ಮನೋರಂಜನೆ

ಪೊಗರು ಮುಂಚೆಯೇ ಮತ್ತೆರೆಡು ಸಿನಿಮಾಗಳಿಗೆ ಸಹಿಹಾಕಿದ ದೃವ ಸರ್ಜಾ.

ಮಾಡಿದ್ದು ಮೂರೇ ಚಿತ್ರಗಳಾಗಿದ್ದರೂ ಮೂರಕ್ಕೆ ಮೂರನ್ನು ಸೂಪರ್ ಹಿಟ್ ಚಿತ್ರಗಳನಾಗಿಸಿ ಚಂದನವನದ ಯುವ ಸ್ಟಾರ್ ನಟನಾಗಿ ಬೆಳೆದಿರುವಾತ ಆಕ್ಷನ್ ಪ್ರಿನ್ಸ್ ದೃವ ಸರ್ಜಾ. ಅದ್ದೂರಿ, ಬಹುದ್ದೂರ್, ಭರ್ಜರಿಗಳಂತಹ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿರೋ ದೃವ ಸರ್ಜಾ ಸದ್ಯ ನಂದಕಿಶೋರ್ ನಿರ್ದೇಶಿಸುತ್ತಿರುವ ‘ಪೊಗರು’ ಚಿತ್ರದ ಶೂಟಿಂಗಿನಲ್ಲಿ ಬ್ಯುಸಿಯಾಗಿದ್ದಾರೆ..

 

 

ಸಿನಿಮಾ ಆರಂಭಿಸಿ ಒಂದೆರಡು ವರ್ಷಗಳ ಕಾಲ ಎಳೆದಾಡಿ ಅಭಿಮಾನಿಗಳನ್ನು ವರ್ಷಾನುಗಟ್ಟಲೆ ಕಾಯಿಸುತಿದ್ದ ದೃವ ಸರ್ಜಾ ಇದೀಗ ಎಚ್ಚೆತ್ತುಕೊಂಡಂತಿದ್ದು ಪೊಗರು ಚಿತ್ರ ಇನ್ನೂ ಶೂಟಿಂಗ್ ಹಂತದಲ್ಲಿರುವಾಗಲೇ ಮೆತ್ತೆರಡು ಚಿತ್ರಗಳತ್ತ ಗಮನಹರಿಸಿದ್ದಾರೆ. ಈಗಾಗಲೇ ನಿರ್ಮಾಪಕ ಉದಯ್ ಮೆಹ್ತಾ ಅವರ ಚಿತ್ರವನ್ನು ಒಪ್ಪಿಕೊಂಡಿರುವ ಭರ್ಜರಿ ಹುಡುಗ, ಜಗ್ಗುದಾದಾ ನಿರ್ದೇಶಕ ರಾಘವೇಂದ್ರ ಹೆಗಡೆ ಅವರ ಚಿತ್ರಕ್ಕೂ ಗ್ರೀನ್ ಸಿಗ್ನಲ್ ನೀಡಿದ್ದಾರೆ. ‘ಪೊಗರು’ ಚಿತ್ರ ದೃವನಿಗೆ ನಾಲ್ಕನೇ ಸಿನಿಮಾವಾಗಿದ್ದು ಅದು ಮುಗಿದ ತಕ್ಷಣ ಉದಯ್ ಮೆಹ್ತಾ ನಿರ್ಮಾಣದ ಚಿತ್ರದಲ್ಲಿ ನಟಿಸಲಿದ್ದಾರೆ ನಂತರ ಸೆಟ್ಟೇರಲಿರುವ ರಾಘವೇಂದ್ರ ಹೆಗಡೆಯವರ ಚಿತ್ರ ದೃವಾಗೆ ಆರನೇ ಸಿನಿಮಾವಾಗಲಿದೆ.

ಇನ್ನೂ ಹೆಸರಿಡದ ದೃವ ಅವರ ಆರನೇ ಚಿತ್ರಕ್ಕೆ ರಾಘವೇಂದ್ರ ಹೆಗಡೆ ಅವರು ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಈ ಹಿಂದೆ ಜಗ್ಗುದಾದ ಸಿನಿಮಾದಲ್ಲೂ ಕೂಡ ಅವರು ನಿರ್ದೇಶಕ ಮತ್ತು ನಿರ್ಮಾಪಕ ಎರಡನ್ನೂ ನಿಭಾಯಿಸಿದ್ದರು. ಈ ಚಿತ್ರಕ್ಕೆ ‘ಆಶಿಕಿ 2’, ‘ಮರ್ಡರ್ 2’, ಜಿಸ್ಮ್ 2, ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳಿಗೆ ಕಥೆ ಬರೆದಿದ್ದ ಬಾಲಿವುಡ್ ಸೀಮೆಯ ಖ್ಯಾತ ಬರಹಗಾರ ಶಗುಫ್ತಾ ಕಥೆ ಬರೆದುಕೊಡಲಿದ್ದಾರಂತೆ. ಎಲ್ಲ ಅಂದುಕೊಂಡಂತೆ ಆದರೆ ಈ ಚಿತ್ರದ 2019ರ ಆರಂಭದಲ್ಲಿ ಸೆಟ್ಟೇರಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top