ಸಿನಿಮಾ

ಸರ್ಕಾರಿ ಶಾಲೆಯ ಅಭಿವೃದ್ದಿಗಾಗಿ ಪಣ ತೊಟ್ಟ ಪ್ರಕಾಶ್ ರೈ

ಬಹುಭಾಷಾ ನಟ ಪ್ರಕಾಶ್ ರೈ ಅವರು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಭಾರ್ತಿ ನಗರದಲ್ಲಿರುವ ಮೆಣಸಗೆರೆ ಸರಕಾರಿ ಶಾಲೆ ಸೇರಿದಂತೆ 5 ಶಾಲೆಗಳನ್ನು ದತ್ತು ಪಡೆದಿದ್ದಾರೆ. ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ ‘ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ’ ಕೆಲಸ ಮಾಡುತ್ತಿದ್ದು ಇದರ ಜೊತೆಗೆ ಪ್ರಕಾಶ್ ರೈ ರವರ ‘ಜಸ್ಟ್ ಆಸ್ಕಿಂಗ್ ಫೌಂಡೇಶನ್’ ಕೂಡ ಕೈಜೋಡಿಸಿದೆ ಎಂದು ತಿಳಿದು ಬಂದಿದೆ.

 

 

ಸರ್ಕಾರಿ ಶಾಲೆಯ ಶಿಕ್ಷಣ ಎಂದರೆ ಕಳಪೆ ದರ್ಜೆಯದು ಎಂಬ ಭಯವನ್ನು ಖಾಸಗಿ ಶಾಲೆಗಳು ಸೃಷ್ಟಿ ಮಾಡುವುದರ ಮೂಲಕ ಶಿಕ್ಷಣವನ್ನು ಶ್ರೀಮಂತರ ಸ್ವತ್ತಾಗಿಸಲಾಗುತ್ತಿದೆ ಎಂದು ನಟ ಪ್ರಕಾಶ್ ರೈ ಆತಂಕ ವ್ಯಕ್ತಪಡಿಸಿದ್ದಾರೆ. ಪೋಷಕರು ಹಾಗು ಕೆಲವು ದಾನಿಗಳಿಂದ ಉನ್ನತೀಕರಣ ಗೊಳ್ಳುತ್ತಿರುವ ‘ಫ್ರೆಂಚ್‌ ರಾಕ್ಸ್‌ ಶತಮಾನದ ಸರ್ಕಾರಿ ಶಾಲೆ’ಯನ್ನು ಸರ್ಕಾರ ಮಾದರಿಯಾಗಿ ಸ್ವೀಕರಿಸಿ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸ ಬಹುದು ಎಂದು ಬಹುಭಾಷಾ ನಟ ಪ್ರಕಾಶ್‌ ರೈ ಹೇಳಿದರು.

ತಾಂತ್ರಿಕವಾಗಿ ಯಾವುದೇ ಶಾಲೆಗಳನ್ನು ಪ್ರಕಾಶ್ ರೈ ದತ್ತು ತೆಗೆದುಕೊಳ್ಳುತ್ತಿಲ್ಲ. ದತ್ತು ತೆಗೆದುಕೊಂಡರೆ ಆಗ ಊರಿನ ಸಮುದಾಯಕ್ಕೆ ಹೆಚ್ಚಿನ ಪಾತ್ರ ಇರುವುದಿಲ್ಲ. ಈ ಕಾರಣಕ್ಕಾಗಿ ಊರಿನ ಸಮುದಾಯವೇ ಶಾಲೆಯ ಅಭಿವೃದ್ಧಿಯ ಜವಾಬ್ದಾರಿ ತೆಗೆದುಕೊಂಡಲ್ಲಿ ಅವರಿಗೆ ಬೇಕಾದುದ್ದನ್ನು ಒದಗಿಸುವ, ಅವರಿಗೆ ಸಕಲ ನೆರವು ನೀಡುವ ವಾಗ್ದಾನವನ್ನು ಪ್ರಕಾಶ್ ರೈ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top