ಸಿನಿಮಾ

ಬಿಗ್ ಸ್ಕ್ರೀನ್ ಮೇಲೆ ಮತ್ತೆ ಒಂದಾಗಿ ಕಾಣಿಸಿಕೊಳ್ಳಲಿದ್ದಾರೆ ಶಾರುಕ್ ಹಾಗು ಸಲ್ಲು

ಬಾಲಿವುಡ್ ಖ್ಯಾತ ನಟರಾದ ಸಲ್ಮಾನ್ ಖಾನ್ ಮತ್ತು ಶಾರುಕ್ ಖಾನ್ ಶೀಘ್ರದಲ್ಲಿ ಒಂದಾಗಿ ಅಭಿನಯ ಮಾಡಲಿದ್ದಾರೆ. ರೇಸ್-3 ಸಿನಿಮಾ ರಿಲೀಸ್ ಜೊತೆಗೆ ಆನಂದ್ ಎಲ್ ರಾಯ್ ಝೀರೋ ಚಿತ್ರದ ಟೀಸರ್ ಬಿಡುಗಡೆ ಮಾಡಲಿದ್ದಾರೆ. ಈ ಚಿತ್ರದ ಟೀಸರ್ ನಲ್ಲಿ ಶಾರುಕ್ –ಸಲ್ಮಾನ್ ಒಟ್ಟಿಗೆ ಅಭಿನಯದ ಮಾಡಲಿದ್ದಾರೆ ಎನ್ನುವ ಮಾಹಿತಿ ಈಗ ಲಭ್ಯವಾಗಿದೆ.

ಟೀಸರ್ ನ ಒಂದು ದೃಶ್ಯದಲ್ಲಿ ಶಾರುಕ್-ಸಲ್ಮಾನ್ ಬಾಕ್ಸಿಂಗ್ ರಿಂಗ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವರದಿಯೊಂದರ ಪ್ರಕಾರ ಬಾಕ್ಸಿಂಗ್ ರಿಂಗ್ ನಲ್ಲಿ ಇಬ್ಬರು ಕಲಾವಿದರು ಡಾನ್ಸ್ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಮಂಗಳವಾರ ವಿತರಕರು ಹಾಗೂ ಪ್ರದರ್ಶಕರಿಗಾಗಿ ಟೀಸರ್ ಪ್ರದರ್ಶನ ನಡೆಯಿತು.

 

 

ಸದ್ಯ ಸಲ್ಮಾನ್ ಅಭಿನಯದ ರೇಸ್-3 ಸಿನಿಮಾ ಜೂನ್ ತಿಂಗಳ ಈದ್‍ಗೆ ತೆರೆಗೆ ಬರಲು ಸಜ್ಜಾಗಿದ್ದು, ಕೊರಿಯೋಗ್ರಾಫರ್ ರೇಮೊ ಡಿಸೋಜಾ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್, ಬಾಬ್ಬಿ ಡಿಯೊಲ್, ಡೈಸಿ ಶಾ, ಅನಿಲ್ ಕಪೂರ್ ಮತ್ತು ಸಾಕೀಬ್ ಸಲೀಮ್ ಪ್ರಮುಖ ಪಾತ್ರಗಳಲ್ಲಿ ಅಭಿನಯ ಮಾಡಿದ್ದಾರೆ, ಸೈಫ್ ಆಲಿಖಾನ್ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ, ಆದರೆ ಮೂರನೇ ಹಂತದಲ್ಲಿ ಸಲ್ಮಾನ್ ಖಾನ್ ಮೂಲಕ ಚಿತ್ರಕ್ಕೆ ತಿರುವು ನೀಡಲಾಗಿದೆ.

ರೇಸ್-3 ಚಿತ್ರದಆ್ಯಕ್ಷನ್ ದೃಶ್ಯಗಳನ್ನು ಈಗಾಗಲೇ ಅಬುದಾಬಿಯಲ್ಲಿ ಶೂಟಿಂಗ್ ಮಾಡಿದ್ದೂ, ಇದೊಂದು ಪಕ್ಕಾ ಆ್ಯಕ್ಷನ್‌‌‌‌ ಥ್ರಿಲ್ಲರ್ ಕಥೆ ಹೊಂದಿರುವ ಬಾಲಿವುಡ್‌‌‌‌ನ ಬಹುನಿರೀಕ್ಷಿತ ಚಿತ್ರವಾಗಿದೆ. ಇನ್ನು ಚಿತ್ರವನ್ನು ಟಿಪ್ಸ್‌ ಫಿಲ್ಮ್ಸ್ ಬ್ಯಾನರ್ ಅಡಿ ರಮೇಶ್‌‌ ಟೌರಾನಿ ಹಾಗೂ ಸಲ್ಮಾನ್‌‌‌ ಖಾನ್‌ ಫಿಲ್ಮ್ಸ್ ಸಂಸ್ಥೆ ನಿರ್ಮಾಣ ಮಾಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top