ಹೆಚ್ಚಿನ

ಶನೇಶ್ವರ ದೋಷಕ್ಕೆ ಹೀಗೆ ಮಾಡಿ ತಪ್ಪದೆ ಪರಿಹಾರ ಕಂಡುಕೊಳ್ಳಿ .

ಶನೇಶ್ವರ ದೋಷಕ್ಕೆ ಹೀಗೆ ಮಾಡಿ ತಪ್ಪದೆ ಪರಿಹಾರ ಕಂಡುಕೊಳ್ಳಿ .

ಎಲ್ಲದಕ್ಕೂ ಕಾರಣ ಶನೈಶ್ಚರ ಎಂದು ನಾವು ಸಾಮಾನ್ಯವಾಗಿ ಮಾತನಾಡುತ್ತಿರುತ್ತೇವೆ ಅಥವಾ ಮಾತನಾಡುವುದನ್ನು ನಾವು ಕೇಳಿರುತ್ತೇವೆ. ನಮ್ಮ ಕರ್ಮಕ್ಕೆ ಅಧಿಪತಿ ಶನೇಶ್ವರ. ನಮಗೆ ಶನೈಶ್ಚರನು ಬರಬೇಕಾದಾಗ ಅಷ್ಟ ಗ್ರಹವೂ ಕೂಡ ಶನೈಶ್ಚರನ ಮಾತನ್ನು ಕೇಳಬೇಕು. ಇದು ಆ ತಾಯಿ ದುರ್ಗೆಯ ಒಂದು ವಾಕ್ ಶಕ್ತಿಯಾಗಿದೆ. ಯಾಕೆಂದರೆ ಅಂತಹ ಶನೈಶ್ಚರ ಮಂಧಗಮನ ಮ0ಧ ದಾತ ಅನ್ನುವ ಬಿರುದು ಆತನಿಗೆ ಇದೆ. ಅಂತಹ ಒಂದು ಮಂದ ಗಮನ ಎಷ್ಟು ವಿಶೇಷ ಎಂದರೆ ಹುಟ್ಟಿನಲ್ಲಿ ಶ್ರೀಕೃಷ್ಣ ಪರಮಾತ್ಮನಿಗೆ ಪರಿಪೂರ್ಣವಾದ ಶನೇಶ್ಚರ ದೋಷವನ್ನು ತೋರಿಸುತ್ತದೆ .

 

 

ಆದ್ದರಿಂದಲೇ ಶ್ರೀಕೃಷ್ಣನು ಹುಟ್ಟಿದಾಗಿನಿಂದಲೂ ಕೂಡ ತಂದೆ ತಾಯಿಯ ಜತೆಗೆ ಇರುವುದಕ್ಕೆ ಬಿಡುವುದಿಲ್ಲ. ಎಲ್ಲ ಮಕ್ಕಳು ನಾವೆಲ್ಲರೂ ಹುಟ್ಟಿದಾಗ ತಾಯಿಯ ಹಾಲು ಇಲ್ಲ ಎಂದರೆ ಹೆಬ್ಬೆಟ್ಟು ಬೆರಳನ್ನು ಬಾಯಿಯಲ್ಲಿ ಇಟ್ಟುಕೊಂಡು ಚೀಪುತ್ತವೆ. ಈ ಅಂಗುಷ್ಟವನ್ನು ಚೀಪುತ್ತಾ ಇರುತ್ತಾರೆ . ಆದರೆ ಶ್ರೀಕೃಷ್ಣ ಪರಮಾತ್ಮ ತನ್ನ ಕಾಲಿನ ಅಂಗುಷ್ಟವನ್ನು ಚೀಪುತ್ತಿದ್ದ, ಇದು ಕೂಡ ಶನೈಶ್ಚರನ ಒಂದು ಪ್ರಭಾವವಾಗಿದೆ.
ಅಂತಹ ಒಂದು ಶ್ರೀಕೃಷ್ಣ ಪರಮಾತ್ಮನಿಗೆ ತಾನು ಇಷ್ಟಪಟ್ಟಿದ್ದು ಯಾವುದು ದಕ್ಕಲಿಲ್ಲ. ತಾನು ಇನ್ನೊಬ್ಬರ ರಾಜ್ಯವನ್ನು ಗೆಲ್ಲಿಸಿ ಪಾಂಡವರಿಗೆ ಕೊಡುತ್ತಾನೆ. ನಿಮ್ಮ ರಾಜ್ಯ ಇದು ನಿಮಗೆ ಧರ್ಮಬದ್ಧವಾಗಿ ಬರಬೇಕಾಗಿತ್ತು ಎಂದು ಅವರಿಗೆ ಕೊಡುತ್ತಾನೆ. ಆದರೆ ಎಷ್ಟೇ ಧರ್ಮ ಬದ್ಧವಾಗಿದ್ದರು, ಅವರಿಗೆ ಅಪವಾದಗಳ ಸುರಿಮಳೆ, ಯಾಕೆಂದರೆ ಅಷ್ಟಮ ಸ್ಥಾನದಲ್ಲಿ ಮತ್ತು ಸಪ್ತಮ ಸ್ಥಾನದಲ್ಲಿ ಮತ್ತು ವೃಷಭ ಲಗ್ನದಲ್ಲಿ ಜಾತಕ ಇದ್ದರೆ ಶನೈಶ್ಚರನ ಪ್ರಭಾವ ಹೆಚ್ಚಾಗಿ ಇರುತ್ತದೆ.

ಎಲ್ಲದಕ್ಕೂ ಕಾರಣ ಆ ಶನೈಶ್ವರನು ಎಂದು ಹೇಳುತ್ತಾರೆ. ಅದು ನಿಜವೇ ಅಷ್ಟ ಗ್ರಹಗಳು ಈಗಲೂ ಸಹ ಬೇಕಾದರೆ ನೀವು ಗಮನಿಸಿ ನೋಡಿ. ಶನಿ ಧನುಸ್ಸು ರಾಶಿಯಲ್ಲಿ ಇದ್ದಾನೆ. ಕುಜ- ರಾಹು ಸಂಧಿಯಾಗಬೇಕಾದರೆ ಶನಿ ಜೊತೆಗೆ ಸೇರಿಕೊಂಡಿದ್ದಾನೆ.ಹಾಗೆ ಸೇರುತ್ತಿದ್ದ ಹಾಗೆ ಗುರು ವಕ್ರೀ ಆಗಿದ್ದಾನೆ . ವಿಶೇಷವಾಗಿ ಬುಧ ನೀಚನಾಗಿದ್ದಾನೆ ಮೀನ ರಾಶಿಯಲ್ಲಿ. ಶುಕ್ರ ಕುಜನ ಮನೆಯಲ್ಲಿ ಇದ್ದಾನೆ.

 

 

ಆದ್ದರಿಂದ ಅನೇಕ ಅಪಘಾತಗಳ ಸರಮಾಲೆ, ಅಷ್ಟೊಂದು ಆತ್ಮಹತ್ಯೆಗಳ ಸರಮಾಲೆಯು ಸಹ ಆಗುತ್ತಿದೆ. ಅಂತಹ ಒಂದು ಶನೈಶ್ಚರನ ದೋಷ ನಿಮ್ಮ ಜಾತಕದಲ್ಲಿ ಸಪ್ತಮ ಸ್ಥಾನ ಅಥವಾ ಅಷ್ಟಮ ಸ್ಥಾನದಲ್ಲಿ ಇದ್ದು ದೋಷಪೂರಿತವಾಗಿದ್ದರೆ ಬಾಧೆಯನ್ನು ಕೊಡುತ್ತಿದ್ದರೆ, ಈ ಒಂದು ಸಂಕಲ್ಪವನ್ನು ಈ ದೇವರಿಗೆ ಮಾಡುತ್ತಾ ಬಂದರೆ ಶನೈಶ್ಚರ ಕಾಟದಿಂದ ಮುಕ್ತಿ ಹೊಂದಬಹುದು.
ಅದೇನೆಂದರೆ ಪುಷ್ಯಾ ನಕ್ಷತ್ರದ ದಿನವಾಗಲಿ, ಪುನರ್ವಸು ನಕ್ಷತ್ರದ ದಿನವಾಗಲಿ, ಹನುಮಂತನಿಗೆ ಗುರುವಾರದ ದಿನ, ಗುರುವಾರ ಬಂದಿದ್ದರೆ ಅದು ಒಂದು ಅದ್ಭುತವಾದಂತಹ ದಿನವಾಗಿದ್ದು. ಗುರುವಾರ ಪುಷ್ಯ ಅಥವಾ ಪುನರ್ವಸು ನಕ್ಷತ್ರ ಬಂದಿರುವಲ್ಲಿ ವೀಳ್ಯದೆಲೆಯ ಅಲಂಕಾರವನ್ನು, ವೀಳ್ಯದೆಲೆಯ ಪ್ರಸಾದವನ್ನಾಗಲಿ ಹನುಮಂತ ದೇವರಿಗೆ ಕೊಡುವುದರಿಂದ ಸಕಲ ಶನೈಶ್ಚರನ ದೋಷಗಳು ಕೂಡ ದೂರವಾಗಿ ನೆಮ್ಮದಿಯನ್ನು ಪಡೆಯುತ್ತೀರಿ .

ಆ ಭಾರ ಹೊರೆ ಎಷ್ಟು ಕಷ್ಟ ಪಟ್ಟರು ಫಲವೇ ಇಲ್ಲ ಎಂದು ಒದ್ದಾಡುತ್ತಿದ್ದರೆ, ಆ ಭಾರ, ಅವಮಾನ ,ಅಪಮಾನ, ಜೈಲುವಾಸ, ಕೋರ್ಟ್, ಪೊಲೀಸ್, ಕಳ್ಳತನ ನಿಮ್ಮ ಕುಟುಂಬಕ್ಕೆ ಮನೆಗೆ ಕಳಂಕ ,ಕೆಟ್ಟ ಆರೋಪ, ಎಲ್ಲ ಇದ್ದರೂ ಅಲೆಮಾರಿ ಜೀವನ. ಇವೆಲ್ಲವನ್ನೂ ಕೂಡ ಈ ಒಂದು ಪರಿಹಾರ ದೂರ ಮಾಡುತ್ತದೆ .ಕಡಿಮೆ ಎಂದರೂ ಇದನ್ನು ಇಪ್ಪತ್ತ್ಮೂರು, ಮೂವತ್ತೆರಡು, ಇಲ್ಲ ನಲವತ್ತೊಂದು , ಐವತ್ತು ಗುರುವಾರಗಳಂದು ಮಾಡಿದರೆ ಶನೈಶ್ಚರ ದೋಷವೂ ದೂರವಾಗಿ ನೆಮ್ಮದಿಯನ್ನು ಪಡೆಯುತ್ತೀರಿ .

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top