ಸಮಾಚಾರ

ವಿಜಯಲಕ್ಷ್ಮಿ ಇನ್ನು ಮದುವೆ ಆಗದೆ ಇರೋಕೆ ಕಾರಣವಾದ ಮನಕಲಕುವ ಕಥೆ

ಮಾಡರ್ನ್ ಹುಡುಗಿಯಾದ್ರು ಸೈ ,ಹಳ್ಳಿ ಹುಡುಗಿಯಾದರೂ ಸೈ ಯಾವುದೇ ಪಾತ್ರವಾದರೂ ಅಚ್ಚುಕಟ್ಟಾಗಿ ಜೀವ ತುಂಬುತ್ತಿದ್ದ ನಟಿ ಜಯಲಕ್ಷ್ಮಿ, ಒಂದು ಕಾಲದಲ್ಲಿ ಸ್ಟಾರ್ ನಟರಾದ ವಿಷ್ಣುವರ್ಧನ್ ,ರಮೇಶ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಖ್ಯಾತ ನಟ ಸಂಸದ ಬಿ.ಸಿ ಪಾಟೀಲ್ ರಾಮ್ ಕುಮಾರ್ ಹಾಗೂ ಜಗ್ಗೇಶ್ ಅಂತಹ ಮೇರು ನಟರೊಂದಿಗೆ ನಟಿಸಿ, ಆನಂತರ ಕಿರುತೆರೆ ಕಾರ್ಯಕ್ರಮ ‘ಬಂಗಾರದ ಬೇಟೆ’ ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದ ಸ್ಯಾಂಡಲ್ವುಡ್ನ ಚೆಂದುಳ್ಳಿ ಚೆಲುವೆ ವಿಜಯಲಕ್ಷ್ಮಿ .

ಅಷ್ಟು ದಿನ ಗೌರವದಿಂದ ವಿಜಯಲಕ್ಷ್ಮಿ ಹಾಗೂ ವಿಜಿ ಎಂದು ಕರೆಯುತ್ತಿದ್ದ ಅನೇಕರು ಆಕೆಯನ್ನು ಚಪ್ಪಲಿ ವಿಜಯಲಕ್ಷ್ಮಿ ಎಂದು ಕರೆಯಲು ಶುರು ಮಾಡಿದರು ,ವಿಜಯಲಕ್ಷ್ಮಿ ಖ್ಯಾತ ನಟರೊಬ್ಬರಿಗೆ ಚಪ್ಪಲಿಯಲ್ಲಿ ಹೊಡೆದು ಅವಮಾನ ಮಾಡಿದ್ದಾರೆ ಎಂದು ಆ ಕಾಲದ ಪತ್ರಿಕೆಗಳು ಹೆಡ್ ಲೈನ್ ಮಾಡಿ ನ್ಯೂಸ್ ಅನ್ನು ಹರಿಯಬಿಟ್ಟಿದ್ದು ಈ ವಾರ್ತೆಯನ್ನು ಕೇಳಿದ ವಿಜಯಲಕ್ಷ್ಮಿ ಕಂಗಾಲಾಗಿ ಹೋಗಿದ್ದರು ಅದೊಂದು ಸುಳ್ಳು ಸುದ್ದಿಯಾಗಿತ್ತು ಆದರೆ ಈ ವಿವಾದ ಚಿತ್ರರಂಗದ ತುಂಬೆಲ್ಲ ತುಂಬಿ ವಿಜಯಲಕ್ಷ್ಮಿ ಅವರ ಹೆಸರನ್ನು ಹಾಳು ಮಾಡಿತ್ತು .

 

 

ನಟಿ ವಿಜಯಲಕ್ಷ್ಮಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿಲ್ಲ. ಇಲ್ಲಿಯವರೆಗೆ ಮದುವೆ ಆಗಿಲ್ಲ. ಈ ಹಿಂದೆ ನಟ ಸೃಜನ್ ಲೋಕೇಶ್ ಅವರ ಜೊತೆ ವಿಜಯಲಕ್ಷ್ಮಿ ನಿಷ್ಚಿತಾರ್ಥ ಆಗಿತ್ತಾದರೂ ಕೂಡ ಮದುವೆ ಮುರಿದು ಆಗಲಿಲ್ಲ. ನಟಿ ವಿಜಯಲಕ್ಷ್ಮಿ ಇನ್ನೂ ಕೂಡ ಮದುವೆ ಆಗದೆ ಒಂಟಿಯಾಗಿ ಇದ್ದಾರೆ.

ಖಾಸಗಿ ಸುದ್ದಿ ವಾಹಿನಿಯಲ್ಲಿ ಮಾತನಾಡಿದ ಅವರು ತಾವು ಮದುವೆ ಯಾಕೆ ಆಗಿಲ್ಲ ಎಂಬುದನ್ನು ಹೇಳಿದ್ದಾರೆ ”ನಾನು ಯಾವತ್ತೂ ಕೂಡ ತಪ್ಪು ದಾರಿ ಹಿಡಿದಿಲ್ಲ. ನಾನು ಇಲ್ಲಿಯವರೆಗೂ ಮದುವೆ ಮಾಡಿಕೊಂಡಿಲ್ಲ. ಯಾಕಂದ್ರೆ, ನನ್ನ ಕಣ್ಣ ಮುಂದೆಯೇ ಅಕ್ಕನ ಸಂಸಾರ ಹಾಳಾಗಿರುವಾಗ, ನಾನು ಯಾರನ್ನೋ ಮದುವೆ ಆಗಿ ಹೇಗೆ ಖುಷಿಯಾಗಿರಲಿ.? ನನ್ನ ಅಕ್ಕನ ಜೀವನ ಸರಿ ಆಗುವರೆಗೂ ನಾನು ನನ್ನ ಜೀವನದಲ್ಲಿ ಯಾರನ್ನೂ ಕರೆದುಕೊಂಡು ಬರಲ್ಲ” ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top