ಹೆಚ್ಚಿನ

ಇಂದು ಅಧಿಕ ಜ್ಯೇಷ್ಠ ಮಾಸದ ಕೊನೆಯ ದಿನದ ಅಮಾವಾಸ್ಯೆ,ಈ ಅಮಾವಾಸ್ಯೆ ಸಂಜೆ ಆಚರಣೆ ಹೀಗಿರಲಿ.

ಇಂದು ಅಧಿಕ ಜ್ಯೇಷ್ಠ ಮಾಸದ ಕೊನೆಯ ದಿನದ ಅಮಾವಾಸ್ಯೆ,ಈ ಅಮಾವಾಸ್ಯೆ ಸಂಜೆ ಆಚರಣೆ ಹೀಗಿರಲಿ.

ಇಂದು ಜೂನ್ 13ನೇ ತಾರೀಖು, ಕೃಷ್ಣ ಪಕ್ಷ , ಬುಧವಾರ,ರೋಹಿಣಿ ನಕ್ಷತ್ರವಿದ್ದು, ಅಧಿಕ ಮಾಸದ ಕೊನೆಯ ದಿನವಾಗಿದೆ. ಅಧಿಕ ಮಾಸದ ಕೊನೆ ದಿನವೇ ಜ್ಯೇಷ್ಠ ಅಧಿಕ ಮಾಸದ ಅಮಾವಾಸ್ಯೆ ಸಹ ಇದೆ .ಮೂರು ವರ್ಷಗಳಿಗೆ ಒಮ್ಮೆ ಬರುವ ಈ ಅಧಿಕ ಮಾಸದ ಕೊನೆಯ ದಿನ ಇದಾಗಿದೆ. ಈ ದಿನ ತುಂಬ ವಿಶೇಷತೆಯಿಂದ ಕೂಡಿದ್ದು , ಭಕ್ತರು ತುಂಬಾ ಶ್ರದ್ಧೆ, ಭಕ್ತಿಯಿಂದ ಈ ದಿನವನ್ನು ಪೂಜೆ,ಉಪವಾಸ,ವ್ರತ ಪ್ರಾರ್ಥನೆಗಳಲ್ಲಿ ಕಳೆಯುತ್ತಾರೆ .

 

 

ಅಮಾವಾಸ್ಯೆ ಎಂದರೆ ಸಾಮಾನ್ಯವಾಗಿ ಎಲ್ಲರೂ ಕೂಡ ಭಯ ಪಡುತ್ತಾರೆ . ಯಾಕೆಂದರೆ ದುಷ್ಟ ಶಕ್ತಿಗಳು ಆವರಿಸುತ್ತವೆ ಅಥವಾ ಏನಾದರೂ ಗಂಡಾಂತರಗಳು ಕಾದಿದೆಯೇ ಎಂದು ಭಯಪಡುತ್ತಾರೆ. ಅದಕ್ಕೆ ಈ ವಿಶೇಷವಾದ ದಿನದ ಅಮಾವಾಸ್ಯೆಯ ಆಚರಣೆ ಹೇಗಿರಬೇಕು ? ಎಂಬುದನ್ನು ನಾವು ಈಗ ತಿಳಿದುಕೊಳ್ಳೋಣ.

ಪ್ರತಿಯೊಬ್ಬರಿಗೂ ಕೂಡ ಸುಖ , ಶಾಂತಿ, ನೆಮ್ಮದಿ , ಐಶ್ವರ್ಯ, ಕಷ್ಟ, ದುಃಖ ಇವೆಲ್ಲವೂ ಕೂಡ ಪ್ರತಿಯೊಬ್ಬರಿಗೂ ಕೂಡ ಬರುತ್ತದೆ. ಇರುವಂತಹ ದುಃಖಗಳನ್ನು, ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಒಳ್ಳೆಯ ಸಮಯವಾಗಿದೆ ಈ ಅಧಿಕ ಜ್ಯೇಷ್ಠ ಮಾಸದ ಅಮಾವಾಸ್ಯೆ.

ಆದ್ದರಿಂದ ಈ ದಿನ ನಮ್ಮಲ್ಲಿರುವ ದುಃಖಗಳನ್ನು, ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ದುರ್ಗಾದೇವಿಯ ಆರಾಧನೆಯನ್ನು ಮಾಡಬೇಕು. ದುರ್ಗಾ ಸಪ್ತಶತಿ ಪಾರಾಯಣ, ದುರ್ಗಾ ಪೂಜೆ ಅಥವಾ ಶಕ್ತಿ ದೇವತೆಯ ಪೂಜೆಯನ್ನು ಯಾರು ಮಾಡುತ್ತಾರೋ ? ಅಂಥವರಿಗೆ ಜಗನ್ಮಾತೆ ಆಗಿರುವಂತಹ ಶಕ್ತಿ ದೇವತೆಯ ಅನುಗ್ರಹ ದೊರೆಯುತ್ತದೆ. ಯಾವಾಗ ಶಕ್ತಿ ದೇವತೆಯ ಅನುಗ್ರಹ ದೊರೆಯುತ್ತದೆಯೋ, ಆಗ ಮನೆಯಲ್ಲಿರುವ ತೊಂದರೆ ತಾಪತ್ರಯಗಳೆಲ್ಲವೂ ಕೂಡ ನಿವಾರಣೆಯಾಗುತ್ತದೆ.

 

 

ಇನ್ನು ಈ ಅಧಿಕ ಜ್ಯೇಷ್ಠ ಮಾಸದ ಅಮಾವಾಸ್ಯೆ ದಿನ ಏನಾದರೂ ಗಂಡಾಂತರ ಇದೆಯೇ ಎಂಬ ಪ್ರಶ್ನೆ ಇದ್ದರೆ ? ಈಗಾಗಲೇ ನೀವೆಲ್ಲರೂ ನೋಡುತ್ತಿರುವ ಹಾಗೆ ಎಲ್ಲ ಭಾಗದಲ್ಲೂ ವರುಣನ ಆರ್ಭಟ ಹೆಚ್ಚಾಗಿದೆ. ಇನ್ನೂ ಕೂಡ ಈ ವರುಣನ ಅಂದರೆ ಮಳೆಯ ಆರ್ಭಟ , ವರುಣನ ಅಬ್ಬರ ಹೆಚ್ಚಾಗಲಿದೆ.

ಯಾಕೆಂದರೆ ಈ ಅಮಾವಾಸ್ಯೆಯ ಹಿಂದಿನ ದಿನ, ಅಮಾವಾಸ್ಯೆಯ ದಿನ ಮತ್ತು ಅಮಾವಾಸ್ಯೆಯ ಮುಂದಿನ ದಿನವನ್ನು ವೇದ ಮತ್ತು ಆಗಮ ಭಾಗದಲ್ಲಿ ಇದನ್ನು ಅನಧ್ಯಯನ ಎಂದು ಕರೆಯುತ್ತೇವೆ. ಈ ಅನಧ್ಯಯನದಲ್ಲಿ ಪ್ರಕೃತಿಯ ಮೇಲೆ ನಾನಾ ರೀತಿಯ ತೊಂದರೆ ತಾಪತ್ರಯಗಳಾಗುವ ಸಾಧ್ಯತೆಗಳು ಹೆಚ್ಚಾಗಿ ಕಂಡು ಬರುತ್ತವೆ.
ಆದ್ದರಿಂದ ಪ್ರತಿಯೊಬ್ಬರೂ ಕೂಡ ಎಚ್ಚರಿಕೆಯಿಂದ ಇದ್ದು, ದೇವರನ್ನು ನಂಬಿ ದೇವರನ್ನು ಆರಾಧನೆ ಮಾಡಿ. ಶ್ರದ್ಧೆ, ಭಕ್ತಿಯಿಂದ ಆರಾಧನೆ ಮಾಡಿ. ದೈವಶಕ್ತಿ ಭಗವಂತನ ಅನುಗ್ರಹ ನಿಮಗೆ ಇದ್ದರೆ, ನಿಮ್ಮ ಜೀವನದಲ್ಲಿ ಇರುವ ತೊಂದರೆ ತಾಪತ್ರಯ ಗಳೆಲ್ಲವೂ ಕೂಡ ನಿವಾರಣೆಯಾಗುತ್ತವೆ.ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ವಿಶೇಷವಾಗಿರುವಂತಹ ದಿನವನ್ನು ಸದುಪಯೋಗವನ್ನು ಪಡಿಸಿಕೊಳ್ಳಿ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top