ಹೆಚ್ಚಿನ

ಇಂದು ಅಧಿಕ ಜ್ಯೇಷ್ಠ ಮಾಸದ ಕೊನೆ ಸೋಮವಾರ ಸೋಮ ಪ್ರದೋಷ ಆಚರಣೆ ಹೇಗೆ ಮಾಡ್ಬೇಕು ? ಇದರ ನಿಯಮಗಳು ಏನು ? ಇದರಿಂದ ಸಿಗುವ ಫಲ ಏನು ಅಂತ ತಿಳ್ಕೊಳ್ಳಿ .

ಇಂದು ಅಧಿಕ ಜ್ಯೇಷ್ಠ ಮಾಸದ ಕೊನೆ ಸೋಮವಾರ ಸೋಮ ಪ್ರದೋಷ ಆಚರಣೆ ಹೇಗೆ ಮಾಡ್ಬೇಕು ? ಇದರ ನಿಯಮಗಳು ಏನು ? ಇದರಿಂದ ಸಿಗುವ ಫಲ ಏನು ಅಂತ ತಿಳ್ಕೊಳ್ಳಿ .

ಇಂದು ಜೂನ್ 11 ನೇ ತಾರೀಖು, ಸೋಮವಾರದ ದಿನ ,ಸೂರ್ಯಾಸ್ತದ ನಂತರ ಬರುವ ಮೂರು ಗಂಟೆಗಳ ಕಾಲದ ಸಮಯವನ್ನು ಪ್ರದೋಷ ಕಾಲ ಎಂದು ಕರೆಯಲಾಗುತ್ತದೆ. ಅಂತಹ ಪ್ರದೋಷವು ನಾಳೆ ಸೋಮವಾರದ ಅಧಿಕ ಮಾಸದ ದಿನ ಬಂದಿರುವುದು ತುಂಬಾ ವಿಶೇಷವಾಗಿದೆ.

ಅಧಿಕ ಮಾಸದಲ್ಲಿ ನಾವು ಯಾವುದೇ ಪೂಜೆ, ಯಜ್ಞ, ಯಾಗಾದಿಗಳನ್ನು, ವ್ರತಗಳನ್ನು ಮಾಡಿದಾಗ ಅಧಿಕಸ್ಯ ಅಧಿಕ ಫಲ ದೊರೆಯುತ್ತದೆ . ಅದರಲ್ಲೂ ನಮ್ಮ ಅದೃಷ್ಟ ಏನೆಂದರೆ ಇಂದು ಸೋಮವಾರ ಕೊನೆ ಸೋಮವಾರ .ಸೋಮ ಪ್ರದೋಷದ ದಿನವಾಗಿದೆ .

 

 

ಈ ಸೋಮ ಪ್ರದೇಶವನ್ನು ಯಾರು ವ್ಯವಸ್ಥಿತವಾಗಿ ಆಚರಣೆ ಮಾಡುತ್ತಾರೋ ?ಅವರಿಗೆ ಶಿವನ ಅನುಗ್ರಹ ಪ್ರಾಪ್ತಿಯಾಗಲಿದೆ. ಅದಕ್ಕೆ ನಮ್ಮ ಹಿರಿಯರು ಹೇಳಿದ್ದಾರೆ, ಶಿವನು ಕಣ್ಣು ಬಿಡಬೇಕು . ಶಿವನು ಕೊಟ್ಟು ನೋಡುತ್ತಾನೆ , ಎಷ್ಟು ಕೊಡುತ್ತಾನೋ ಅಷ್ಟು ಕಿತ್ತುಕೊಂಡು ಹೋಗುತ್ತಾನೆ. ಶಿವ ಕೊಟ್ಟಾಗ ಅಹಂಕಾರ ಪಡಬಾರದು.ಶಿವ ಎಲ್ಲವನ್ನು ತೂಕ ಹಾಕಿ ಕೊಟ್ಟದನ್ನು ಕಿತ್ತು ಕೊಂಡು ಬಿಡುತ್ತಾನೆ . ಆದ್ದರಿಂದ ಅದನ್ನು ವ್ಯವಸ್ಥಿತವಾಗಿ ಉಪಯೋಗಿಸಿಕೊಳ್ಳಬೇಕು.

ಬಹಳಷ್ಟು ಜನ ವಿದ್ಯೆ ಇಲ್ಲದೆ, ಮಕ್ಕಳು ಸರಿಯಾಗಿ ಓದುತ್ತಿಲ್ಲ ಎಂದು ಹೇಳುತ್ತೀರ. ಆದರೆ ಅದಕ್ಕೆ ಗುರುವಿನ ಅನುಗ್ರಹ ಇದಕ್ಕೆ ಬೇಕು. ಗುರುವಿಗೆ ಅಧಿದೇವತೆ ಯಾರು ? ಶಿವ .ಶಿವ ಹೇಳಿದ ಹಾಗೆ ಬೃಹಸ್ಪತಿ ಕೇಳುತ್ತಾನೆ. ಈ ಸೋಮ ಪ್ರದೋಷ ಕಾಲದಲ್ಲಿ ಯಾರೂ ಶಿವನ ರುದ್ರಾಭಿಷೇಕದಲ್ಲಿ ಭಾಗಿಯಾಗುತ್ತೀರೋ .

ನಿಮ್ಮ ಹತ್ತಿರದಲ್ಲಿ ಇರುವ ಶಿವ ದೇವಾಲಯಕ್ಕೆ ಹೋಗಿ, ನಿಮ್ಮ ಕೈಲಾದ ಸೇವೆ, ಹಾಲು, ಮೊಸರು, ಪಂಚಾಮೃತ ಮತ್ತು ಅಭಿಷೇಕ, ಸಾಮಗ್ರಿಗಳು ಅಥವಾ ಕಡೇ ಪಕ್ಷ ಒಂದು ಬಿಂದಿಗೆ ಮಡಿ ನೀರು, ಜೊತೆಗೆ ಸ್ವಲ್ಪ ಬಿಲ್ವ ಪತ್ರೆಯನ್ನಾದರೂ, ದೇವಸ್ಥಾನಕ್ಕೆ ಕೊಟ್ಟು ಭಕ್ತಿಯಿಂದ ಶಿವನನ್ನು ಆರಾಧಿಸಿ.ಆಗ ನಮ್ಮಲ್ಲಿ ಇರುವ ಕಷ್ಟ ಕಾರ್ಪಣ್ಯಗಳನ್ನು ನಿವಾರಣೆ ಮಾಡುವ ದುರ್ಬುದ್ಧಿಯನ್ನು ಹೋಗಲಾಡಿಸುವ ಸದ್ಬುದ್ಧಿಯನ್ನು ಅನುಗ್ರಹಿಸು ಎಂದು ಪ್ರಾರ್ಥನೆಯನ್ನು ಮಾಡಿ , ಯಾರು ದಶ ಪ್ರದಕ್ಷಿಣಾ ನಮಸ್ಕಾರವನ್ನು ಮಾಡಿ, ನಂದಿಯ ಸಮೇತ ಪರಮೇಶ್ವರನಿಗೆ ದೀರ್ಘದಂಡ ನಮಸ್ಕಾರವನ್ನು ಮಾಡುತ್ತಾರೋ, ಅವರಿಗೆ ವಿದ್ಯೆ ,ಬುದ್ಧಿ ಎಲ್ಲವೂ ಪ್ರಾಪ್ತಿಯಾಗುತ್ತದೆ.

 

 

ಇಂತಹ ಒಂದು ಸಮಯವನ್ನು ಸದುಪಯೋಗ ಪಡಿಸಿಕೊಳ್ಳಿ ಎಲ್ಲರಿಗೂ ಕೂಡ ಆ ಪರಮೇಶ್ವರನ ಅನುಗ್ರಹ ಪ್ರಾಪ್ತಿಯಾಗುತ್ತದೆ . ಇರುವ ಕಷ್ಟ ಸಮಸ್ಯೆಗಳೆಲ್ಲವೂ ಸಹ ನಿವಾರಣೆಯಾಗುತ್ತದೆ .

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top