ಹೆಚ್ಚಿನ

ಈ ವ್ಯಕ್ತಿಗಳಿಗೆ ,ಈ ಸಂದರ್ಭಗಳಲ್ಲಿ ಎಂದಿಗೂ ಕೈಮುಗಿದು ನಮಸ್ಕಾರ ಮಾಡಬಾರದು , ಮಾಡಿದರೆ ನಿಮ್ಮ ಬೆನ್ನ ಹಿಂದೆಯೇ ದರಿದ್ರ ಗ್ಯಾರಂಟಿ ಹಿಂಬಾಲಿಸುತ್ತದೆ.

ಈ ವ್ಯಕ್ತಿಗಳಿಗೆ ,ಈ ಸಂದರ್ಭಗಳಲ್ಲಿ ಎಂದಿಗೂ ಕೈಮುಗಿದು ನಮಸ್ಕಾರ ಮಾಡಬಾರದು , ಮಾಡಿದರೆ ನಿಮ್ಮ ಬೆನ್ನ ಹಿಂದೆಯೇ ದರಿದ್ರ ಗ್ಯಾರಂಟಿ ಹಿಂಬಾಲಿಸುತ್ತದೆ.

 

ಎರಡೂ ಕೈಯನ್ನು ಜೋಡಿಸಿ ಭಕ್ತಿ, ಶ್ರದ್ಧೆಯಿಂದ ಹಿರಿಯರಿಗೆ, ದೇವರಿಗೆ ಮತ್ತು ಅತಿಥಿಗಳಿಗೆ ನಮಸ್ಕಾರ ಮಾಡುವುದು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅನಾದಿಕಾಲದಿಂದಲೂ ರೂಡಿಯಲ್ಲಿ ಬಂದಿರುವ ಪದ್ಧತಿಯಾಗಿದೆ. ಯಾವುದೇ ವ್ಯಕ್ತಿ ನಮ್ಮ ಮುಂದೆ ಸಿಗಲಿ ನಾವು ಕೈ ಮುಗಿದು ಅವರನ್ನು ಸ್ವಾಗತಿಸುವ ಪದ್ಧತಿ ನಮ್ಮ ಹಿಂದೂ ಸಂಪ್ರದಾಯದಲ್ಲಿ ಇದೆ.

 

 

ಆದರೆ ಕಾಲ ಬದಲಾದಂತೆ ಹಾಯ್ ಹೇಳುವುದು, ಕೈ ಕುಲುಕುವುದು ಇವು ಪಾಶ್ಚಿಮಾತ್ಯ ಸಂಪ್ರದಾಯ ಆಗಿದ್ದರೂ, ನಮ್ಮ ಇತ್ತೀಚಿನ ಪೀಳಿಗೆಯ ಜನರು ಪಾಲಿಸುತ್ತಿದ್ದಾರೆ. ಆದರೂ ಕೂಡ ಕೈ ಮುಗಿದು ಬರಮಾಡಿಕೊಳ್ಳುವುದು, ಸ್ವಾಗತಿಸುವುದು ಇನ್ನೂ ನಮ್ಮ ಹಿಂದೂ ಧರ್ಮದಲ್ಲಿ ಭಾರತದಲ್ಲಿ ಸಂಪ್ರದಾಯವಾಗಿ ಕೆಲವು ಕಡೆ ನಾವು ನೋಡಬಹುದಾಗಿದೆ.
ಆದರೆ ಗರುಡ ಪುರಾಣದಲ್ಲಿ ಉಲ್ಲೇಖವಾಗಿರುವ ಪ್ರಕಾರ ಕೆಲವು ನಮಸ್ಕಾರಕ್ಕೆ ಸಂಬಂಧಿಸಿದ ಸಂಗತಿಗಳನ್ನು ಇಲ್ಲಿ ಹೇಳಲಾಗಿದೆ. ಅದೇನೆಂದರೆ ಕೆಲವು ವ್ಯಕ್ತಿಗಳಿಗೆ ನಾವು ಅಪ್ಪಿ ತಪ್ಪಿಯೂ ಸಹ ಕೈ ಮುಗಿಯ ಬಾರದಂತೆ . ಹಾಗೇನಾದರೂ ಒಂದು ವೇಳೆ ನಾವು ಕೈ ಮುಗಿದರೆ ನಮಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಹೇಳಲಾಗಿದೆ.

ಪುರಾಣದ ಪ್ರಕಾರ ಕಪಟ ವ್ಯಕ್ತಿಗೆ ಎಂದೂ ಸಹ ಕೈ ಮುಗಿಯಬಾರದು. ಇಂತಹ ವ್ಯಕ್ತಿಗಳಿಗೆ ನಾವು ನಮಸ್ಕಾರ ಮಾಡಿದರೆ ನಮ್ಮ ಗೌರವಕ್ಕೆ ಧಕ್ಕೆ ಬರುತ್ತದೆಯಂತೆ. ಜಾತಕದಲ್ಲಿ ಗ್ರಹದೋಷ ಹೆಚ್ಚಾಗುತ್ತದೆ.

ಗರುಡ ಪುರಾಣದ ಪ್ರಕಾರ ನಾವು ಅಂತ್ಯಸಂಸ್ಕಾರಕ್ಕೆ ಹೋಗುವ ವೇಳೆ ಬೇರೆಯವರಿಗೆ ಕೈ ಮುಗಿಯಬಾರದು. ಅಂತ್ಯ ಸಂಸ್ಕಾರಕ್ಕೆ ಹೋಗುವಾಗ ನಾವು ಆದಷ್ಟು ಮೌನವಾಗಿ ಇರಬೇಕು. ನಮಸ್ಕಾರ ಮಾಡಿದರೆ ಮೌನಕ್ಕೆ ಧಕ್ಕೆಯಾಗುತ್ತದೆ. ದುಃಖದ ಸಂದರ್ಭದಲ್ಲಿ ಮಾತನಾಡುವುದು ಅಶುಭವಾಗಿದೆ.ಸ್ನಾನ ಮಾಡುವ ವೇಳೆ ನಮಸ್ಕಾರ ಮಾಡಬಾರದು. ಗ್ರಹ ದೋಷಗಳು ಉಂಟಾಗಿ ಮುಂದಿನ ಅನೇಕ ದಿನಗಳಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ.

 

 

 

ಇನ್ನು ಓಡುತ್ತಿರುವ ವ್ಯಕ್ತಿಗೆ ಎಲ್ಲೂ ಸಹ ನಮಸ್ಕಾರ ಮಾಡಬಾರದು. ಇದು ಜಾತಕದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.

ಪೂಜೆ ಮಾಡುವ ವೇಳೆ ನಾವು ಬೇರೆಯವರಿಗೆ ನಮಸ್ಕಾರ ಮಾಡಬಾರದು .ಹೀಗೆ ಮಾಡಿದ್ದಲ್ಲಿ ದೇವರ ಧ್ಯಾನ ಬೇರೆ ಕಡೆಗೆ ಹೋಗುತ್ತದೆ ದೇವತೆಗಳು ಸಹ ಆಪ್ರಸನ್ನರಾಗುತ್ತಾರೆ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top