ಮನೋರಂಜನೆ

ಸೆಕ್ಯೂರಿಟಿಗೆ ಸಲಾಂ ಹೊಡೆದ ದಾಸನ ಫೋಟೋ ಆಯ್ತು ವೈರಲ್..

ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಲ್ಲದರಲ್ಲಿಯೂ ಭಿನ್ನ. ಹೊರ ಜಗತ್ತಿಗೆ ಕೊಂಚ ಒರಟಾಗಿ, ಕೋಪಿಷ್ಟನಂತೆ ಕಂಡರೂ ಎಲ್ಲರ ಬಗ್ಗೆಯೂ ಪ್ರೀತಿ ಮತ್ತು ಕಾಳಜಿ ಹೊಂದಿರೋದು ಅವರ ಅಸಲೀ ವ್ಯಕ್ತಿತ್ವ ಎಂಬುದು ಅವರನ್ನು ಹತ್ತಿರದಿಂದ ನೋಡಿರುವ ಮತ್ತು ಅವರ ಆಪ್ತರಿಗಷ್ಟೇ ಗೊತ್ತಿರುತ್ತದೆ.. ಕೋಪಿಷ್ಠ ದರ್ಶನ್ ಅವರಲ್ಲೂ ಒಬ್ಬ ಎಲ್ಲರನ್ನೂ ಗೌರವಿಸುವ ಸರಳಜೀವಿ ಇದ್ದಾನೆ. ಇದು ಮತ್ತೊಮ್ಮೆ ಸಾಬೀತಾಗಿದೆ.

 

 

ಇತ್ತೀಚಿಗೆ ಮೊನ್ನೆ ಮೈಸೂರಿನಲ್ಲಿನ ಹೊಟೇಲ್‌ವೊಂದರಲ್ಲಿ ಉಳಿದುಕೊಂಡಿದ್ದ ದರ್ಶನ್ ಅಲ್ಲಿಂದ ಹೊರ ಬರುವ ವೇಳೆ ಹೋಟೆಲ್ ಮೇನ್ ಡೋರ್ ಬಳಿ ನಿಂತಿದ್ದ ಸೆಕ್ಯೂರಿಟಿ ಎಲ್ಲರಿಗೂ ಸೆಲ್ಯೂಟ್ ಹೊಡೆಯುವ ರೀತಿ ದರ್ಶನ್’ಗೆ ಸಹ ಸೆಲ್ಯೂಟ್ ಹೊಡೆದಿದ್ದಾರೆ. ಇದನ್ನು ನೋಡಿದ ದರ್ಶನ್ ತಾವು ಕೂಡ ಮರಳಿ ಸೆಕ್ಯೂರಿಟಿಗೆ ಸಲಾಂ ಹೊಡೆದಿದ್ದಾರೆ. ಈ ಮೂಲಕ ಸರಳತೆ ಮೆರೆದಿದ್ದಾರೆ.

ದರ್ಶನ್ ಸೆಲ್ಯೂಟ್ ಮಾಡಿದ ಫೋಟೋ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ವೈರಲ್ ಮಾಡಿದ್ದು ದರ್ಶನ್ ಅವರ ಈ ನಡೆಯನ್ನು ಹೋಗಲಾಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top