ಮನೋರಂಜನೆ

‘ಜೋರು’ ಪದಕ್ಕೆ ಇನ್ನೊಂದು ಹೆಸರು ಕೇಳ್ತಿದ್ದಾರೆ ಶ್ರೀಮುರುಳಿ., ಯಾಕೆ ಗೊತ್ತಾ?

ಉಗ್ರಂ ಚಿತ್ರದ ಮೂಲಕ ಚಿತ್ರರಂಗದಲ್ಲಿ ಭರ್ಜರಿ ಕಾಮ್ ಬ್ಯಾಕ್ ಮಾಡಿದ ನಟ ಶ್ರೀಮುರುಳಿ, ಆ ಚಿತ್ರದ ನಂತರ ಕೊಂಚ ಎಚ್ಚರದಿಂದಲೇ ತಮ್ಮ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡು ಯಶಸ್ಸು ಕಾಣುತ್ತಾ ಬಂದಿದ್ದಾರೆ. ಅವರ ರಥಾವರ, ಮಫ್ತಿ ಸಿನಿಮಾಗಳು ಹಿಟ್ ಹಿಟ್ ಆಗಿದ್ದೇ ತಡ, ರೋರಿಂಗ್‌ಸ್ಟಾರ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಹುಟ್ಟುಕೊಂಡಿತ್ತು, ಹಾಗಾಗಿ ಮಫ್ತಿ ನಂತರ ನಟಿಸುತ್ತಿರುವ ಚಿತ್ರದ ಬಗ್ಗೆ ಗಾಂಧಿನಗರದಲ್ಲಿ ವಿಪರೀತ ಕುತೂಹಲ ಮೂಡಿಸಿದೆ.

 

 

ಅಂದಹಾಗೆ ಶ್ರೀಮುರುಳಿ ನಟಿಸುತ್ತಿರುವ ಚಿತ್ರಕ್ಕೆ ನಿರ್ದೇಶನ ಮಾಡುತ್ತಿರುವುದು ಭರ್ಜರಿ, ಬಹದ್ದೂರ್ ಅಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದ ಚೇತನ್. ಕಳೆದ ಯುಗಾದಿ ಹಬ್ಬದ ದಿನದಂದು ಅನೌನ್ಸ್ ಆಗಿದ್ದ ಈ ಚಿತ್ರದ ಟೈಟಲ್ ಏನು ಎಂಬುದು ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಇದೀಗ ಈ ಚಿತ್ರದ ಟೈಟಲ್ ಏನಿರಬಹುದೆಂದು ಯಾರಾದರೂ ಗೆಸ್ ಮಾಡಿ ಎಂದು ಅಭಿಮಾನಿಗಳಿಗೆ ಶ್ರೀ ಮುರುಳಿ ಕೇಳುತ್ತಿದ್ದಾರೆ. ಅದಕ್ಕಾಗಿ ಅವರು ಒಂದು ಸುಳಿವನ್ನು ನೀಡಿದ್ದಾರೆ.


 

ತಮ್ಮ ಫೇಸ್ಬುಕ್ ನಲ್ಲಿ ಜಿಮ್ ನಲ್ಲಿ ಕಸರತ್ತು ನಡೆಸಿದ ನಂತರ ಫೋಟೋ ಕ್ಲಿಕ್ ಮಾಡಿಕೊಂಡು ಅಪ್ಲೋಡ್ ಮಾಡಿರುವ ಶ್ರೇಮುರುಳಿ “ಜೋರು” ಪದಕ್ಕೆ ಇನ್ನೊಂದು ಹೆಸರು… ಕೊಡ್ತೀರ..?guess the Title Of Ma Next!” ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಮ್ಮ ಮುಂದಿನ ಚಿತ್ರ್ರದ ಹೆಸರು ಜೋರು ಎಂಬ ಪದಕ್ಕೆ ಸಮಾನಾರ್ಥಕ ಅರ್ಥ ನೀಡಲಿದೆ ಎಂಬ ಹಿಂಟ್ ಕೊಟ್ಟಿದ್ದಾರೆ. ರೋರಿಂಗ್ ಸ್ಟಾರ್ ಪ್ರಕಟಿಸಿರುವ ಪೋಸ್ಟ್ ನೋಡುತ್ತಿದ್ದಂತೆ ಅಭಿಮಾನಿಗಳು ಆ ಪದಕ್ಕೆ ಇರುವ ಸಮಾನಾರ್ಥಕ ಪದಗಳೆನ್ನೆಲ್ಲಾ ಹುಡುಕಿ, ತಲಾಷು ಮಾಡಿ ಮುರುಳಿಯ ಇನ್ ಬಾಕ್ಸಿಗೆ ತುಂಬುತ್ತಿದ್ದಾರೆ. ಚಿತ್ರಕ್ಕೆ ‘ವೇಗದೂತ’, ‘ರಭಸ’, ‘ಬಲ’ ಎಂಬ ಹೆಸರುಗಳಲ್ಲಿ ಒಂದನ್ನು ಇಟ್ಟಿರಬಹುದಾ ಎಂದು ಕೆಲವರು ಗೆಸ್ ಮಾಡುತ್ತಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top