ಸಮಾಚಾರ

” ನನ್ನ ಫಿಟ್​ನೆಸ್​ಗಿಂತ ರಾಜ್ಯದ ಅಭಿವೃದ್ಧಿ ಫಿಟ್​ನೆಸ್​ ಮುಖ್ಯ” ಮೋದಿ ಸವಾಲಿಗೆ ಕುಮಾರಸ್ವಾಮಿ ಪ್ರತಿಕ್ರಿಯೆ.

ಇಂದು ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ರವಾನಿಸಿದ್ದ ಫಿಟ್ ನೆಸ್ ಸವಾಲಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ನನ್ನ ರಾಜ್ಯದ ಅಭಿವೃದ್ಧಿ ಹಾಗೂ ಫಿಟ್ನೆಸ್​ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದೇನೆ ಇದಕ್ಕೆ ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತೇನೆ ಎಂದು ಉತ್ತರಿಸಿದ್ದಾರೆ ​ಎಂದು ಮೋದಿ ಸವಾಲಿಗೆ ಉತ್ತರಿಸಿದ್ದಾರೆ.

 

 

ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಅವರು ‘ನಾನು ಫಿಟ್ ಆದ್ರೆ ಭಾರತ ಫಿಟ್ (#HumFitTohIndiaFit )’ ಎಂಬ ಅಭಿಯಾನದ ಅಡಿಯಲ್ಲಿ ಎಲ್ಲ ಭಾರತೀಯರು ತಮ್ಮ ಫಿಟ್‌ನೆಸ್‌ ಮಂತ್ರದ ಬಗ್ಗೆ ವಿಡಿಯೊ ಮಾಡಿ ಹಂಚಿಕೊಳ್ಳಲು ಟ್ವಿಟರ್‌ನಲ್ಲಿ ಕರೆ ನೀಡಿದ್ದರು. ಈ ಫಿಟ್ನೆಸ್ ಅಭಿಯಾನ ಇದೀಗ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಮೇ 22 ರಂದು ಟ್ವಿಟರ್​ನಲ್ಲಿ ಆರಂಭವಾಗಿದ್ದ ಈ #FitnessChallengeನ್ನು ಪ್ರಥಮವಾಗಿ ಸ್ವೀಕರಿಸಿದ್ದ ​ ವಿರಾಟ್​ ಕೊಹ್ಲಿ, ಮೇ 24 ರಂದು ಪ್ರಧಾನಿ ಮೋದಿಗೆ ಫಾರ್ವರ್ಡ್ ಮಾಡಿದ್ದರು ಅದನ್ನು ಸ್ವೀಕರಿಸಿದ್ದ ಮೋದಿ ಇದೀಗ ಕೊಹ್ಲಿಯ ಸವಾಲನ್ನು ಕಂಪ್ಲೀಟ್ ಮಾಡಿದ್ದು ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿಗೆ ರವಾನಿಸಿದ್ದರು.

ಮೋದಿ ತಮ್ಮ ಫಿಟ್ನೆಸ್ ವಿಡಿಯೋ ಒಂದನ್ನು ಟ್ವಿಟರ್ ನಲ್ಲಿ ಪೋಸ್ಟ್​ ಮಾಡಿದ್ದು ಇದರೊಂದಿಗೆ ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿ, ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಭಾರತಕ್ಕೆ ಅತಿ ಹೆಚ್ಚು ಪದಕ ತಂದುಕೊಟ್ಟ ಮಾಣಿಕಾ ಭಟ್ರ ಸೇರಿದಂತೆ 40 ವರ್ಷಕ್ಕೂ ಮೇಲ್ಪಟ್ಟ IPS ಅಧಿಕಾರಿಗಳಿಗೆ #FitnessChallenge ನ್ನು ಪಾಸ್​ ಮಾಡಿದ್ದರು.

 

 

ಇದೀಗ ಮೋದಿಯ ಫಿಟ್ ನೆಸ್ ವಿಚಾರವಾಗಿ ಟ್ವಿಟರ್ ನಲ್ಲಿಯೇ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ “ಮೋದೀಜೀ, ನನ್ನ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವುದಕ್ಕಾಗಿ ಧನ್ಯವಾದಗಳು. ಅರೋಗ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ ದೈಹಿಕ ಕಸರತ್ತು ಬಹಳ ಮುಖ್ಯ ಎಂಬುದನ್ನು ನಾನು ನಂಬಿದ್ದೇನೆ. ಯೋಗ ನನ್ನ ಪ್ರತಿನಿತ್ಯ ವ್ಯಾಯಾಮದ ಬಹುಮುಖ್ಯ ಭಾಗವಾಗಿದೆ.. ಆದರೂ ನಾನು ನನ್ನ ಫಿಟ್ನೆಸ್ ಗಿಂತಲೂ ರಾಜ್ಯದ ಅಭಿವೃದ್ಧಿ ಎಂಬ ಫಿಟ್​ನೆಸ್​ ಬಗ್ಗೆಯೇ ನನಗೆ ಹೆಚ್ಚು ಆಸಕ್ತಿಯಿದೆ. ಅದಕ್ಕೆ ನಿಮ್ಮ ಸಹಕಾರ ಬೇಕಾಗಿದೆ ” ಎಂದು ಮಾರ್ಮಿಕವಾಗಿ ಬರೆದುಕೊಂಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top