ಸಮಾಚಾರ

ಬಯಲಾಯ್ತು ವಿರಾಟ್ ಕೊಹ್ಲಿ ಗಡ್ಡದ ಗಿಮಿಕ್ ಹಿಂದಿನ ರಹಸ್ಯ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ವಿರಾಟ್ ಕೊಹ್ಲಿ ಮುಖದಲ್ಲಿ ಸದಾ ಗಡ್ಡ ಬೆಳೆಸಿಕೊಂಡಿರುತ್ತಾರೆ. ಹಿಂದೊಮ್ಮೆ ತಮ್ಮ ಪತ್ನಿ ಅನುಷ್ಕಾ ಶರ್ಮಾಗಾಗಿ ಗಡ್ಡ ತೆಗೆಯುವುದಿಲ್ಲ. ಆಕೆಗೆ ಗಡ್ಡವೆಂದರೆ ಇಷ್ಟ ಎಂದು ಕೊಹ್ಲಿ ಹೇಳಿಕೊಂಡಿದ್ದರು. ಈಗ ವಿರಾಟ್ ಕೊಹ್ಲಿ ಗದ್ದಕ್ಕೆ ಇನ್ಸೂರೆನ್ಸ್ ಮಾಡಿಸಿದ್ರ ಎಂಬ ಪ್ರಶ್ನೆಗಳು ಹರಿದಾಡುತ್ತಿದ್ದವು. ಸ್ವತಃ ಕೊಹ್ಲಿಯೇ ಈ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತನ್ನ ಗಡ್ಡದ ಇನ್ಸೂರೆನ್ಸ್ ಮಾಡಿಸುತ್ತಿರುವ ವಿಡಿಯೋ ಒಂದನ್ನು ಕ್ರಿಕೆಟಿಗ ಕೆಎಲ್‌ ರಾಹುಲ್‌ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಇದರಲ್ಲಿ ಇಬ್ಬರು ವ್ಯಕ್ತಿಗಳು ಕೊಹ್ಲಿ ಗಡ್ಡದ ಫೋಟೋ ತೆಗೆದುಕೊಳ್ಳುತ್ತಿರುವ ವಿಡಿಯೋ ಪೋಸ್ಟ್ ಮಾಡಿರುವ ರಾಹುಲ್‌, ನನಗೆ ಗೊತ್ತು ನೀವೂ ನಿಮ್ಮ ಗಡ್ಡವನ್ನ ಎಷ್ಟು ಪ್ರೀತಿಸುತ್ತೀರಿ ಎಂದು ಬರೆದಿದ್ದರು. ಈ ವಿಡಿಯೋ ಸಖತ್ ವೈರಲ್ ಆಗಿತ್ತು.

 

 

ಸದ್ಯ ವಿರಾಟ್ ಕೊಹ್ಲಿ ಇದಕ್ಕೆ ಉತ್ತರ ನೀಡಿದ್ದು, ಇದೆಲ್ಲಾ ಫಿಲಿಪ್ಸ್ ಕಂಪನಿಯ ಹೊಸ ಉತ್ಪನ್ನವೊಂದರ ಪ್ರಚಾರಕ್ಕಾಗಿ ಮಾಡಿದ ಗಿಮಿಕ್ ಎಂದು ಬಹಿರಂಗಪಡಿಸಿದ್ದಾರೆ. ಅಂತೂ ಇನ್ನಾದರೂ ಕೊಹ್ಲಿ ಗಡ್ಡದ ವಿಮೆ ವಿಷಯದ ಬಗ್ಗೆ ಚರ್ಚೆಗೆ ಉಗ ತೆರೆ ಬಿದ್ದಿದೆ.

ಈ ಹಿಂದೆ #BreakTheBeard ಎಂಬ ಅಭಿಯಾನ ನಡೆಯುತ್ತಿತ್ತು ಆಗ ಬಹುತೇಕ ಕ್ರಿಕೆಟಿಗರು ಗಡ್ಡ ಬೋಳಿಸಿದ್ದರು. ಆದ್ರೆ ಕೊಹ್ಲಿ ಮಾತ್ರ ಈ ಚಾಲೆಂಜ್ ಸ್ವೀಕಾರ ಮಾಡಲಿಲ್ಲ. ಗುಜರಾತ್ ಲಯನ್ಸ್ ತಂಡದ ಆಟಗಾರ ರವೀಂದ್ರ ಜಡೇಜಾ ಆರಂಭಿಸಿದ್ದ ಬ್ರೇಕ್ ದ ಬಿಯರ್ಡ್ ಚಾಲೆಂಜ್ ಅನ್ನು ಸ್ವೀಕರಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ನಿರಾಕರಿಸಿದ್ದರು..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top