ಸಿನಿಮಾ

ತೆಲುಗು, ಮಲಯಾಳಂ ಚಿತ್ರರಂಗಕ್ಕೆ ಹಾರಿದ ರಘು ದೀಕ್ಷಿತ್

ಹ್ಯಾಪಿ ನ್ಯೂ ಇಯರ್​ ಚಿತ್ರದ ಬ್ಯೂಟಿಫುಲ್​ ಹಾಡುಗಳು ರಿಲೀಸ್​ ಆಗಿದ್ದು, ಹ್ಯಾಪಿ ನ್ಯೂ ಇಯರ್​ ಚಿತ್ರದ ಹ್ಯಾಪಿ ಹ್ಯಾಪಿ ಹಾಡುಗಳು ರಿಲೀಸ್​ ಆಗಿವೆ. ಚಿತ್ರದಲ್ಲಿ ಒಟ್ಟು 6 ಹಾಡುಗಳಿದ್ದು, ರಘು ದೀಕ್ಷಿತ್​ ಸಂಗೀತ ನಿರ್ದೆಶನದಲ್ಲಿ ಎಲ್ಲಾ ಹಾಡುಗಳು ಸಖತ್​ ಆಗೇ ಮೂಡಿ ಬಂದಿವೆ. ರಘು ದೀಕ್ಷಿತ್, ಆ ನಂತರ `ಆರ್ಕೆಸ್ಟ್ರಾ’, `ಗರುಡ’ ಮುಂತಾದ ಸಿನಿಮಾಗಳಿಗೆ ಸಂಗೀತ ಸಂಯೋಜಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಆರ್‌‌ಡಿಎಕ್ಸ್‌‌‌‌‌‌ ಎಂಬ ಆಡಿಯೋ ಸಂಸ್ಥೆಯನ್ನು ಕೂಡಾ ರಘು ದೀಕ್ಷಿತ್ ಸ್ಥಾಪಿಸಿದ್ದಾರೆ.

 

 

ಈಗ ರಘು ತೆಲುಗು ಮತ್ತು ಮಲಯಾಳಂ ಚಿತ್ರರಂಗಕ್ಕೆ ಹಾರಿದ್ದಾರೆ. ಮಲಯಾಳಂನ `ಕೂಡೆ’ ಎಂಬ ಸಿನೆಮಾಗೆ ರಘು ಸದ್ಯಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈ ಚಿತ್ರವನ್ನು ಅಂಜಲಿ ಮೆನನ್ ಎನ್ನುವವರು ನಿರ್ದೇಶಿಸಿದ್ದು, ಚಿತ್ರಕ್ಕೆ ಇಬ್ಬರು ಸಂಗೀತ ನಿರ್ದೇಶಕರು ಸಂಯೋಜಿಸುತ್ತಿರುವುದು ವಿಶೇಷ.

‘ಕೂಡೆ’ ಚಿತ್ರದ ನಾಲ್ಕು ಹಾಡುಗಳು ಮತ್ತು ಹಿನ್ನೆಲೆ ಸಂಗೀತವನ್ನು ರಘು ದೀಕ್ಷಿತ್ ಸಂಯೋಜಿಸಿದರೆ, ಮಲಯಾಳಂನ ಹಿರಿಯ ಸಂಗೀತ ನಿರ್ದೇಶಕ ಎಂ. ಜಯಚಂದ್ರನ್ ಎರಡು ಹಾಡುಗಳನ್ನು ಕಂಪೋಸ್‌‌‌‌‌‌ ಮಾಡಿದ್ದಾರೆ. ಟಾಲಿವುಡ್ ನಲ್ಲಿ ಕೂಡ ವಿಜಯ್ ವೇಲಕಂಠಿ ನಿರ್ದೇಶಿಸಿರುವ `ವೈಫ್ ಆಫ್ ರಾಮ್’ ಎಂಬ ಸಿನೆಮಾಗೆ ರಘು ದೀಕ್ಷಿತ್ ಸಂಗೀತ ಸಂಯೋಜಿಸಿದ್ದಾರೆ. ಇದೊಂದು ಥ್ರಿಲ್ಲರ್ ಸಿನಿಮಾ ಆಗಿದ್ದು, ಮೋಹನ್ ಬಾಬು ಪುತ್ರಿ ಲಕ್ಷ್ಮಿ ಮಂಚು ಪ್ರಧಾನ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ.

ಈಗಾಗಲೇ ಕನ್ನಡ, ಹಿಂದಿ ಹಾಗು ತಮಿಳು ಚಿತ್ರರಂಗದಲ್ಲಿ ಸಂಗೀತ ಸಂಯೋಜಿಸಿದ್ದ ರಘು ದೀಕ್ಷಿತ್ ಈಗ ಈಗ ತೆಲುಗು ಮತ್ತು ಮಲಯಾಳಂ ಸಿನಿಮಾಗಳಿಗೆ ಸಂಗೀತ ಸಂಯೋಜಿಸುವ ಮೂಲಕ ಪಂಚಭಾಷಾ ಸಂಗೀತ ನಿರ್ದೇಶಕ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top