ಮನೋರಂಜನೆ

ರಾಮ್ ಗೋಪಾಲ್ ವರ್ಮಾ ಅವರ ದ್ವಿಭಾಷಾ ಚಿತ್ರದಲ್ಲಿ ಡಾಲಿ ಧನಂಜಯ್.

ಸೂರಿ ನಿರ್ದೇಶನದ ಟಗರು ಚಿತ್ರದಲ್ಲಿ ಡಾಲಿಯಾಗಿ ಅಬ್ಬರಿಸಿರುವವರು ಧನಂಜಯ್. ಟಗರು ಚಿತ್ರದ ನಂತರ ಧನಂಜಯ್ ನಿಂತಲ್ಲಿ ಕುಂತಲ್ಲಿ ಸುದ್ದಿಯ ಸುಗ್ಗಿ. ಬಹುಶಃ ಅಂಥಾದ್ದೊಂದು ಪಾತ್ರವನ್ನು ಧನಂಜಯ್ ನಿರ್ವಹಿಸಿದ್ದಾರೆಂದು ಯಾರೂ ಊಹಿಸಿರಲಿಕ್ಕಿಲ್ಲ. ಆದರೆ ಸೂರಿ ರೂಪಿಸಿರೋ ಆ ಪಾತ್ರದಲ್ಲಿನ ಅಬ್ಬರದ ನಟನೆಯ ಮೂಲಕ ಧನಂಜಯ್ ಸಿನಿಮಾ ಜೀವನದ ಮತ್ತೊಂದು ಆಯಾಮದತ್ತ ಹೊರಳಿಕೊಳ್ಳೋ ಲಕ್ಷಣಗಳೂ ದಟ್ಟವಾಗಿವೆ. ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ರಾಮ್ ಗೋಪಾಲ್ ವರ್ಮಾ ಅವರ ಚಿತ್ರದಲ್ಲಿ ಧನಂಜಯ್ ನಟಿಸುತ್ತಿದ್ದಾನಂತೆ.

 

 

ಟಗರು ಶೈಲಿಯ ರಿಯಲಿಸ್ಟಿಕ್ ಅಂಡರ್‌ವರ್ಲ್ಡ್ ಕಥೆಗಳನ್ನಾಧರಿಸಿದ ಮಾಸ್ ಚಿತ್ರಗಳ ಮೂಲಕವೇ ದೇಶಾದಂತ ಹೆಸರುವಾಸಿಯಾಗಿದ್ದವರು ರಾಮ್ ಗೋಪಾಲ್ ವರ್ಮಾ ಇಂಥ ವರ್ಮಾ ಖುದ್ದು ಬೆಂಗಳೂರಿಗೆ ಬಂದು ಟಗರು ಚಿತ್ರವನ್ನು ಮತ್ತು ಅದರಲ್ಲಿನ ಧನಂಜಯ್ ಅವರ ಅಭಿನಯ ಕಂಡು ಥ್ರಿಲ್ ಆಗಿದ್ದರಲ್ಲಾ ಅವತ್ತೇ ಅವರ ಕಣ್ಣು ಡಾಲಿಯ ಮೇಲೆ ಬಿದ್ದಿತ್ತಂತೆ. ಧನಂಜಯ್ ಅವರನ್ನು ಹಾಕಿಕೊಂಡು ಸಿನಿಮಾ ಮಾಡಬೇಕು ಎನ್ನುವ ಪ್ಲಾನನ್ನು ಅಂದೇ ಹೇಳಿದ್ದರಂತೆ ಇದೀಗ ಆ ಸಮಯ ಸನ್ನಹಿತವಾಗಿದ್ದು ಆರ್ಜಿವಿ ನಿರ್ಮಾಣದ ಚಿತ್ರದಲ್ಲಿ ಧನಂಜಯ್ ನಟಿಸುವುದು ಪಕ್ಕಾ ಆಗಿದೆಯಂತೆ.

ಬಲ್ಲ ಮೂಲಗಳ ಪ್ರಕಾರ ವರ್ಮಾ ತಮ್ಮ ಬ್ಯಾನರ್ ಹಾಗೂ ರಾಶಿ ಕಂಬೈನ್ಸ್ ನ ಸಹಯೋಗದಲ್ಲಿ ಚಿತ್ರವೊಂದನ್ನು ನಿರ್ಮಾಣ ಮಾಡಲು ಮುಂದಾಗಿದ್ದು ಇದು ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗಲಿದೆ.. ಆರ್.ಜಿ.ವಿ. ಗರಡಿಯಲ್ಲಿ ಬಹುಕಾಲದಿಂದಲೂ ಬೆಳೆದಿದ್ದ ಯುವ ನಿರ್ದೇಶಕ ಸಿದ್ದಾಂರ್ಥ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಸಿದ್ದಾರ್ಥ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಪ್ರಥಮ ಚಿತ್ರ ಇದಾಗಲಿದೆ.

 

 

ಈ ಚಿತ್ರಕ್ಕೆ ಹೆಸರು ಇನ್ನೂ ಫೈನಲ್ ಆಗಿಲ್ಲವಾದರೂ ‘ಭೈರವ ಗೀತಾ’ ಎನ್ನುವ ಹೆಸರು ಸೂಚಿಸಲಾಗಿದೆ. ಇದೆ ತಿಂಗಳ 21ರಂದು ಚಿತ್ರದ ಫರ್ಸ್ಟ್ ಲುಕ್ ಪೋಸ್ಟರ್ ರಿವೀಲ್ ಆಗಲಿದ್ದು ಅದರಲ್ಲಿ ಚಿತ್ರದ ಅಂತಿಮ ಟೈಟಲ್ ಏನು ಎಂಬುದರ ಮಾಹಿತಿ ನೀಡಲಿದೆ ಚಿತ್ರತಂಡ. ಸದ್ಯಕ್ಕೆ ಚಿತ್ರದ ಉಳಿದ ತಾಂತ್ರಿಕವರ್ಗ ಮತ್ತು ತಾರಾಬಳಗದ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ ಹಾಗಾಗಿ ಟೈಟಲ್ ಪೋಸ್ಟರ್ ಮೂಲಕವೇ ಈ ವಿಚಾರಗಳೂ ಬಹಿರಂಗವಾಗಲಿದೆ.

ಅಂದಹಾಗೆ ಇದು ಒಂದು ದ್ವಿಭಾಷಾ ಚಿತ್ರವಾಗಿರುವುದರಿಂದ ನಾಯಕನಾಗಿ ಅಷ್ಟೇನೂ ನೆಲೆ ನಿಲ್ಲದ ಧನಂಜಯ್ ಅವರಿಗೆ ಈ ಚಿತ್ರ ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲೂ ಒಂದೊಳ್ಳೆ ಬ್ರೇಕ್ ಪಡೆಯಲು ಸುವರ್ಣಾವಕಾಶ” ಎಂಬ ಮಾತುಗಳು ಆಗಲೇ ಶುರುವಾಗಿವೆ,

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top