ಸಮಾಚಾರ

ಕರೀಷ್ಮಾ ಕಪೂರ್ ಎರಡನೇ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ ತಂದೆ

ಎರಡು ವರ್ಷಗಳ ಹಿಂದೆ ಗಂಡನಿಂದ ವಿಚ್ಛೇದನ ಪಡೆದಿರುವ ಬಾಲಿವುಡ್ ನಟಿ ಕರೀಷ್ಮಾ ಕಪೂರ್ ಸದ್ಯ ಮುಂಬೈ ಮೂಲದ ಉದ್ಯಮಿ ಸಂದೀಪ್ ತೋಷ್ಸಿ ವಾಲಾ ರವರನ್ನು ಪ್ರೀತಿ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇವರನ್ನು ಮದುವೆ ಕೂಡ ಅಗಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ವಲಯದಲ್ಲಿ ಹರಿದಾಡಿತ್ತು. ಸದ್ಯ ವಿಚಾರವಾಗಿ ಕರಿಷ್ಮಾ ಕಪೂರ್ ತಂದೆ ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

 

 

 

ಕರಿಷ್ಮಾ ಹಾಗು ಸಂದೀಪ್ ಮಾಡುವೆ ವಿಚಾರವಾಗಿ ಹರಡಿರುವ ವದಂತಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಕರಿಷ್ಮಾ ತಂದೆ ರಣಧೀರ್ ಕಪೂರ್ “ಕರಿಷ್ಮಾ ಮದುವೆ ಬಗ್ಗೆ ಕೇಳಿಸುತ್ತಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು. ಮತ್ತೆ ಮದುವೆಯಾಗುವಂತೆ ಕರಿಷ್ಮಾಗೆ ಹೇಳಿದೆ. ಆದರೆ ಬಿಲ್ ಕುಲ್ ಆಗಲ್ಲ ಎಂದು ಹೇಳಿದಳು. ಮದುವೆ ಬಗ್ಗೆ ಆಸಕ್ತಿ ಇಲ್ಲ ಎಂದಳು. ಈ ಬಗ್ಗೆ ನಾವಿಬ್ಬರೂ ಚರ್ಚಿಸಿಕೊಂಡಿದ್ದೇವೆ. ಮಕ್ಕಳೇ ನನ್ನ ಜಗತ್ತೆಂದು ಅವರಿಗೆ ಉತ್ತಮ ಭವಿಷ್ಯ ರೂಪಿಸುವುದೇ ತನ್ನ ಧ್ಯೇಯೋದ್ದೇಶ ಎಂದು ಹೇಳಿದಳು. ಸಂದೀಪ್ ಬಗ್ಗೆ ನನಗೆ ಅಷ್ಟಾಗಿ ಗೊತ್ತಿಲ್ಲ’ ಎಂದು ಹೇಳುವುದರ ಮೂಲಕ ಈ ವಿಚಾರಕ್ಕೆ ತೆರೆ ಎಳೆದಿದ್ದಾರೆ ಎಂದು ತಿಳಿದು ಬಂದಿದೆ.

“ಒಂದಂತೂ ನಾನು ಹೇಳಬಲ್ಲೆ. ನನ್ನ ಮಗಳು ಬೇರೊಬ್ಬರನ್ನು ಪ್ರೀತಿಸುತ್ತಿಲ್ಲ. ಒಂದು ವೇಳೆ ಇನ್ನೊಬ್ಬ ವ್ಯಕ್ತಿಯ ಜತೆಗೆ ಹೊರಗೆ ಹೋಗಬೇಕಾದರೆ ಯಾವುದೇ ಅಭ್ಯಂತರ ಇಲ್ಲದೆ ಹೋಗಬಹುದು. ಅದರಲ್ಲಿ ತಪ್ಪು ಏನಿದೆ? ಸ್ನೇಹಿತರ ಜತೆಗೆ ಹೊರಗೆ ಹೋಗುವುದು ತಪ್ಪಲ್ಲ ಅಲ್ಲವೇ? ಸದ್ಯ ಕರಿಷ್ಮಾ ತನ್ನ ಜೀವನವನ್ನು ಹಾಯಾಗಿ ಕಳೆಯುತ್ತಿದ್ದಾರೆ. ಕರಿಷ್ಮಾ ಮತ್ತೆ ವಿವಾಹವಾಗುವ ಅಗತ್ಯವಿಲ್ಲ” ಎಂದು ತಮ್ಮ ಮಾತಿಗೆ ವಿರಾಮ ನೀಡಿದ್ದಾರೆ ಹಿರಿಯ ನಟ ರಣಧೀರ್ ಕಪೂರ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top