ ಸಮರಿಟಾನ್ ಲಾ” ಎಂಬ ಜಾಗೃತಿ ಆಂದೋಲನ ಶುರುಮಾಡಿದ್ದಾರೆ. ಈ ಆಂದೋಲನಕ್ಕೆ ಈಗಾಗಲೇ ಕನ್ನಡ ಚಿತ್ರರಂಗದ ಅನೇಕ ಖ್ಯಾತನಾಮರು ಸಾಥ್ ನೀಡಿದ್ದಾರೆ. ಯಶ್, ರಾಧಿಕಾ ಪಂಡಿತ್, ದಿಗಂತ್, ಐಂದ್ರಿತಾ ರೇ, ಚಿಕ್ಕಣ್ಣ, ನಿರ್ದೇಶಕ ಪ್ರೇಮ್ ಸೇರಿದಂತೆ ಸಾಕಷ್ಟು ಮಂದಿ ವಿಡಿಯೋ ಬೈಟ್ ನೀಡುವ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಇದೀಗ ಈ ಆಂದೋಲನಕ್ಕೆ ಪುನೀತ್ ರಾಜ್​ಕುಮಾರ್ ಕೂಡ ಸಾಥ್ ನೀಡಿದ್ದು ವಿಡಿಯೋ ಬಿಟ್ ಮೂಲಕ ಅರಿವು ಮೂಡಿಸಿದ್ದಾರೆ . ‘ನಾವು ರಸ್ತೆಯಲ್ಲಿ ಪ್ರಯಾಣ ಮಾಡುವಾಗ ನಮ್ಮ ಹಿಂದೆ ಯಾವುದೇ ಆಂಬುಲೆನ್ಸ್ ಬಂದರೆ ಅದಕ್ಕೆ ದಾರಿಬಿಟ್ಟುಕೊಡುವುದು ನಮ್ಮ ಕರ್ತವ್ಯ. ನಾವು ಅದಕ್ಕೆ ಅಡ್ಡ ಬಂದರೆ ಅದರ ಒಳಗಿರುವ ರೋಗಿಗೆ ಕಷ್ಟವಾಗುತ್ತದೆ, ಅವರ ಜೀವವೂ ಹೋಗಬಹುದು.. ರಸ್ತೆ ಅಪಘಾತ ನಡೆದ ಸ್ಥಳದಲ್ಲಿ ಯಾರೇ ಗಾಯಾಳು ಇದ್ದರೂ ಅವರನ್ನು ಧೈರ್ಯವಾಗಿ ಆಸ್ಪತ್ರೆಗೆ ಸಾಗಿಸಬಹುದು. ಇದರಿಂದ ನಿಮಗೆ ಪೊಲೀಸ್ ತನಿಖೆಯ ಹೆಸರಿನಲ್ಲಿ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಇದು ನನ್ನನ್ನೂ ಸೇರಿದಂತೆ ನಾಗರಿಕರಾದ ನಾವೆಲ್ಲರೂ ಮಾಡಬೇಕಾದ ಧರ್ಮ’ ಎಂದು ಪವರ್ ಸ್ಟಾರ್ ಹೇಳಿದ್ದಾರೆ.

ವಿಡಿಯೋ ನೋಡಿ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top