ಸಮಾಚಾರ

ಮಾಲೀಕ ಮಾಡಿದ ತಪ್ಪಿಗೆ ಹಸುವಿಗೆ ಮರಣದಂಡನೆ ಶಿಕ್ಷೆ

ಅಕ್ರಮವಾಗಿ ಒಂದು ದೇಶದ ಗಡಿ ದಾಟಿ ಇನ್ನೊಂದು ದೇಶದ ಒಳ ಪ್ರವೇಶ ಮಾಡಿದರೆ ಶಿಕ್ಷೆ ಕಾದಿಟ್ಟಬುತ್ತಿ. ಆದರೆ, ಗಡಿದಾಟಿ ಬೇರೆ ದೇಶದಲ್ಲಿ ಗರ್ಭಿಣಿ ಹಸುವೊಂದು ಅಲೆದಾಡಿದ ತಪ್ಪಿಗೆ ಯುರೋಪಿನಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಗರ್ಭಿಣಿ ಹಸುವೊಂದು ಬಲ್ಗೇರಿಯನ್‌ ಗ್ರಾಮದ ಸಮೀಪ ಹುಲ್ಲು ಮೇಯುತ್ತಿದ್ದಾಗ ಹಿಂಡಿನಿಂದ ತಪ್ಪಿಸಿಕೊಂಡು ಗಡಿದಾಟಿ ಸೈಬೀರಿಯಾಕ್ಕೆ ಹೋಗಿತ್ತು.

ಗರ್ಭಿಣಿ ಹಸುವಿಗೆ ವಿಧಿಸಿದ್ದ ಮರಣದಂಡನೆ ಆದೇಶವನ್ನು ಸದ್ಯ ಬಲ್ಗೇರಿಯಾ ಸರ್ಕಾರ ಅನೂರ್ಜಿತಗೊಳಿಸಿದ ಘಟನೆ ನಡೆದಿದೆ. ಪೆಂಕಾ ಎಂಬ ಹಸು ಕಳೆದ ತಿಂಗಳು ತನ್ನ ಹಿಂಡಿನ ಜೊತೆ ಸಾಗುವಾಗ ಯುರೋಪಿಯನ್ ಯೂನಿಯನ್ ಗಡಿಯನ್ನು ದಾಟಿ ಪಕ್ಕದ ಸರ್ಬಿಯಾಕ್ಕೆ ಹೋಗಿ ವಾಪಸ್ ಬಂದಿತ್ತು ಎನ್ನಲಾಗಿದೆ.

ಯುರೋಪಿಯನ್ ಕಮಿಷನ್ ಮಾರ್ಗದರ್ಶನದ ಪ್ರಕಾರ ಹಸುಗಳ ಆರೋಗ್ಯ ಸ್ಥಿತಿಯ ದಾಖಲೆಗಳನ್ನು ಗಡಿಯಲ್ಲಿರುವ ಚೆಕ್ ಪಾಯಿಂಟ್ ಗಳಲ್ಲಿ ತೋರಿಸಬೇಕು. ಗಡಿಯಲ್ಲಿ ತಪಾಸಣೆಗೊಂಡು ಅನುಮತಿ ಪಡೆದ ನಂತರವಷ್ಟೇ ಯುರೋಪ್ ಯೂನಿಯನ್ ಒಳಗೆ ಬರಬಹುದಾಗಿದೆ. ಹಾಗಾಗಿ ಅಧಿಕಾರಿಗಳು ಪೆಂಕಾವನ್ನು ಶಿಕ್ಷೆಗೆ ಗುರಿಪಡಿಸಿ ಎಂದು ವಾದ ಮಂಡಿಸಿದ್ದರು ಎನ್ನಲಾಗಿದೆ. ಸರ್ಕಾರ ಪೆಂಕಾಗೆ ಮರಣದಂಡನೆಯನ್ನು ವಿಧಿಸಿತ್ತು.

 

ಈ ವಿಷಯ ವೈರಲ್ ಆಗುತ್ತಿದ್ದಂತೆ ಪ್ರಾಣಿದಯಾ ಚಳುವಳಿಗಾರರಿಂದ ಸಾಕಷ್ಟು ಪ್ರತಿರೋಧ ವ್ಯಕ್ತ ಪಡಿಸಿದರು. ಪ್ರಕರಣದಲ್ಲಿ ಪೆಂಕಾಗೆ ವಿನಾಯಿತಿ ನೀಡುವಂತೆ ಸರ್ಕಾರವನ್ನು ಕೋರಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಕೂಡ ಶುರುವಾಗಿತ್ತು. ಇದರ ಬೆನ್ನಲ್ಲೇ ಬಲ್ಗೇರಿಯಾ ಸರ್ಕಾರ ಆದೇಶವನ್ನು ಅಂರ್ಜಿತ ಮಾಡಿದೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top