ಸಿನಿಮಾ

ಪ್ರೀತಿ ಝಿಂಟಾ ಮೋಹಕ ಸೌಂದರ್ಯದ ಗುಟ್ಟು ರಟ್ಟಾಯ್ತು

ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವರಾಗಿರುವ ರಾಜವರ್ಧನ್ ಸಿಂಗ್ ರಾಥೋಡ್ ರವರು ಮೇ 22 ರಂದು, “ನಾನು ಫಿಟ್ ಆದ್ರೆ ದೇಶ ಫಿಟ್ (#HumFitTohIndiaFit) ನೀವು ನಿಮ್ಮ ಫಿಟ್ ನೆಸ್ ಗೆ ಸಂಬಂಧಿಸಿದ ಚಿತ್ರ ಹಾಗು ವಿಡಿಯೋವನ್ನು ಶೇರ್ ಮಾಡಿ” ಎಂದು ಕೊಹ್ಲಿ, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ನಟ ಹೃತಿಕ್ ರೋಷನ್ ಅವರಿಗೆ ಫಿಟ್ ನೆಸ್ ಚಾಲೆಂಜ್ ಟ್ವೀಟ್ ಮಾಡಿದ್ದರು. ಸ್ಯಾಂಡಲ್ ವುಡ್ ನಟರು ಕೂಡ ಫಿಟ್ನಿಸ್ ಚಾಲೆಂಜ್‍ನಿಂದ ಹೊರತಾಗಿಲ್ಲ. ಈಗಾಗಲೇ ನಟ ಸುದೀಪ್, ಯಶ್ ಫಿಟ್ನಿಸ್ ಬಗ್ಗೆ ಅಭಿಮಾನಿಗಳಲ್ಲಿ ಚಾಲೆಂಜ್ ಹಾಕಿ ಆಸಕ್ತಿ ಹುಟ್ಟಿಸಿದ್ದಾರೆ.

 

ಬಾಲಿವುಡ್ ನಟಿ ಪ್ರೀತಿ ಝಿಂಟಾ ಅವರಿಗೆ ಶಗುನ್ ಖನ್ನಾ ಫಿಟ್‍ನೆಸ್ ಚಾಲೆಂಜ್ ನೀಡಿದ್ದರು. ಇದನ್ನು ಸ್ವೀಕರಿಸಿ ಪ್ರೀತಿ ಜಿಮ್‌ನಲ್ಲಿ ಬೆವರಿಳಿಸಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಚಾಲೆಂಜ್ ಪೂರೈಸಿರುವ ಅವರು, ಫಿಟ್‍ನೆಸ್ ಚಾಲೆಂಜನ್ನು ಸಲ್ಮಾನ್ ಖಾನ್‍ಗೆ ರವಾನಿಸಿದ್ದಾರೆ.

ಪ್ರೀತಿ ಝಿಂಟಾ ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಕ್ರೀಡಾ ಸಚಿವ ರಾಜವರ್ಧನ್‌ ಸಿಂಗ್ ರಾಥೋಡ್‌ ಈ ಪ್ರಯತ್ನಕ್ಕೆ ಕೃತಜ್ಞತೆಗಳನ್ನು ತಿಳಿಸಿದ್ದಾರೆ. ಪ್ರೀತಿ ಝಿಂಟಾ ಅವು ದಿನನಿತ್ಯ ತಪ್ಪದೆ ವರ್ಕೌಟ್ ಮಾಡುವುದೇ ಅವರ ಚೈತನ್ಯಕ್ಕೆ ಕಾರಣ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top