ಹೆಚ್ಚಿನ

ಮಾಂಗಲ್ಯ ಪದೇಪದೇ ಮುರಿದು ಅಥವಾ ಕಿತ್ತು ಹೋಗುತ್ತಿದ್ದರೆ ,ಅದು ಯಾವ ದೋಷ ?ಅದಕ್ಕೆ ಯಾವ ಪರಿಹಾರ ಮಾಡ್ಕೋಬೇಕು ಅಂತ ತಿಳ್ಕೊಳ್ಳಿ .

ಮಾಂಗಲ್ಯ ಪದೇಪದೇ ಮುರಿದು ಅಥವಾ ಕಿತ್ತು ಹೋಗುತ್ತಿದ್ದರೆ ,ಅದು ಯಾವ ದೋಷ ?ಅದಕ್ಕೆ ಯಾವ ಪರಿಹಾರ ಮಾಡ್ಕೋಬೇಕು ಅಂತ ತಿಳ್ಕೊಳ್ಳಿ .

ಪದೇ ಪದೇ ನಿಮ್ಮ ಕತ್ತಿನಲ್ಲಿ ಇರುವ ಮಾಂಗಲ್ಯ ಮುರಿದು ಹೋಗುತ್ತಿದ್ದರೆ ಅಥವಾ ಕಿತ್ತು ಹೋಗುತ್ತಿದ್ದರೆ, ಅದಕ್ಕೆ ಅದು ಯಾವ ದೋಷವನ್ನು ಸೂಚಿಸುತ್ತಿದೆ ? ಅದರ ಅರ್ಥ ಏನು ? ಅದೇನು ಎಂದರೆ ಮಾಂಗಲ್ಯ ದೋಷವೇ ಕಾರಣ.

 

 

ನಿಮ್ಮ ಮಾಂಗಲ್ಯ ತೆಗೆದುಕೊಂಡು ಹೋಗಿ ನೀವು ಬೇರೆಯವರ ಬಳಿ ಹಣಕ್ಕಾಗಿ ಅಡ ಇಟ್ಟಿದ್ದೀರಿ, ಮಾಂಗಲ್ಯ ಸರವನ್ನು ಅಡ ಇಟ್ಟಿದ್ದೀರಿ ಎಂದರೂ ಪರವಾಗಿಲ್ಲ, ಆದರೆ ಅದಷ್ಟಕ್ಕೆ ಅದೇ ತಾನೇ ಕಿತ್ತುಕೊಂಡು ಹೋಗುತ್ತಿದೆ ಎಂದರೆ ಏನೋ ಮಾಂಗಲ್ಯ ದೋಷವೇ ಇದೆ ಎಂದು ಅರ್ಥ . ಯಾರೋ ಕಳ್ಳ ಬಂದು ಕಿತ್ತುಕೊಂಡು ಹೋದರೆ ಅದರ ಅರ್ಥ ಬೇರೆ.
ಆದರೆ ಗೊತ್ತಿಲ್ಲದೆ ಯಾವುದಕ್ಕೂ ಸಿಲುಕಿ ಹಾಕಿಕೊಂಡು ಕಿತ್ತು ಹೋಗುತ್ತಿದೆ ಎಂದರೆ , ನಿಮ್ಮ ಗಂಡನ ಆಯಸ್ಸಿಗೆ ಕುತ್ತು ಎಂಬುದನ್ನು ತಿಳಿದುಕೊಳ್ಳಬೇಕು. ಎಚ್ಚರಿಕೆಯಿಂದ ಇರಬೇಕು.

ಪರಿಹಾರ.
ಶುಕ್ರವಾರ ಮತ್ತು ಮಂಗಳವಾರದ ದಿನಗಳು ಮಡಿಯಿಂದ ಇದ್ದು, ಬ್ರಹ್ಮಚರ್ಯ ವ್ರತವನ್ನು ಪಾಲಿಸಿ, ನೆಲದಲ್ಲಿಯೇ ಮಲಗಬೇಕು. ಮನೆಯಲ್ಲಿ ಒಂದು ಕಲಶವನ್ನು ಸ್ಥಾಪನೆ ಮಾಡಬೇಕು. ಯಾರಾದರೂ ಆಚಾರ್ಯ ಮುಖೇನ ಕಲಶ ಸ್ಥಾಪನೆಯನ್ನು ಮಾಡಿ , ಒಂದು ಅರಿಶಿನದ ಗೌರಿಯನ್ನು ಪ್ರತಿಷ್ಠಾಪನೆ ಮಾಡಿ, ನಿತ್ಯ ಪೂಜೆ, ನಿತ್ಯ ನೈವೇದ್ಯ, ನಿತ್ಯ ಧೂಪವನ್ನು ಮತ್ತು ನಿತ್ಯ ಚಂದನಾದಿಗಳಿಂದ ಪೂಜೆ ಮಾಡಬೇಕು.

 

 

ಮಂಗಳವಾರ ಮತ್ತು ಶುಕ್ರವಾರ ರೇಷ್ಮೆ ಸೀರೆಯನ್ನು ಉಟ್ಟು, ಮನೆಯಲ್ಲಿರುವ ಆ ಅರಿಶಿನದ ಗೌರಿಗೆ ಪೂಜೆ ಮಾಡಿ, ಐದು ಜನ ಸುಮಂಗಲಿಯರಿಗೆ ಅರಿಶಿನ ಕುಂಕುಮ ಕೊಟ್ಟು, ಒಂದು ತೆಂಗಿನ ಕಾಯಿಯನ್ನು ಕೊಟ್ಟು, ಪ್ರತಿಯೊಬ್ಬರಿಗೂ ಆರು ಬಾಳೆ ಹಣ್ಣುಗಳನ್ನು ಕೊಟ್ಟು, ಅಕ್ಷತೆಯನ್ನು ಕೊಟ್ಟು, ಅವರಿಗೆ ಪಾಯಸ ಅನ್ನವನ್ನು ಊಟ ಬಡಿಸಿ, ಅವರಿಂದ ಅಕ್ಷತೆಯನ್ನು ಹಾಕಿಸಿಕೊಳ್ಳಬೇಕು.

ಇಲ್ಲದಿದ್ದರೆ ನಿಮ್ಮ ಮಾಂಗಲ್ಯ ಹೇಗೆ ಮುರಿಯುತ್ತದೆಯೋ ಹಾಗೆ ನಿಮ್ಮ ಗಂಡನ ಆಯಸ್ಸಿಗೆ ಕೂಡ ಕಂಟಕವು ಬರುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಇದ್ದು ಕೂಡಲೇ ಈ ಪರಿಹಾರವನ್ನು ಮಾಡಿಕೊಳ್ಳುವುದು ಉತ್ತಮ .

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top