ಸಮಾಚಾರ

ಈ ಮೀನು ತಿಂದ್ರೆ ಅಸ್ತಮಾ ಮತ್ತು ಇತರ ಉಸಿರಾಟದ ತೊಂದರೆ ಮಂಗಮಾಯವಾಗುತ್ತದೆ

ಹಿರಿಯರಲ್ಲಿ ಹೆಚ್ಚಾಗಿ ಕಾಣಿಸುವ ಅಸ್ತಮಾ ಮತ್ತು ಇತರ ಉಸಿರಾಟದ ತೊಂದರೆಗಳನ್ನು ಬಗೆಹರಿಸುವ ಸಾಂಪ್ರದಾಯಿಕ ಮೀನಿನ ಔಷಧ ವಿತರಿಸುವ ಕಾರ್ಯಕ್ರಮ ತೆಲಂಗಾಣ ರಾಜ್ಯದ ಹೈದರಾಬಾದಿನ ನಂಪಲ್ಲಿ ಪ್ರದರ್ಶನ ಮೈದಾನದಲ್ಲಿ ಪ್ರಾರಂಭವಾಗಿದೆ. ದೇಶದ ನಾನಾ ಭಾಗಗಳಿಂದ ಹೈದರಾಬಾದಿನ ನಿಜಾಮ ನಗರಕ್ಕೆ ಜನರು ಆಗಮಿಸಿದ್ದಾರೆ. ಮೀನಿನ ಔಷಧ ಸೇವನೆ ಮಾಡಿದರೆ ಅಸ್ತಮಾ ಸಮಸ್ಯೆ ವಾಸಿಯಾಗುತ್ತದೆ ಎಂಬ ನಂಬಿಕೆ ಜನರಲ್ಲಿರುವುದು ಲಕ್ಷಾಂತರ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

 

 

ಜನರಿಗೆ ಈ ಔಷಧ ವಿತರಣೆ ಮಾಡುವ ಕಾರ್ಯಕ್ರಮವನ್ನು ಬಥಿನಿ ಕುಟುಂಬ ಆಯೋಜನೆ ಮಾಡುತ್ತ ಬರುತ್ತಿದೆ. 1845ರಿಂದ ಇದು ಪ್ರಾರಂಭಾಗಿದ್ದು ಉಚಿತವಾಗಿ ಜನರಿಗೆ ಈ ಔಷಧ ನೀಡಲಾಗುತ್ತದೆ. 4 ಲಕ್ಷಕ್ಕೂ ಹೆಚ್ಚು ಜನರು ಈ ವರ್ಷ ಆಗಮಿಸುವ ನಿರೀಕ್ಷೆಯಿದ್ದು 450 ಕೆಜಿ ತೂಕದ ಔಷಧಿಯನ್ನು ತಯಾರಿಸುತ್ತಿದ್ದಾರೆ.

ನಾಟಿ ಔಷಧ ಮಿಶ್ರಿತ ಜೀವಂತ ಮುರ್ರೆಲ್ (ಇಂಗ್ಲಿಷ್ ಹೆಸರು) ಮೀನನ್ನು (ಹಾವು ಮೀನನ್ನು ಹೋಲುವ ಸಣ್ಣ ಜಾತಿಯ ಮೀನು) ನುಂಗುವುದರಿಂದ ಅಸ್ತಮಾ ನಿವಾರಣೆ ಆಗುತ್ತದೆ ಎಂಬುದು ಈ ಜನರ ನಂಬಿಕೆ. ಹೈದರಾಬಾದ್‌ನ ಬಥಿನಿ ಗೌಡ ಕುಟುಂಬಸ್ಥರು 1845ರಿಂದಲೂ ಇಂಥದ್ದೊಂದು ವಿಶಿಷ್ಟ ಚಿಕಿತ್ಸಾ ಕ್ರಮ ಅನುಸರಿಸುತ್ತಾ ಬಂದಿದ್ದು, ಇದೀಗ ಲಕ್ಷಾಂತರ ಜನ ಪ್ರತಿ ವರ್ಷ ಚಿಕಿತ್ಸೆಗಾಗಿ ಅವರ ಮೊರೆ ಹೋಗುತ್ತಾರೆ.

ವರ್ಷಕ್ಕೊಮ್ಮ ಚಿಕಿತ್ಸೆ: ಪ್ರತಿ ವರ್ಷ ‘ಮೃಗಶಿರ ಕಾರ್ತಿ’ಯಂದು ಮೀನಿನ ಚಿಕಿತ್ಸೆ ನೀಡುತ್ತಾರೆ.ಸಾವಿರಾರು ಜನ ಮೀನಿನ ಚಿಕಿತ್ಸೆ ಪಡೆದಿದ್ದಾರೆ. ಚಿಕಿತ್ಸೆ ನೀಡಲೆಂದೇ ‘ಬಥಿನಿ ಮೃಗಶಿರ ಕಾರ್ತಿ ಮೀನು ಪ್ರಸಾದ ಟ್ರಸ್ಟ್‌’ ಕಾರ್ಯಾಚರಿಸುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top