ಸಮಾಚಾರ

ಜಯನಗರ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ

ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಆರಂಭದಿಂದಲೂ ಮುನ್ನಡೆ ಸಾಧಿಸುತ್ತ ಬಂದ ಸೌಮ್ಯ ರೆಡ್ಡಿ ಗೆಲುವಿನ ನಗೆ ಬೀರಿದ್ದಾರೆ.

ಸೌಮ್ಯ ರೆಡ್ಡಿ (ಕಾಂಗ್ರೆಸ್ ) – 53151
ಬಿ ಎನ್ ಪ್ರಹ್ಲಾದ್(ಬಿಜೆಪಿ) – 48302
ರವಿಕೃಷ್ಣಾ ರೆಡ್ಡಿ – 1591

 

 

 

ವಿಜಯಕುಮಾರ್ ಅವರ ಸೋದರ ಬಿ ಎನ್ ಪ್ರಹ್ಲಾದ್ ಬಿಜೆಪಿಯಿಂದ ಹಾಗೂ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಸೌಮ್ಯ ರೆಡ್ಡಿಯವರನ್ನು ಕಣಕ್ಕಿಳಿಸಿತ್ತು. ಇವರಿಬ್ಬರ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಒಟ್ಟು 19 ಮಂದಿ ಚುನಾವಣಾ ಸ್ಪರ್ಧಾ ಕಣದಲ್ಲಿದ್ದರು. ಪಕ್ಷೇತರ ಅಭ್ಯರ್ಥಿ ರವಿ ಕೃಷ್ಣಾರೆಡ್ಡಿ ಸಾವಿರಕ್ಕೂ ಹೆಚ್ಚು ಮತ ಪಡೆದರು.

ಮತದಾನದಲ್ಲಿ ಶೇಕಡಾ 55ರಷ್ಟು ಮತ ಚಲಾವಣೆ ಆಗಿತ್ತು. ಕರ್ನಾಟಕ ವಿಧಾನಸಭೆ ಚುನಾವಣೆ ಮೇ 12ರಂದು ನಡೆದಿತ್ತು ಆದರೂ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಬಿ ಎನ್ ವಿಜಯ ಕುಮಾರ್ ಅವರ ಸಾವಿನ ಹಿನ್ನಲೆಯಲ್ಲಿ ಜಯನಗರ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿತ್ತು.

ಜಯನಗರ 4ನೇ ‘ಟಿ’ ಬ್ಲಾಕ್‌ನಲ್ಲಿರುವ ಎಸ್‌ಎಸ್‌ಎಂಆರ್‌ವಿ ಕಾಲೇಜಿನಲ್ಲಿ ಮತ ಎಣಿಕೆ ನಡೆಯಿತು, ಮತ ಎಣಿಕೆಗಾಗಿ 14 ಟೇಬಲ್‌ ವ್ಯವಸ್ಥೆ ಮಾಡಲಾಗಿತ್ತು. 216 ಮತಗಟ್ಟೆಗಳ ಮತ ಎಣಿಕೆ 16 ಸುತ್ತುಗಳಲ್ಲಿ ನಡೆಯಿತು. ಈ ಕಾರ್ಯಕ್ಕಾಗಿ 21 ಮಂದಿ ಮೈಕ್ರೋ ವೀಕ್ಷಕರು, 18 ಮಂದಿ ಎಣಿಕೆ ಮೇಲ್ವಿಚಾರಕರು ಮತ್ತು 18 ಮಂದಿ ಎಣಿಕೆ ಸಹಾಯಕರನ್ನು ನೇಮಿಸಿದ್ದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top