ಹೆಚ್ಚಿನ

ಶಾಸ್ತ್ರಗಳ ಪ್ರಕಾರ ದೇವಸ್ಥಾನಕ್ಕೆ ಹೋದಾಗ ಈ ರೀತಿ ಮಾಡ್ಬಾರ್ದು ಮಾಡಿದ್ರೆ ದರಿದ್ರ ಹುಡುಕಿಕೊಂಡು ಬರುತ್ತೆ .

ಶಾಸ್ತ್ರಗಳ ಪ್ರಚಾರ ದೇವಸ್ಥಾನಕ್ಕೆ ಹೋದಾಗ ಈ ರೀತಿ ಮಾಡ್ಬಾರ್ದು ಮಾಡಿದ್ರೆ ದರಿದ್ರ ಹುಡುಕಿಕೊಂಡು ಬರುತ್ತೆ .

ನೀವು ದೇವಸ್ಥಾನಕ್ಕೆ ಹೋದಾಗ ಈ ರೀತಿ ಮಾಡುವುದರಿಂದ ಅನಿಷ್ಟ, ಅಪಮೃತ್ಯು ಖಚಿತ.
ನೀವು ದೇವಸ್ಥಾನಕ್ಕೆ ಹೋದಾಗ ಈ ರೀತಿ ಮಾಡುವುದರಿಂದ ನೀವು ಮಾಡಿರುವ ಪುಣ್ಯಗಳ ಎಲ್ಲವನ್ನೂ ಕಳೆದುಕೊಂಡು ಪಾಪವನ್ನು ಕಟ್ಟಿಕೊಂಡು ಮನೆಗೆ ಬರುತ್ತೀರ. ಯಾವುದು ಅದು ? ನೀವು ಯಾವುದೇ ಕ್ಷೇತ್ರಕ್ಕೆ ಹೋದರೂ , ಯಾವುದೇ ದೇವಾಲಯಕ್ಕೆ ಹೋದರೂ, ಧರ್ಮ ಕ್ಷೇತ್ರಕ್ಕೆ ಹೋದರೂ , ಅಲ್ಲಿ ಒಂದು ಶಕ್ತಿ ಪೀಠವಿದೆ, ದೇವ ಪೀಠವಿದೆ, ಆದರೆ ಅದಕ್ಕೆ ಅಂದರೆ ದೇವರಿಗೆ ಅಭಿಮುಖವಾಗಿ ದೇವರಿಗೆ ಕುಳಿತುಕೊಳ್ಳಬಾರದು.

 

ದೇವರಿಗೆ, ದೇವರ ಮೂರ್ತಿಗೆ ನೇರವಾಗಿ, ವಿರುದ್ಧವಾಗಿ ಕುಳಿತುಕೊಳ್ಳಬಾರದು. ಎಲ್ಲ ಮನುಷ್ಯರು ಸಾಮಾನ್ಯರೇ. ಆದ್ದರಿಂದ ಕೆಲವು ದೇವಾಲಯಗಳಲ್ಲಿ ಪುರುಷರು ಕುಳಿತುಕೊಂಡಾಗ ಮೇಲೆ ಧರಿಸಿರುವ ಉಡುಪನ್ನು ತೆಗೆಯಲು ಹೇಳುತ್ತಾರೆ. ಒಂದು ವಸ್ತ್ರವನ್ನು ಮಾತ್ರ ಹಾಕಿಕೊಳ್ಳಿ ಎಂದು ಹೇಳುತ್ತಾರೆ.
ಆಗಮ ಶಾಸ್ತ್ರದಲ್ಲಿ ಮುಖ್ಯವಾಗಿ ಹೇಳಿರುವ ಪ್ರಕಾರ ಪುರುಷರು ಮೇಲಿನ ಉಡುಪನ್ನು ಧರಿಸಿಕೊಂಡು ಹೋದರೆ ಅದನ್ನು ದಿಗಂಬರ ದರ್ಶನ ಎಂದು ಹೇಳುತ್ತಾರೆ. ಅಂದರೆ ಭಗವಂತನ ಮುಂದೆ, ದೇವರ ಮುಂದೆ , ಗುರು ಹಿರಿಯರ ಮುಂದೆ, ನಾವು ನಗ್ನವಾಗಿ ನಿಂತಂತಾಗುತ್ತದೆ.

ನಾವು ಸ್ನಾನ ಮಾಡುವಾಗ ಕೂಡ ನಗ್ನವಾಗಿ ಸ್ನಾನ ಮಾಡಬಾರದಂತೆ. ದೇವರ ಮುಂದೆ ಗುರು ಹಿರಿಯರ ಮುಂದೆ ನಗ್ನವಾಗಿ ನಿಲ್ಲಬಾರದಂತೆ. ಅದು ಮಹಾ ದೊಡ್ಡ ಪಾಪವಾಗಿದೆ. ಧರ್ಮಕ್ಕೆ ಅದು ಅತ್ಯಂತ ದೊಡ್ಡ ಪೆಟ್ಟಾಗಿದೆ. ಅದಕ್ಕೆ ದೇವಾಲಯಗಳಿಗೆ ಹೋದಾಗ ಕೆಲವು ನಿಬಂಧನೆಗಳನ್ನು ಹಾಕಿರುತ್ತಾರೆ. ಅತಿ ಮುಖ್ಯವಾಗಿ ಮೇಲಿನ ಉಡುಪನ್ನು ಪುರುಷರು ಧರಿಸಬಾರದು ಎಂದು ಹೇಳುತ್ತಾರೆ.
ಸ್ತ್ರೀಯರು ಕೂಡ ಆದಷ್ಟು ಸೀರೆಯಲ್ಲಿಯೇ ಬರಬೇಕು ಎಂದು ಹೇಳುತ್ತಾರೆ .ಅಷ್ಟು ನಿಯಮಗಳು ಒಂದು ವಸ್ತ್ರಕ್ಕೆ ಇರಬೇಕಾದರೆ, ಇನ್ನು ದೇವರ ದರ್ಶನ ಮಾಡುವಾಗ ಅತಿ ಮುಖ್ಯವಾಗಿ ದೇವರಿಗೆ ಅಭಿಮುಖವಾಗಿ ಕುಳಿತು ಕೊಳ್ಳಲೇಬಾರದು. ಅಪ್ಪಿ ತಪ್ಪಿಯೂ ಕೂಡ ನೀವು ಅಭಿಮುಖವಾಗಿ ಯಾವ ದೇವರ ಮುಂದೆಯೂ ಕೂಡ ಕುಳಿತುಕೊಳ್ಳಬಾರದು.

 

 

ಆದರೆ ಒಂದೇ ಒಂದು ದೇವರನ್ನು ಮಾತ್ರ ಬಿಟ್ಟು, ಅದು ಯಾವ ದೇವರೆಂದರೆ ದಕ್ಷಿಣಾಮೂರ್ತಿ. ದಕ್ಷಿಣಕ್ಕೆ ಅಭಿಮುಖವಾಗಿದ್ದಾಗ, ನಾವು ಉತ್ತರಕ್ಕೆ ಅಭಿಮುಖ ಮಾಡುತ್ತೇವೆ. ಆ ಭಗವಂತನನ್ನು ನಾವು ನೋಡುತ್ತಿರುವಾಗ ನಮಗೆ ಇರುವಂತಹ ಅಪಮೃತ್ಯು ದೋಷಗಳು ದೂರವಾಗುತ್ತವೆ. ಬರುವ ಬಾಧೆಗಳು, ದುಃಖಗಳು ದೂರವಾಗುತ್ತವೆ .

ಆದ್ದರಿಂದಲೇ ನಾವು ಸಾವನ್ನಪ್ಪಿದಾಗ ದಕ್ಷಿಣ ದಿಕ್ಕಿಗೆ ತಲೆಯನ್ನು ಮಾಡುತ್ತಾರೆ. ಆ ದೇವರಿಗೆ ಮಾತ್ರ ನಾವು ಅಭಿಮುಖವಾಗಿ ಕುಳಿತು ಪ್ರಾರ್ಥನೆ ಜಪವನ್ನು ಮಾಡಿಕೊಳ್ಳಬಹುದು. ಬೇರೆ ಯಾವುದೇ ದೇವರ ವಿಗ್ರಹದ ಮುಂದೆ ಇನ್ನೊಂದು ವಿಗ್ರಹ, ದೇವಿಯ ವಿಗ್ರಹದ ಮುಂದೆ ಒಂದು ಸಿಂಹ , ಅಥವಾ ಶಿವನ ಮುಂದೆ ನಂದಿ ಈ ರೀತಿಯಾಗಿ ಇಟ್ಟಿರುತ್ತಾರೆ.

ಆದ್ದರಿಂದ ನೀವು ಯಾವುದೇ ಕಾರಣಕ್ಕೂ ದೇವಾಲಯಗಳಲ್ಲಿ ದಕ್ಷಿಣಾಮೂರ್ತಿ ದೇವರನ್ನು ಒಬ್ಬರನ್ನು ಬಿಟ್ಟು ಇನ್ಯಾವ ದೇವರ ಮುಂದೆಯೂ ಅಭಿಮುಖವಾಗಿ ಅಂದರೆ ನೇರವಾಗಿ ಕುಳಿತುಕೊಳ್ಳಬೇಡಿ.ಕುಳಿತರೆ ಅಪಘಾತ,ಅಪಮೃತ್ಯು, ದಾರಿದ್ರ್ಯ ಗ್ಯಾರಂಟಿ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top