ಮನೋರಂಜನೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ 52ನೇ ಚಿತ್ರಕ್ಕೆ ಮುಹೂರ್ತ ಫಿಕ್ಸ್..

ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದು ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರೋವಾಗಲೇ ಅವರ ಮುಂದಿನ ಚಿತ್ರ ಯಾವುದೆಂಬ ಬಗ್ಗೆ ಸದಾ ಒಂದು ಕುತೂಹಲ ಇದ್ದೇ ಇರುತ್ತದೆ. ಇದೀಗ ಅವರ 50ನೇ ಚಿತ್ರ ತೆರೆಕಾಣುವುದಕ್ಕೆ ಮುಂಚೆಯೇ 52ನೇ ಚಿತ್ರದ ಬಗ್ಗೆ ಮಾತುಗಳು ಶುರುವಾಗಿವೆ. ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರದ ಶೂಟಿಂಗ್ ಮತ್ತು ಡಬ್ಬಿಂಗ್ ಮುಗಿಸಿಕೊಂಡು ಪೊನ್ ಕುಮಾರ್ ನಿರ್ದೇಶನದ ಯಜಮಾನ ಸಿನಿಮಾದಲ್ಲಿ ಬ್ಯುಸಿಯಾಗಿರುವ ದರ್ಶನ್ ಅದು ಮುಗಿಯುವ ಮುಂಚೆಯೇ ತಮ್ಮ ಮತ್ತೊಂದು ಚಿತ್ರದ ಕಡೆಗೆ ಗಮನಹರಿಸಿದ್ದಾರೆ.

 

 

ಎಂ.ಡಿ. ಶ್ರೀಧರ್ ನಿರ್ದೇಶನ ಮಾಡಲಿರುವ ಈ ಚಿತ್ರಕ್ಕೆ ‘ಒಡೆಯರ್’ ಎಂದು ಹೆಸರಿಡಲಾಗಿದ್ದು ಆಗಷ್ಟ್ 16ನೇ ತಾರೀಕಿನಂದು ಚ್ಚಿತ್ರ ಸೆಟ್ಟೇರಲಿದೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ಸಂದೇಶ್ ನಾಗರಾಜ್ ಅವರ ಹುಟ್ಟುಹಬ್ಬ ಆಗಸ್ಟ್ 16ರಂದು ಇರುವುದರಿಂದ ಅದೇ ದಿನ ತಮ್ಮ ಚಿತ್ರಕ್ಕೆ ಮುಹೂರ್ತ ನಡೆಸುವ ಬಗ್ಗೆ ತೀರ್ಮಾನ ಮಾಡಿದ್ದಾರೆ.

ಸದ್ಯಕ್ಕೆ ಚಿತ್ರದ ಉಳಿದ ತಾಂತ್ರಿಕವರ್ಗ ಮತ್ತು ತಾರಾಬಳಗದ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ.. ಆಗಷ್ಟ್ ಹದಿನಾರನೇ ತಾರೀಕಿನ ನಂತರ ಚಿತ್ರಕ್ಕೆ ಸಂಭಂದಿಸಿದ ಇನ್ನಷ್ಟು ಮಾಹಿತಿಗಳು ಹೊರಬೀಳಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top