ಹೆಚ್ಚಿನ

ನಮ್ಮ ಹಿಂದೂ ಪುರಾಣಗಳಲ್ಲಿ ಉಲ್ಲೇಖವಾಗಿರುವ ಪ್ರಕಾರ ಅಮಾವಾಸ್ಯೆಯ ದಿನ ಹೀಗೆ ಮಾಡಿದರೆ ನಿಮ್ಮಲ್ಲಿರುವ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ.

ನಮ್ಮ ಹಿಂದೂ ಪುರಾಣಗಳಲ್ಲಿ ಉಲ್ಲೇಖವಾಗಿರುವ ಪ್ರಕಾರ ಅಮಾವಾಸ್ಯೆಯ ದಿನ ಹೀಗೆ ಮಾಡಿದರೆ ನಿಮ್ಮಲ್ಲಿರುವ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ.

ಹಿಂದೂ  ಪುರಾಣದ ಪ್ರಕಾರ ಹಾಗೂ ಆಚರಣೆಗಳ ಪ್ರಕಾರ ಅಮಾವಾಸ್ಯೆಯ ದಿನಕ್ಕೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಈ ದಿನ ಬಹಳಷ್ಟು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಹಾಗೂ ಭಕ್ತರು ಉಪವಾಸವಿದ್ದು ಭಕ್ತಿಯಿಂದ ಪೂಜೆ ಮಾಡುತ್ತಾರೆ.

ಅಮಾವಾಸ್ಯೆಯ ಉಪವಾಸವು ಅತ್ಯಂತ ಶಕ್ತಿಯುತ ಉಪವಾಸವಾಗಿದ್ದು ಉತ್ತಮ ಫಲಗಳನ್ನು ನಿರೀಕ್ಷಿಸಬಹುದಾಗಿದೆ. ಜೊತೆಗೆ ನಮ್ಮ ಜೀವನದಲ್ಲಿ ಎದುರಾಗುವ ಬಹಳಷ್ಟು ತೊಂದರೆಗಳನ್ನು ಪರಿಹರಿಸಿಕೊಳ್ಳಬಹುದು ಎಂಬುದು ನಮ್ಮ ಪೂರ್ವಜರ ನಂಬಿಕೆಯೂ ಆಗಿದೆ. ಅಮಾವಾಸ್ಯೆಯ ಉಪವಾಸದಿಂದ ಪಡೆಯಬಹುದಾದ ಐದು ಉಪಯೋಗಗಳ ಬಗ್ಗೆ ಇಂದು ನಾವು ತಿಳಿದುಕೊಳ್ಳೋಣ.

 

 

1.ಅಮಾವಾಸ್ಯೆಯ ದಿನ ಮಾಡುವ ಉಪವಾಸ ತುಂಬಾ ಶಕ್ತಿಯುತವಾಗಿರುತ್ತದೆ ಮತ್ತು ಎಲ್ಲ ಋಣಾತ್ಮಕ ಶಕ್ತಿ ಮತ್ತು ಕೆಟ್ಟ ಕಣ್ಣುಗಳು ಮತ್ತು ಹಾನಿಕಾರಕ ಶಕ್ತಿಯನ್ನು ದೂರವಿರಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಎಲ್ಲಾ ದುಷ್ಟ ಶಕ್ತಿಗಳ ಕಾಟದಿಂದ ಪಾರು ಮಾಡಲು ಅಮಾವಾಸ್ಯೆಯ  ಉಪವಾಸ ಮತ್ತು ಮಾಡುವ  ಪೂಜೆಯನ್ನು ಉತ್ತಮ ಪೂಜೆ ಎಂದೇ ಹೇಳಲಾಗುತ್ತದೆ.

2.ಒಂದು ವೇಳೆ ಸೋಮವಾರ ಏನಾದರೂ ಅಮಾವಾಸ್ಯೆ ಬಂದರೆ ಆ ದಿನದ ಉಪವಾಸ ಪೂಜೆ ಹಾಗೂ ದೇವರ ದರ್ಶನದಿಂದ ನೀವು ಬೇಡಿಕೊಂಡ ಎಲ್ಲ ಕೋರಿಕೆಗಳು ಮತ್ತು ಇಷ್ಟಾರ್ಥಗಳು ನೆರವೇರುತ್ತದೆ ಹಾಗೂ ತೊಂದರೆಗಳೆಲ್ಲ ನಿವಾರಣೆಯಾಗುತ್ತವೆ.

3.ಒಂದು ವೇಳೆ ಬುಧವಾರ ಏನಾದರೂ ಅಮಾವಾಸ್ಯೆ ಬಂದರೆ ಆ ದಿನದ ಉಪವಾಸ , ಪೂಜೆ ಹಾಗೂ ದೇವರ ದರ್ಶನದಿಂದ ಕಾಳಸರ್ಪ ದೋಷದಿಂದ ಹಾಗೂ ಅದರ ತೊಂದರೆಗಳಿಂದ ಮುಕ್ತಿ ಪಡೆಯಬಹುದು ಅಥವಾ ಇದರ ದೋಷದ ಪ್ರಭಾವ ಕಡಿಮೆಯಾಗಲಿದೆ.

4.ಅಮಾವಾಸ್ಯೆಯ ದಿನಗಳಲ್ಲಿ ಉಪವಾಸ ಪೂಜೆ ಹಾಗೂ ದೇವರ ದರ್ಶನದಿಂದ ಯಾವುದೇ ಆರೋಗ್ಯ ಹಾಗೂ ಹಣಕಾಸಿನ ತೊಂದರೆ ಸಂಪತ್ತು ಆಸ್ತಿಗೆ ತೊಂದರೆಯಾಗುವುದಿಲ್ಲ ಹಾಗೂ ಅಂತಹ ತೊಂದರೆಗಳು ಇದ್ದರೆ ನಿವಾರಣೆಯಾಗುತ್ತವೆ ಎಂಬುದು ಎತ್ತರ ನಂಬಿಕೆಯಾಗಿದೆ.

5.ಅಮಾವಾಸ್ಯೆಯ ಉಪವಾಸ ನಿಮ್ಮ ಜೀವನದಲ್ಲಿ ಎಲ್ಲಾ ರೀತಿಯ ಆರೋಗ್ಯಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಕೂಡ ನಿವಾರಿಸುತ್ತದೆ ಹಾಗೂ ಈ ಉಪವಾಸ ಮನಸ್ಸಿನ ಶಾಂತಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂಬುದು ನಮ್ಮ ಪೂರ್ವಜರ ನಂಬಿಕೆಯಾಗಿದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top