ಸಿನಿಮಾ

ಬೀದಿ ವ್ಯಾಪಾರಿ ಬಳಿ ಚೌಕಾಶಿ ಮಾಡಿ ಹೇರ್‌ ಬ್ಯಾಂಡ್‌ ಖರೀದಿಸಿದ ನಟಿ

‘ಕೇದರನಾಥ್’​ ಸಿನಿಮಾ ಮೂಲಕ ಹಿಂದಿ​ ಚಿತ್ರರಂಗ ಪ್ರವೇಶ ಪಡೆದ ​ ಬಾಲಿವುಡ್​ ಸ್ಟಾರ್ ಸೈಫ್​ ಅಲಿಖಾನ್​ ಮಗಳಾದ ಸಾರಾ ಅಲಿಖಾನ್. ಆದ್ರೆ ‘ಕೇದರನಾಥ್’ ಚಿತ್ರೀಕರಣ ಸ್ಥಗಿತವಾದರಿಂದ ಸದ್ಯ ಬಾಲಿವುಡ್‌‌ನ ಸಿಂಬಾ ಚಿತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ. ಸಿಂಬಾ ಸಿನಿಮಾ ಚಿತ್ರೀಕರಣ ಹೈದರಾಬಾದ್ ನಲ್ಲಿರುವ ರಾಮೋಜಿ ಫಿಲಂ ಸಿಟಿಯಲ್ಲಿ ನಡೆಯುತ್ತಿದೆ.

ಚಿತ್ರೀಕರಣ ಬ್ಯುಸಿ ಷೆಡ್ಯೂಲ್ ನಲ್ಲಿ ಸ್ವಲ್ಪ ಬಿಡುವು ಮಾಡಿಕೊಂಡು ಸಾರಾ, ತಮ್ಮ ತಾಯಿಯ ಜೊತೆಗೆ ಜತೆ ಶಾಫಿಂಗ್ ಮಾಡಿದ್ದಾರೆ. ನಿನ್ನೆ ರಾತ್ರಿ ಇಲ್ಲಿಯ ಚಾರ್‌ಮಿನಾರ್‌‌ ಬಳಿ ತೆರಳಿದ್ದ ಅವರು ರಸ್ತೆಯ ಬದಿ ತಳ್ಳುವ ಗಾಡಿಯಲ್ಲಿ ಹೇರ್‌ಬ್ಯಾಂಡ್‌ ಖರೀದಿ ಮಾಡಿದ್ದಾರೆ. ಇಡೀ ರಾತ್ರಿ ಅಲ್ಲಿಯೇ ಸುತ್ತಾಡಿ ಶಾಪಿಂಗ್ ಮಾಡಿದ್ದಾರೆ. ಅಲ್ಲಿಯೇ ಇದ್ದ ಒಂದು ಹೋಟೆಲ್‌ನಲ್ಲಿ ಊಟ ಸಹ ಕೂಡ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

 

ಸಾರಾ ಅಲಿಖಾನ್ ಬೀದಿಯಲ್ಲಿ ಶಾಪಿಂಗ್ ಮಾಡುತ್ತಿರುವ ಚಿತ್ರಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ ಎಂದು ತಿಳಿದು ಬಂದಿದೆ.

ಇತ್ತೀಚಿಗೆ ಸರ ಅಲಿಖಾನ್ ವಿವಾದಲ್ಲಿ ಸಿಲುಕಿದ್ದರು ನಟಿ ಸಾರಾ ಅಲಿಖಾನ್​ ಅವರು ಅಭಿಷೇಕ್​ ಕಪೂರ್​ ನಿರ್ದೇಶನ ಕೇದರನಾಥ್​ ಚಿತ್ರಕ್ಕಾಗಿ 2018 ರಜೂನ್​ ವರೆಗೂ ಡೇಟ್​ ನೀಡಿದ್ದರು. ಆದರೆ ನಿರ್ಮಾಪಕ –ನಿರ್ದೇಶಕರನಡುವೆ ಕಾರಣಾಂತರದಿಂದ ವಿವಾದ ಉಂಟಾಗಿ ಚಿತ್ರ ನಿರ್ಮಾಣ ಅರ್ಧಕ್ಕೆ ನಿಂತು ಹೋಗಿತ್ತು.ಆದ ಕಾರಣ ಸಾರಾ ಮತ್ತೊಂದು ಚಿತ್ರ ‘ಸಿಂಬಾ’ದಲ್ಲಿ ಬ್ಯುಸಿ ಆಗಿದ್ದರು. ಪುನಃ ‘ಕೇದರನಾಥ್’ ಸಿನಿಮಾಕ್ಕೆ ಇನ್ನೊಬ್ಬ ನಿರ್ಮಾಪಕ ಸಿಕ್ಕಿದ ಕಾರಣ ಚಿತ್ರತಂಡ ಮತ್ತೆ ಚಿತ್ರೀಕರಣ ಶುರುಮಾಡಿತ್ತು. ಆದರೆ ನಟಿ ಸಾರಾ ಅವರ ಮ್ಯಾನೇಜರ್ ಮಾತ್ರ ಸಿಂಬಾ ಶೂಟಿಂಗ್ ಪೂರ್ಣವಾದ ನಂತರ ಕೇದರ್‌‍ನಾಥ್ ಚಿತ್ರಕರಣದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದರು. ಇದರಿಂದ ಕೋಪಗೊಂಡ ಕೇದರ್‌ ನಾಥ್ ಸಿನಿಮಾ ನಿರ್ಮಾಪಕರು ಸಾರಾ ಮೇಲೆ ಪ್ರಕರಣ ದಾಖಲಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top