ಸಮಾಚಾರ

ನಿಮ್ಮನ್ನು ನಕ್ಕು ನಗಿಸಲು ಬರುತ್ತಿದೆ ಕಾಮಿಡಿ ಜಂಕ್ಷನ್‌‌‌

ಇತ್ತೀಚಿನ ದಿನಗಳಲ್ಲಿ ಕಾಮಿಡಿ ರಿಯಾಲಿಟಿ ಶೋಗಳಿಗೆ ಜನ ಮುಗಿ ಬೀಳುತ್ತಾರೆ. ಇದು ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿರುವ ಟ್ರೆಂಡ್ ಎನ್ನಬಹುದು. ಕಾಮಿಡಿ ಎಲ್ಲಾ ವರ್ಗದ ವಯೋಮಾನದ ಪ್ರೇಕ್ಷಕರಿಗೂ ಖುಷಿ ನೀಡುತ್ತದೆ. ರಿಯಾಲಿಟಿ ಶೋಗಳಲ್ಲಿ ಕಾಮಿಡಿಗೆ ನಂಬರ್ ಒನ್‌‌‌‌ ಸ್ಥಾನ. ಉದಯ ಕಾಮಿಡಿ ಚಾನಲ್ ಮೊದಲಿನಿಂದಲೂ ಸದಭಿರುಚಿಯ ಹಾಸ್ಯವನ್ನು ಪ್ರಾಸ ಮಾಡುತ್ತ ಬಂದಿದೆ.

ಉದಯ ಕಾಮಿಡಿ ಈಗ ಮತ್ತೊಂದು ಮಹೋನ್ನತ ಹಾಸ್ಯ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲು ಸಿದ್ಧವಾಗಿದೆ. ಅದೇ “ಕಾಮಿಡಿ ಜಂಕ್ಷನ್”. ಸಾವಿರಾರು ಎಪಿಸೋಡ್‌‌‌‌‌‌‌‌‌‌‌‌‌‌‌‌ಗಳಿಗೆ ಹಾಸ್ಯ ಸಂಭಾಷಣೆ ಬರೆದಿರುವ ನಗೆ ಸಾಹಿತಿ ಎಂ.ಎಸ್. ನರಸಿಂಹಮೂರ್ತಿ ಈ ಕಾರ್ಯಕ್ರಮದ ಬರವಣಿಗೆಯ ಹೊಣೆ ಹೊತ್ತಿದ್ದಾರೆ. ಜೊತೆಗೆ ಸ್ಟ್ಯಾಂಡಪ್ ಕಾಮಿಡಿ ನೀಡಿ ರಂಜಿಸಲಿದ್ದಾರೆ.

 

 

ಉದಯ ಕಾಮಿಡಿ ಚಾನಲ್ ನ ಹಾಸ್ಯ ಕಲಾವಿದರಾದ ಕೆಂಪೇಗೌಡ, ಶ್ರೀಕಂಠ, ಸ್ಮೈಲ್ ಶಶಿ, ಹರೀಶ್, ಕೃಷ್ಣ ವಿವಿಧ ಪಾತ್ರಗಳಲ್ಲಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಅನೇಕ ಹೊಸ ಮುಖಗಳನ್ನು ಮೊದಲ ಬಾರಿಗೆ ಇಲ್ಲಿ ಪರಿಚಯಿಸಲಾಗಿದೆ. ಈ ಬಗ್ಗೆ ಮಾತಾಡುತ್ತಾ, ”ನಾವು ನೀಡಿರುವ ಅನೇಕ ಹೊಚ್ಚ ಹೊಸ ಹಾಸ್ಯ ಕಾರ್ಯಕ್ರಮಗಳಲ್ಲಿ ಇದು ಭಿನ್ನವಾಗಿ ನಿಲ್ಲುತ್ತದೆ ಹಾಗೂ ವೀಕ್ಷಕರಿಗೆ ಭರಪೂರ ಮನರಂಜನೆಯನ್ನು ನೀಡುತ್ತದೆ” ಎಂಬುದು ಉದಯ ಕಾಮಿಡಿ ವಾಹಿನಿಯ ಮುಖ್ಯಸ್ಥರಾದ ಭುವನ್ ಶಾಸ್ತ್ರಿ ಅಭಿಪ್ರಾಯವಾಗಿದೆ.

ಕಾಮಿಡಿ ಜಂಕ್ಷನ್ ಷೋ ಇದೇ ಜೂನ್ 16 ರಿಂದ ಶನಿ – ಭಾನು ಬೆಳಗ್ಗೆ 8.30 ಕ್ಕೆ & ರಾತ್ರಿ 9 ಕ್ಕೆ ನಿಮ್ಮ ಉದಯ ಕಾಮಿಡಿ ಚಾನೆಲ್ ನಲ್ಲಿ ಪ್ರಸಾರವಾಗಲಿದೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top