ಹೆಚ್ಚಿನ

ಅಯ್ಯೋ ಅಂದುಕೊಂಡ ಕೆಲಸ ಒಂದು ಆಗ್ತಾ ಇಲ್ಲ ಅಂದ್ರೆ ಈ ಒಂದು ಪರಿಹಾರವನ್ನು ತಪ್ಪದೆ ಮಾಡ್ಕೊಳ್ಳಿ ,ಎಲ್ಲ ಸರಿಹೋಗುತ್ತೆ .

ಅಯ್ಯೋ ಅಂದುಕೊಂಡ ಕೆಲಸ ಒಂದು ಆಗ್ತಾ ಇಲ್ಲ ಅಂದ್ರೆ ಈ ಒಂದು ಪರಿಹಾರವನ್ನು ತಪ್ಪದೆ ಮಾಡ್ಕೊಳ್ಳಿ ,ಎಲ್ಲ ಸರಿಹೋಗುತ್ತೆ .

ಯಾರು ಶುಭ ಕಾರ್ಯ ಮಾಡಲು ಹೋದರೂ ಕೂಡ ಏನೂ ವಿಘ್ನಗಳು ಬರುತ್ತವೆ , ಮನೆಗೊಂದು ಗೃಹ ಪ್ರವೇಶ ಮಾಡಬೇಕು, ಭೂಮಿ ಖರೀದಿಸಬೇಕು, ಹಣವನ್ನು ಕಷ್ಟಪಟ್ಟು ಕೂಡಿಟ್ಟಿದ್ದೀರ , ಆದರೆ ಯಾವುದೋ ಒಂದು ಜಾಗ, ಗಾಡಿ, ಮಗಳಿಗೆ ಮದುವೆ ಮಾಡಬೇಕು, ಮಗನಿಗೆ ವಿದ್ಯಾಭ್ಯಾಸವನ್ನು ಕೊಡಿಸಬೇಕು, ಒಂದು ಒಳ್ಳೆಯ ಕಾಲೇಜಿಗೆ ಸೇರಿಸಬೇಕು, ಯಾವುದೋ ಒಂದು ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದೀರಾ ? ಆದರೆ ಯಾಕೋ ವಿಘ್ನಗಳ ಮೇಲೆ ವಿಘ್ನಗಳು ಇನ್ನು ಯಾವ ಕಾರ್ಯವೂ ಮೊದಲನೇ ಬಾರಿಗೆ ಆಗುತ್ತಲೇ ಇಲ್ಲ , ಎನ್ನುವ ದೋಷ ನಮಗೇ ಗೊತ್ತಿಲ್ಲದೆ ಬಾಧಿಸುತ್ತಿರುತ್ತದೆ. ಅಂತಹ ಒಂದು ದೋಷಕ್ಕೆ ಒಂದು ಅದ್ಭುತವಾದಂತಹ ಪರಿಹಾರವಿದೆ. ಈ ಪ್ರಯೋಗವನ್ನು ನೀವು 48 ರಿಂದ 108 ದಿನಗಳವರೆಗೆ ಮಾಡಿ .

 

 

ಯಾವುದೇ ಒಂದು ಕಾರ್ಯ ನಿಂತು ಹೋಗಿದೆ ,ಮದುವೆ ಮಾತುಕತೆ ಆಗಿದೆ, ನಿಶ್ಚಿತಾರ್ಥವೂ ಆಗಿದೆ, ಆದರೆ ಯಾಕೋ ಮದುವೆ ಕಾರ್ಯ ಮುಂದಕ್ಕೆ ಸಾಗುತ್ತಲೇ ಇಲ್ಲ, ಚೌಟ್ರಿ ಸಿಗುತ್ತಿಲ್ಲ, ದಿನಾಂಕಗಳು ಸರಿಯಾದ ಸಿಗುತ್ತಿಲ್ಲ ಅವರು ಹೇಳಿದ ದಿನಾಂಕಕ್ಕೂ ನನಗೂ ಯಾಕೋ ಸರಿಯಾಗಿ ಹೊಂದಾಣಿಕೆಯಾಗುತ್ತಿಲ್ಲ.

ಮನೆಯನ್ನು ಕಟ್ಟಿ ಮುಗಿಸಿದ್ದೇವೆ, ಗೃಹಪ್ರವೇಶ ಮಾಡಲು ಯಾವುದಾದರೂ ಒಂದು ವಿಘ್ನಗಳು ಎದುರಾಗುತ್ತಿವೆ. ಮನೆಯಲ್ಲಿ ಯಾರೂ ಬಂದು ವಿಪರೀತವಾದ ಕಾಯಿಲೆಯಿಂದ ನರಳುತ್ತಿದ್ದಾರೆ. ಆ ಸಮಯಕ್ಕೆ ಇನ್ನೇನು ಆಗಿ ಬಿಡುತ್ತದೆ ಎನ್ನುವ ಆತಂಕ ಕಾಡುತ್ತಿದೆ. ಏನಪ್ಪಾ ಮಾಡುವುದು ಎನ್ನುವವರಿಗೆ ಇಂಥ ಒಂದು ಕಾರ್ಯ ವಿಘ್ನ ಕಾರ್ಯ ವಿಳಂಬಕ್ಕೆ ಅದ್ಭುತವಾದಂತಹ ಪರಿಹಾರ ಇದೆ.
ಎಲ್ಲಿಯಾದರೂ ಒಂದು ಕಡೆ ಮರದಿಂದ ಶುದ್ಧ ಹತ್ತಿಯನ್ನು ತೆಗೆದುಕೊಂಡು ಬಂದು ಅದನ್ನು ಬಿಡಿಸಿಕೊಂಡು ಬತ್ತಿ ಮಾಡಿಕೊಂಡು ಅದನ್ನು ಶುದ್ಧ ಅರಿಶಿನದ ನೀರಿನಿಂದ ಅತಿ ಮುಖ್ಯವಾಗಿ ದೇವಿಗೆ ಅಭಿಷೇಕ ವಾಗಿರುವಂತಹ ಅರಿಶಿನವನ್ನು ತೆಗೆದುಕೊಂಡು ಬಂದು ,ಅದಕ್ಕೆ ಸ್ವಲ್ಪ ಶುದ್ಧ ಹಸುವಿನ ತುಪ್ಪ, ನೀರು ಹಾಕಿ ಕಲಸಿ, ಈ ಬತ್ತಿಯನ್ನು ಅದರಲ್ಲಿ ನೆನೆಸಿ ನಂತರ ಅದನ್ನು ಸೂರ್ಯನ ಬಿಸಿಲಿನಲ್ಲಿ ಒಣಗಿಸಿಕೊಂಡು ಇಟ್ಟುಕೊಳ್ಳಬೇಕು.

 

 

ಈ ಬತ್ತಿಯನ್ನು ಒಣಗಿಸಿಕೊಂಡು ತೆಗೆದಿಟ್ಟುಕೊಂಡ ಮೇಲೆ ಹರಿಶಿನದ ಬತ್ತಿಯನ್ನು 48 ದಿನದಿಂದ 108 ದಿನಗಳವರೆಗೆ ನಿಮ್ಮ ಮನೆಯ ದೇವರಿಗೆ ನಿತ್ಯವೂ ಒಂದಿಷ್ಟು ತುಪ್ಪವನ್ನು ಹಾಕಿ, ಸಂಧ್ಯಾ ಕಾಲದಲ್ಲಿ ಹಾಗೂ ಪ್ರಾತಃ ಕಾಲದಲ್ಲಿ ಬೆಳಗ್ಗೆ ಎದ್ದ ತಕ್ಷಣ ಈ ಒಂದು ಬತ್ತಿಯನ್ನು ಹಾಕಿ ದೀಪವನ್ನು ಹಚ್ಚುವ ಕೆಲಸವನ್ನು ಮಾಡಿ.

ಆಗ ಎಂತಹ ಕಷ್ಟವಾದರೂ ಕಾರ್ಯವೂ ಕೂಡ, ಆಗುವುದೇ ಇಲ್ಲ ಏನು ಮಾಡಿದರೂ ಆಗುತ್ತಿಲ್ಲ ,ಎನ್ನುವ ಕಾರ್ಯವೂ ಕೂಡ ಆ ವಿಘ್ನಗಳು ದೂರವಾಗಿ ನಿಮ್ಮ ಕೆಲಸಗಳು ಸರಾಗವಾಗಿ ನೆರವೇರುತ್ತವೆ.ನೀವು ಮಾಡುವ ಕೆಲಸದಲ್ಲಿ ಭಕ್ತಿ, ಶ್ರದ್ಧೆ ಮತ್ತು ನಂಬಿಕೆಯಿಂದ ನಿಮ್ಮ ಮನೆಯ ದೇವರಿಗೆ ಈ ಕೆಲಸವನ್ನು ಪ್ರತಿನಿತ್ಯ ಬೆಳ್ಳಗ್ಗೆ ಮತ್ತು ಸಂಜೆ ಮಾಡುತ್ತಾ ಬನ್ನಿ ಆಗ ನೀವು ಅದ್ಭುತವಾದಂತಹ ಫಲಿತಾಂಶ ಪಡೆಯುತ್ತೀರಿ. ನಿಂತು ಹೋದ ಕಾರ್ಯಗಳು ನೆರವೇರುತ್ತವೆ. ಯಶಸ್ಸನ್ನು ಪಡೆಯುತ್ತೀರ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top