ಸಮಾಚಾರ

ಕುಮಾರಸ್ವಾಮಿ ಅಪ್ರಭುದ್ದ ಸಿಎಂ- ಫಿಟ್ನೆಸ್ ಚಾಲೆಂಜ್ ವಿಚಾರವಾಗಿ ಅನಂತಕುಮಾರ್ ಹೆಗಡೆ ವ್ಯಂಗ್ಯ.

ಸದಾ ಒಂದಿಲ್ಲೊಂದು ವ್ಯಂಗ್ಯ ವಿವಾದಾತ್ಮಕ ಹೇಳಿಕೆಯನ್ನು ನಿರ್ಭಿಡತೆಯಿಂದ ಕೊಡುತ್ತಾ ಪಂಥದವರ ವಿರೋಧವನ್ನೂ ಕಟ್ಟಿಕೊಂಡಿರುವವ ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ಇದೀಗ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಅಪ್ರಬುದ್ಧ ಎಂದು ಕರೆಯುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಎಲೆಕ್ಷನ್ ದೆಸೆಯಿಂದಲೋ ಏನೋ ಕೆಲ ದಿನಗಳಿಂದ ಯಾವ ರಗಳೆಗಳೂ ಇಲ್ಲದೆ ಸುಮ್ಮನಿದ್ದ ಸಚಿವರು ಎಲೆಕ್ಷನ್ ಮುಗಿಯುತ್ತಿದ್ದಂತೆ ಜೆಡಿಎಸ್ ಪಕ್ಷವನ್ನು ಪುಟಗೋಸಿ ಎಂದು ಕರೆಯುವ ಮೂಲಕ ಮತ್ತೆ ಫಾರ್ಮ್’ಗೆ ಮರಳಿದ್ದರು. ಅದಾದ ನಂತರ ಇದೀಗ ಕುಮಾರಸ್ವಾಮಿಯವರನ್ನು ವ್ಯಂಗ್ಯ ಮಾಡುವ ಮೂಲಕ ಮತ್ತೆ ಕಣಕ್ಕಿಳಿದಿದ್ದಾರೆ.

 

 

ಬುಧವಾರ ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿ ಕುಮಾರಸ್ವಾಮಿಗೆ hum fit toh india fit ಫಿಟ್ನೆಸ್ ಸವಾಲನ್ನು ರವಾನಿಸಿದ್ದರು ಇದಕ್ಕೆ ಪ್ರತ್ಯುತ್ತರವಾಗಿ, “ನನಗೆ ನನ್ನ ಫಿಟ್ ನೆಸ್ ಗಿಂತಲೂ, ರಾಜ್ಯದ ಅಭಿವೃದ್ದಿಯ ಫಿಟ್ನೆಸ್ ಮುಖ್ಯ, ಅದಕ್ಕಾಗಿ ನಿಮ್ಮ ನೆರವನ್ನು ಬಯಸುತ್ತೇನೆ” ಎಂದು ಮಾರ್ಮಿಕವಾಗಿ ಪ್ರಧಾನಿ ಎದುರೇಟು ನೀಡಿದ್ದರು. ಇದೀಗ ಸಿಎಂ ಏಟಿಗೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಭರ್ಜರಿ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅನಂತಕುಮಾರ್ ಹೆಗಡೆ “ದೈಹಿಕ ಮತ್ತು ಮಾನಸಿಕ ಫಿಟ್ನೆಸ್ ಇಲ್ಲದವರ ಬಾಯಿಂದ ರಾಜ್ಯದ ಕಾಳಜಿ, ಮತ್ತು ಅಭಿವೃದ್ಧಿಯ ಮಾತು ಹಾಸ್ಯಾಸ್ಪದವಾಗಿದೆ. ಕುಮಾರಸ್ವಾಮಿ ಅಪ್ರಭುದ್ದ ಮುಖ್ಯಮಂತ್ರಿ, ಅಧಿಕಾರ ಸಿಗದಿದ್ದರೆ ನಾನು ಹೆಚ್ಚು ದಿನ ಬದುಕೋದಿಲ್ಲ ಎನ್ನುತ್ತಿದ್ದರು. ಸತ್ತೇ ಹೋಗುತ್ತೇನೆ ಎಂದು ಗೋಳಾಡಿಕೊಂಡಿದ್ದವರು ರಾಜ್ಯದ ಕಾಳಜಿಯಿದೆ ಎನ್ನುತ್ತಿದ್ದಾರೆ. ” ಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ಹೆಗಡೆ ವ್ಯಂಗ್ಯಭರಿತ ಟೀಕೆ ಮಾಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top