ಮನೋರಂಜನೆ

ಈ ಅಪರೂಪದ ಅಭಿಮಾನಿಗೆ ರಾಧಿಕಾ ಪಂಡಿತ್ ಹೇಳಿದ್ದೇನು ಗೊತ್ತಾ?

ತಮ್ಮ ನೆಚ್ಚಿನ ನಟ ನಟಿಯರ ಬಗೆಗಿನ ಪ್ರೀತಿ ಅಭಿಮಾನಿಗಳ ಕಡೆಯಿಂದ ಹೊರ ಹೊಮ್ಮುವ ರೀತಿಯೇ ರೋಚಕ. ಒಬ್ಬಬ್ಬರು ಒಂದೊಂದು ರೀತಿಯಲ್ಲಿ ತಮ್ಮಿಷ್ಟ ತಾರೆಯನ್ನು ಆರಾಧಿಸುತ್ತಾರೆ. ಇದೀಗ ರಾಧಿಕಾ ಪಂಡಿತ್ ಅವರ ಕಣ್ಣಿಗೆ ಬಿದ್ದಿರುವ ಅಭಿಮಾನಿ ಕೂಡ ಸಕತ್ ಡಿಫರೆಂಟ್.

ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ ಚಿತ್ರದಲ್ಲಿ ನಟಿಯ ಪರಿಚಯದ ದೃಶ್ಯದಲ್ಲಿ ರಾಧಿಕಾ ಸಿಗರೇಟ್ ಬಾಯಲ್ಲಿಟ್ಟು ಧಮ್ ಎಳೆಯುವ ಫೋಟೋವನ್ನು ತಮ್ಮ ಆಟೋ ಹಿಂದೆ ಈ ಅಭಿಮಾನಿ ಹಾಕಿ ‘ಐ ಲೈಕ್ ಯೂ’ ಎಂದು ಬರೆಸಿಕೊಂಡಿದ್ದಾರೆ. ಅದು ಇದೀಗ ಸಾಮಾಜಿಕ ಜಾಲತಾಣದಾದ್ಯಂತ ವೈರಲ್ ಆಗಿದ್ದು ರಾಧಿಕಾ ಪಂಡಿತ್ ಅವರನ್ನೂ ತಲಿಪಿಕೊಂಡಿದೆ. ಅದಕ್ಕೆ ಸಾಮಾಜಿಕ ಜಾಲತಾಣದ ಮೂಲಕವೇ ರಾಧಿಕಾ ಪಂಡಿತ್ ಪ್ರತಿಕ್ರಿಯಿಸಿದ್ದಾರೆ. `ನನ್ನ ಈ ಅವತಾರವನ್ನೂ ಇಷ್ಟಪಡುತ್ತೀರಿ ಅಂತಾದ್ರೆ ಧನ್ಯವಾದ’ ಎಂದು ಬರೆದುಕೊಂಡಿದ್ದಾರೆ.

 

 

ಅಭಿಮಾನಿಗಳು ನಮ್ಮನ್ನು ವಿವಿಧ ರೀತಿಯಲ್ಲಿ ತಮ್ಮನ್ನು ಇಷ್ಟಪಡುತ್ತಾರೆ ಎಂಬುದೇ ಸಂತೋಷದ ವಿಚಾರ ಎಂದು ಹೇಳಿರುವ ರಾಧಿಕಾ, ಅಭಿಮಾನಿಗಳು ತಮಗೆ ತೋರಿಸಿದ ಪ್ರೀತಿಗೆ ಧನ್ಯವಾದ ಅರ್ಪಿಸಿದ್ದಾರೆ. ಅಂದಹಾಗೆ ಈ ಫೋಟೋವನ್ನು ಹಾಕಿಸಿಕೊಂಡಿರುವ ಈ ಆಟೋ ಚಾಲಕನ ಕುರಿತು ಯಾವುದೇ ಮಾಹಿತಿ ಸಿಕ್ಕಿಲ್ಲವಾದರೂ ಸೋಷಿಯಲ್ ಮೀಡಿಯಾದಲ್ಲೆಲ್ಲಾ ಹವಾ ಎಬ್ಬಿಸಿದ್ದಾನೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top