ಸಮಾಚಾರ

ಗೌರಿ ಲಂಕೇಶ್ ಹತ್ಯೆ ಪ್ರಮುಖ ಆರೋಪಿ ಪರಶುರಾಮ್ ಯಾರು

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿಯನ್ನು ಎಸ್‌ಐಟಿ ಬಂಧನ ಮಾಡಿದೆ. ಪರಶುರಾಮ್‌ ವಾಗ್ಮೋರೆ ಬಂಧಿತ ವ್ಯಕ್ತಿ. ಈತನನ್ನು ಎಸ್‌ಐಟಿ ತಂಡ ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ ಮಂಗಳವಾರ ಬಂಧನ ಮಾಡಿದೆ.

 

 

 

ಬಂಧನ ಮಾಡಿದ ನಂತರ, 3ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಮಾಡುವಂತೆ. ಆರೋಪಿಯ ಹೆಚ್ಚಿನ ವಿಚಾರಣೆಗೆ 14 ದಿನಗಳ ವರೆಗೆ ಎಸ್‌ಐಟಿ ಕಸ್ಟಡಿಗೆ ನೀಡಲಾಯಿತು. ಈ ಪ್ರಕರಣದ ನಾಲ್ವರು ಆರೋಪಿಗಳನ್ನು ವಿಚಾರಣೆಗಾಗಿ ಸೋಮವಾರ ಮತ್ತೆ ನಾಲ್ಕು ದಿನಗಳವರೆಗೆ ಎಸ್‌ಐಟಿ ಕಸ್ಟಡಿಗೆ ನೀಡಲಾಗಿತ್ತು.

ಪರಶುರಾಮ್ ಶಾರ್ಪ್ ಶೂಟರ್ ಆಗಿದ್ದು, ಶೂಟಿಂಗ್ ವಿದ್ಯೆಯಲ್ಲಿ ನೈಪುಣ್ಯತೆ ಹೊಂದಿದ್ದ ಎನ್ನಲಾಗಿದೆ. ಈಗಾಗಲೇ ಬಂಧನಕ್ಕೊಳಗಾಗಿರುವ ಅಮೋಲ್ ಕಾಳೆ ಮತ್ತು ಮನೋಹರ್ ದುಂಡಪ್ಪ ಯಡವೆ ಇಬ್ಬರಿಗೂ ಈತ ಶೂಟಿಂಗ್ ತರಬೇತಿ ನೀಡಿದ್ದ ಎಂಬ ಮಾಹಿತಿಯ ಮೇಲೆ ಪರಶುರಾಮ್ ವಾಗ್ಮೋರೆಯನ್ನು ಬಂಧಿಸಲಾಗಿದೆ. ಈ ಹಿಂದೆ ಪಾಕಿಸ್ತಾನದ ಧ್ವಜ ಹಾರಿಸಿದ ಕುಖ್ಯಾತಿ ಗಳಿಸಿದ್ದ. 2012 ಜನವರಿ 1 ರ ರಾತ್ರಿ ಸಿಂದಗಿ ತಹಶಿಲ್ದಾರ್ ಕಚೇರಿ ಬಳಿ ಪಾಕಿಸ್ತಾನ ಧ್ವಜ ಹಾರಿಸಿದ್ದ ಆರೋಪ ಕೂಡ ಈತನ ಮೇಲಿದೆ.

ಶ್ರೀರಾಮ ಸೇನೆಯೊಂದಿಗೆ ಈತ ಗುರುತಿಸಿಕೊಂಡಿದ್ದ ಎನ್ನಲಾಗಿದೆ. ವಿಜಯಪುರ ಜಿಲ್ಲೆ ಸಿಂದಗಿಯಲ್ಲಿ ಕಂಪ್ಯೂಟರ್ ಅಂಗಡಿ ಹಾಗು ಪಾತ್ರೆ ಅಂಗಡಿಯನ್ನು ನಡೆಸುತ್ತಿದ್ದ ಪರಶುರಾಮ್ ಹಿಂದೂಪರ ಹೋರಾಟಗಳಲ್ಲಿ ಭಾಗಿಯಾಗಿದ್ದ ಎನ್ನಲಾಗ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top