ಆರೋಗ್ಯ

ಕಚ್ಚಾ ಜೇನುತುಪ್ಪವನ್ನು ಸೇವಿಸುವುದರಿಂದಾಗುವ ಈ 8 ಆರೋಗ್ಯ ಪ್ರಯೋಜನಗಳನ್ನ ಪಡ್ಕೋಬೋದು!.

 

 

ಮನೆಯ ಸುತ್ತ ಮರಗಳಲ್ಲಿ ಜೇನು ಕಟ್ಟಿದೆಯಾ? ಆ ಕಚ್ಚಾ ಜೇನು ಸೇವಿಸುವುದಕ್ಕೆ ಬಹಳ ಸಿಹಿಯಾಗಿರುತ್ತದೆ.ಈ ಟೇಸ್ಟಿ ಜೇನು ಕೇವಲ ನಿಮ್ಮ ರುಚಿಯನ್ನು ಹೆಚ್ಚಿಸುವುದಕಲ್ಲ ಅಲ್ಲದೆ ನಿಮ್ಮ ಆರೋಗ್ಯವನ್ನು ಹೆಚ್ಚಿಸುತ್ತದೆ. ಕಚ್ಚಾ ಜೇನುತುಪ್ಪ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ, ಅವುಗಳೆಂದರೆ:

1.ಗಾಯದ ಚಿಕಿತ್ಸೆ:

ಜೇನುತುಪ್ಪವು ಗಾಯವನ್ನು ವಾಸಿಮಾಡುವ ಗುಣವನ್ನು ಹೊಂದಿರುವುದರಿಂದ ಅದನ್ನು ಗಾಯಕ್ಕೆ ಜೇನುತುಪ್ಪವನ್ನು ಹಚ್ಚಿದರೆ ಗಾಯಗಳು ಬಹುಬೇಗ ವಾಸಿಯಾಗುತ್ತವೆ.

2.ನಿದ್ರಾಹೀನತೆಯನ್ನು ದೊರಮಾಡುತ್ತದೆ.

ಮಲಗುವ ಮುನ್ನ ಒಂದು ಚಮಚೆ ಜೇನುತುಪ್ಪವನ್ನು ಸೇವಿಸುವುದರಿಂದ ನಿದ್ದೆಯು ಚನ್ನಾಗಿ ಬರುತ್ತದೆ. ನಿದ್ರಾಹೀನತೆಯಿಂದ ಬಳಲುತ್ತಿರುವವರು ಜೆನನನ್ನು ಸೇವಿಸುವುದರ ಮೂಲಕ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.

3.ಗಂಟಲು ನೋವಿಗೆ ರಾಮಬಾಣ:

ಜೇನುತುಪ್ಪವು ಗಂಟಲು ನೋವನ್ನು ನಿವಾರಿಸಲು ಸಹಾಯಕವಾಗುವಂತಹ ಒಂದು ಮನೆ ಮದ್ದು. ಜೇನಿನ ಮೃದು ಅಂಟು ಕಣಗಳು ಗಂಟಲಿಗೆ ಅಂಟಿಕೊಂಡು ಗಂಟಲು ನೋವನ್ನು ವಾಸಿಮಾಡುತ್ತದೆ. ಶೀತವಾದರೂ ಸಹ ಗಂಟಲು ಕಿರಿ ಕಿರಿ ಗುಣವಾಗುತ್ತದೆ.

4.ಚರ್ಮ ರೋಗದ ನಿವಾರಣೆ:

ಸ್ವಲ್ಪ ಬೆಚ್ಚಗಿನ ನೀರಿಗೆ ಸ್ವಲ್ಪ ಜೇನುತುಪ್ಪವನ್ನು ಮಿಶ್ರಣ ಮಾಡಿ ಮತ್ತು ಚರ್ಮ ಮತ್ತು ಕುತ್ತಿಗೆಗೆ ಹಚ್ಚಿದರೆ ಚರ್ಮ ಸಮಸ್ಯೆಯಾದ ತುರಿಕೆ ಮತ್ತು ಚರ್ಮ ಒಣಗುವಿಕೆಯನ್ನು ನಿವಾರಿಸುತ್ತದೆ.

5.ಸನ್ ಬರ್ನ್ ಗಳನ್ನು ಶಮನಗೊಳಿಸುತ್ತೆ:

ನಿಮಗೆ ಸನ್ ಬರ್ಗ್ ಗಳಾಗಿದ್ದಾರೆ ನೋವಿಲ್ಲದೆ ಅವನ್ನು ಹೋಗಲಾಡಿಸಲು ಶುದ್ಧ ಜೇನುತುಪ್ಪವು ಸಹಕಾರಿಯಾಗುತ್ತದೆ. ಶುದ್ಧ ಜೇನುತುಪ್ಪವನ್ನು ಸನ್ ಬರ್ನ್ ಆಗಿರುವ ಜಾಗಗಳಲ್ಲಿ ಹಚ್ಚಿದರೆ ಬಹುಬೇಗ ಈ ಸಮಸ್ಯೆ ಬಗೆಹರಿಯುತ್ತದೆ.

6.ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತೆ.

 

 

ಶುದ್ಧ ಕಚ್ಚಾ ಜೇನುತುಪ್ಪವನ್ನು ಸೇವಿಸುವುದರಿಂದ ಗ್ಯಾಸ್ಟ್ರಿಕ್ ಅಂತ ಜೀರ್ಣಕ್ರಿಯೆ ಸಮಸ್ಯೆಗಳನ್ನು ನಿವಾರಣೆ ಮಾಡಿ ಸೇವಿಸಿದ ಆಹಾರವು ಸುಲಭವಾಗಿ ಜೀರ್ಣವಾಗುವಂತೆ ಮಾಡುತ್ತದೆ. ಹೊಟ್ಟೆಯಲ್ಲಿ ಆಗಿರುವ ಹುಣ್ಣನ್ನು ಸಹ ಶುದ್ಧ ಜೇನುತುಪ್ಪವನ್ನು ಸೇವಿಸುವುದರಿಂದ ವಾಸಿಮಾಡಬಹುದು.

7.ಬಾಯಿಹುಣ್ಣನ್ನು ವಾಸಿಮಾಡುತ್ತದೆ:

ಬಾಯಿ ಹುಣ್ಣಿನಿಂದ ಬಳಲುತ್ತಿರುವವರು ಶುದ್ಧ ಕಚ್ಚಾ ಜೇನುತುಪ್ಪವನ್ನು ಹುಣ್ಣಾಗಿರುವ ಜಾಗಕ್ಕೆ ಹಚ್ಚುವುದರಿಂದ ಬಾಯಿಯ ಹುಣ್ಣು ಬಹುಬೇಗ ವಾಸಿಯಾಗುತ್ತದೆ.

8.ರಕ್ತಪರಿಚಲನೆಯನ್ನು ಉತ್ತಮವಾಗಿಸುತ್ತದೆ:

ಶುದ್ಧ ಕಚ್ಚಾ ಜೇನುತುಪ್ಪವನ್ನು ಸೇವನೆ ಮಾಡುವುದರಿಂದ ದೇಹದ ರೋಗನಿರೋಧಕ ಶಕ್ತಿಯು ಹೆಚ್ಚಾಗಿ ಉತ್ತಮವಾದ ರಕ್ತ ಪರಿಚಲನೆಯಾಗುತ್ತದೆ. ಉತ್ತಮವಾದ ರಕ್ತ ಪರಿಚಲನೆಯಾಗುವುದರಿಂದ ಹೃದಯದ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top