ಸಮಾಚಾರ

ಕೆನಡಾ ಟಿ-20 ಆಡಲು ಸಿದ್ದರಾಗಿರುವ ಸ್ಮಿತ್-ವಾರ್ನರ್ ಸಂಭಾವನೆ ಏಷ್ಟು ಗೊತ್ತೇ

ಕಳೆದ ಮಾರ್ಚ್‍ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದಾಗ ಚೆಂಡು ವಿರೂಪ ಪ್ರಕರಣ ಸಾಭೀತಾದ ಕಾರಣ ಆಸ್ಟ್ರೇಲಿಯಾ ವಾರ್ನರ್ ಹಾಗು ಸ್ಮಿತ್ ರನ್ನು ನಿಷೇದಿಸಿತ್ತು. ಬಿಸಿಸಿಐ ಕೂಡ ಈ ಇಬ್ಬರು ಆಟಗಾರರನ್ನು ಐಪಿಎಲ್‌ನಲ್ಲೂ ಆಡಲು ನಿರಾಕರಿಸಿತ್ತು. ಆದರೆ ಈ ಇಬ್ಬರು ಆಟಗಾರರ ಮುಂದಿನ ಕ್ರಿಕೆಟ್‌ ಭವಿಷ್ಯವನ್ನು ಪರಿಗಣಿಸಿ ಆಸ್ಟ್ರೇಲಿಯಾ ಕ್ರಿಕೆಟ್‌ ಆಡಳಿತ ಮಂಡಳಿ ಗ್ಲೋಬಲ್‌ ಟಿ20 ಕೆನಡಾ ಲೀಗ್‌ನಲ್ಲಿ ಆಡಲು ಅವಕಾಶ ನೀಡಲಾಗಿದೆ.

 

ಜೂನ್‌ 28ರಿಂದ ಪ್ರಾರಂಭವಾಗುವ ಟೂರ್ನಿಯಲ್ಲಿ ಸ್ಮಿತ್‌, ಕ್ರಿಸ್‌ ಗೇಲ್‌, ಆ್ಯಂಡ್ರೆ ರಸೆಲ್‌, ಶಾಹಿದ್‌ ಅಫ್ರಿದಿ, ಡ್ವೇನ್‌ ಬ್ರಾವೊ, ಲಸಿತ್‌ ಮಾಲಿಂಗ, ಕ್ರಿಸ್‌ ಲಿನ್‌, ಡರೆನ್‌ ಸಮಿ, ಡೇವಿಡ್‌ ಮಿಲ್ಲರ್‌ ಮತ್ತು ಸುನಿಲ್‌ ನಾರಾಯಣ್‌ ಸೇರಿದಂತೆ ಪ್ರಮುಖ ಆಟಗಾರರು ಆಡಲಿದ್ದಾರೆ’ ಎಂದು ಕ್ರಿಕೆಟ್‌ ಕೆನಡಾ ಪ್ರಕಟಣೆಯಲ್ಲಿ ತಿಳಿಸಿದೆ.

ಕೆನಾಡ ಟಿ20 ಲೀಗ್ ಟೂರ್ನಿಯಲ್ಲಿ ಆಡುವ ಸ್ಟೀವ್ ಸ್ಮಿತ್‌ ಸಂಭಾವನೆ 67.52 ಲಕ್ಷ ರೂಪಾಯಿ. ಇನ್ನು ಡೇವಿಡ್ ವಾರ್ನರ್ ಸಂಭಾವನೆ 60.76 ಲಕ್ಷ ರೂಪಾಯಿ. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 12 ಕೋಟಿ ರೂಪಾಯಿಗೆ ರೀಟೈನ್ ಆಗಿದ್ದ ಈ ಕ್ರಿಕೆಟಿಗರು ಇದೀಗ ಬಾಲ್ ಟ್ಯಾಂಪರ್‌ನಿಂದ ಸಂಭಾವನೆಯಲ್ಲೂ ಭಾರಿ ಇಳಿಕೆ ಕಂಡಿದ್ದಾರೆ.

ಸ್ಟೀವ್‌ ಸ್ಮಿತ್‌ ತಾವು ಗ್ಲೋಬಲ್‌ ಟಿ20ಯಲ್ಲಿ ಬರುವ ಎಲ್ಲ ಹಣವನ್ನು ಆಸ್ಟ್ರೇಲಿಯಾ ಮತ್ತು ಕೆನಡಾದಲ್ಲಿ ನಡೆಯುವ ಜನಸಾಮಾನ್ಯರ ಕ್ರಿಕೆಟ್‌ ಕಾರ್ಯಕ್ರಮಗಳಿಗೆ ದಾನ ಮಾಡುವುದಾಗಿ ಘೋಷಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top