ಸಮಾಚಾರ

ವಿರುಷ್ಕಾ ಮಾದರಿಯಲ್ಲೇ ಗುಟ್ಟಾಗಿ ಮದುವೆಯಾಗಲು ದೀಪಿ-ರಣವೀರ್ ಪ್ಲಾನ್

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮದುವೆ ಕಳೆದ ವರ್ಷ ಇಟಲಿಯಲ್ಲಿ ನಡೆದಿತ್ತು, ಆಪ್ತರು ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಡಿಸೆಂಬರ್ 9, 10, 11ರಂದು ಮೂರು ದಿನ ಕಾರ್ಯಕ್ರಮ ನಡೆದಿತ್ತು, ಮೂರನೇ ದಿನ ಮದುವೆ ನಡೆಯಿತು. ಈಗ ಇದೆ ರೀತಿಯಲ್ಲಿ ಇನ್ನೊಂದು ಬಾಲಿವುಡ್ ಜೋಡಿ ಮದುವೆಗೆ ತಯಾರಿ ನಡೆಸಿದೆ. ಮೂಲಗಳ ಪ್ರಕಾರ ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಇಟಲಿಯಲ್ಲಿ ವಿವಾಹ ಅಗಲಿದ್ದಾರೆ.

ಸದ್ಯ ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ ರಣವೀರ್ ನವೆಂಬರ್ ನಲ್ಲಿ ಇಟಲಿಯಲ್ಲಿ ಮದುವೆ ನಡೆಯಲಿದೆ ಎನ್ನುವ ಮಾಹಿತಿ ಸಿಕ್ಕಿದೆ. ಕಳೆದ 5 ವರ್ಷಗಳಿಂದ ರಿಲೇಶನ್ ನಲ್ಲಿರುವ ರಣವೀರ್ ಹಾಗೂ ದೀಪಿಕಾ ಈವರೆಗೂ ತಮ್ಮ ಪ್ರೀತಿ ಬಗ್ಗೆ ಎಲ್ಲಿಯೂ ಕೂಡ ಬಹಿರಂಗವಾಗಿ ಹೇಳಿಕೊಂಡಿದಿಲ್ಲ.

 

 

ಇವರಿಬ್ಬರು ಈಗ ನವೆಂಬರ್ ನಲ್ಲಿ ಇಟಲಿಯಲ್ಲಿ ಮದುವೆ ಅಗಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ವಲಯದಲ್ಲಿ ಹರಿದಾಡುತ್ತಿದೆ. ಇನ್ನೊಂದು ಕುತೂಹಲಕಾರಿ ವಿಷಯವೆಂದರೆ ಸ್ವಿಜರ್ಲ್ಯಾಂಡ್ ಸರ್ಕಾರ ಅಲ್ಲಿ ಮದುವೆಯಾಗುವಂತೆ ಜೋಡಿಗೆ ಆಹ್ವಾನ ನೀಡಿದೆ ಎಂದು ತಿಳಿದು ಬಂದಿದೆ. ರಣವೀರ್ ಸಿಂಗ್ ಈಗಾಗಲೇ ಸ್ವಿಜಲ್ಯಾಂಡ್ ಪ್ರವಾಸೋದ್ಯಮದ ರಾಯಭಾರಿಯಾಗಿದ್ದಾರೆ ಇದೆ ಕಾರಣಕ್ಕಾಗಿ ಅವರನ್ನು ಸ್ವಿಜಲ್ಯಾಂಡ್ ಸರ್ಕಾರ ಇವರಿಗೆ ಅಲ್ಲಿಯೇ ಮದುವೆ ಆಗುವಂತೆ ಮನವಿ ಮಾಡಿದೆ ಎನ್ನಲಾಗುತ್ತಿದೆ.

ಸದ್ಯ ರಣವೀರ್ ಕೈನಲ್ಲಿ ಎರಡು ಚಿತ್ರಗಳಿವೆ. ಸಿಂಬಾ ಹಾಗೂ ಗಲ್ಲಿ ಬಾಯ್ ಚಿತ್ರದ ಶೂಟಿಂಗ್ ನಲ್ಲಿ ರಣವೀರ್ ಬ್ಯುಸಿ. ಆದ್ರೆ ದೀಪಿಕಾ ಮಾತ್ರ ಪದ್ಮಾವತ್ ನಂತ್ರ ಯಾವುದೇ ಸಿನೆಮಾಗೆ ಸಹಿ ಹಾಕಿಲ್ಲ. ವಿವಾಹಕ್ಕೆ ಸಿನಿಮಾ ಡೇಟ್ ಅಡ್ಡಿ ಬರದಿರಲಿ ಎನ್ನುವ ಕಾರಣಕ್ಕೆ ದೀಪಿಕಾ ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top