ಸಿನಿಮಾ

ಬಾಲಿವುಡ್ ನಟಿಯನ್ನು ಮಂಚಕ್ಕೆ ಕರೆದ ಕಿಡಿಗೇಡಿ.

ಚಿತ್ರದಲ್ಲಿ ನಟಿಸಲು ಅವಕಾಶ ಕೊಡುವ ಆಮಿಷವೊಡ್ಡಿ ಯುವನಟಿಯರನ್ನು ಮಂಚಕ್ಕೆ ಕರೆಯುವ ಕಾಯಿಲೆ ಎಲ್ಲ ಸಿನಿಮಾ ರಂಗದಲ್ಲಿ ಸಾಂಕ್ರಾಮಿಕವಾಗಿ ಹರಡಿಕೊಂಡಂತಿದೆ.. ಇತ್ತೀಚಿನ ದಿನಗಳಲ್ಲಿ ದೇಶವ್ಯಾಪಿ ಭಾರಿ ಚರ್ಚೆಯನ್ನು ಹುಟ್ಟುಹಾಕಿರುವ ಇಂತಹ ಅನಿಷ್ಟ ಪಿಡುಗಿನ ವಿರುದ್ಧ ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ಭಾಷೆಯ ಪ್ರಸಿದ್ಧ ಯುವ ನಟಿಯರನೇಕರು ತಾವು ಅನುಭವಿಸಿದ್ದ ಕಾಸ್ಟಿಂಗ್ ಕೌಚ್ ಮನೋ ವ್ಯಾಕುಲವನ್ನು ಸಾಂದರ್ಭಿಕವಾಗಿ ಬಿಚ್ಚಿಡುತ್ತಿದ್ದಾರೆ.

 

ಬಾಲಿವುಡ್ ನಟಿ ಸೋಫಿಯಾ ಹಯಾತ್‍ಗೆ ವ್ಯಕ್ತಿಯೊಬ್ಬ ಆಕೆಯ ರೇಟ್ ಕೇಳಿದ್ದಾನೆ. ಇದ್ದಕ್ಕೆ ಆಕ್ರೋಶಗೊಂಡಿರುವ ಸೋಫಿಯಾ ಆತನಿಗೆ ಖಡಕ್ ಉತ್ತರವನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.

 

ನಟಿ ಸೋಫಿಯಾ ಹಯಾತ್‍ ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಆಗಾಗ ಚಿತ್ರ, ವಿಡಿಯೋವನ್ನು ಹಾಕುತ್ತಿರುತ್ತಾರೆ. ಕೆಲವು ದಿನಗಳ ಹಿಂದೆ ಸೋಫಿಯಾ ಇನ್‍ಸ್ಟಾಗ್ರಾಂನಲ್ಲಿ ಫೋಟೋ ಹಾಕಿದ್ದಾಗ ವ್ಯಕ್ತಿಯೋರ್ವ ನಟಿಗೆ ಮೆಸೇಜ್ ಮಾಡಿ ಒಂದು ರಾತ್ರಿಗೆ ನೀನು ಎಷ್ಟು ಹಣ ಪಡೆಯುತ್ತೀಯ? ಎಂದು ಕೇಳಿದ್ದಾನೆ.

 

 

ವ್ಯಕ್ತಿಯ ಈ ಮೆಸೇಜ್ ನೋಡಿದ ಸೋಫಿಯಾ ಆತನ ಮೆಸೇಜ್‍ಗೆ ಉತ್ತರಿಸಿ. “ಮೊದಲು ನೀನು ನಿನ್ನ ತಾಯಿ ಹತ್ತಿರ, ನಂತರ ನಿನ್ನ ಸಹೋದರಿ ಬಳಿಕ ನಿನ್ನ ಪತ್ನಿ ಹತ್ತಿರ ಅವರ ರೇಟ್ ಕೇಳು ಎಂದು ಖಡಕ್ ಉತ್ತರ ನೀಡಿ ಆ ವ್ಯಕ್ತಿ ಮಾಡಿದ ಮೆಸೇಜ್‍ನ ಸ್ಕ್ರೀನ್‍ಶಾಟ್ ತೆಗೆದು ತಮ್ಮ ಖಾತೆಯಲ್ಲಿ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top