ಸಮಾಚಾರ

ತೆಲುಗಿನ ಸ್ಟಾರ್​ ಡೈರೆಕ್ಟರ್‌ನ ಭೇಟಿಯಾದ್ರು ಧ್ರುವ ಸರ್ಜಾ.

ಮಾಡಿದ್ದು ಮೂರೇ ಚಿತ್ರಗಳಾಗಿದ್ದರೂ ಮೂರಕ್ಕೆ ಮೂರನ್ನು ಸೂಪರ್ ಹಿಟ್ ಚಿತ್ರಗಳನಾಗಿಸಿ ಚಂದನವನದ ಯುವ ಸ್ಟಾರ್ ನಟನಾಗಿ ಬೆಳೆದಿರುವಾತ ಆಕ್ಷನ್ ಪ್ರಿನ್ಸ್ ದೃವ ಸರ್ಜಾ. ಅದ್ದೂರಿ, ಬಹುದ್ದೂರ್, ಭರ್ಜರಿಗಳಂತಹ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿರೋ ದೃವ ಸರ್ಜಾ ಸದ್ಯ ನಂದಕಿಶೋರ್ ನಿರ್ದೇಶಿಸುತ್ತಿರುವ ‘ಪೊಗರು’ ಚಿತ್ರದ ಶೂಟಿಂಗಿನಲ್ಲಿ ಬ್ಯುಸಿಯಾಗಿದ್ದಾರೆ..

 

 

ಇಂತಿಪ್ಪ ದ್ರುವ ಸರ್ಜಾ ತೆಲುಗು ಚಿತ್ರರಂಗದ ಸ್ಟಾರ್ ನಿರ್ದೇಶಕರೊಬ್ಬರನ್ನು ಭೇಟಿಯಾಗಿದ್ದಾರೆ ಹಾಗಂತ ಅವರು ಯಾವೊದೋ ಹೊಸ ಚಿತ್ರದಲ್ಲಿ ನಟಿಸುವ ವಿಚಾರಕ್ಕಾಗಿ ಅಲ್ಲ. ದ್ರುವ ಮಾವ ಅರ್ಜುನ್ ಸರ್ಜಾ ಮುಖ್ಯ ಭೂಮಿಕೆಯಲ್ಲಿ ಮೂಡಿಬರುತ್ತಿರುವ ಕಾಂಟ್ರಾಕ್ಟ್ ಸಿನಿಮಾದಲ್ಲಿ ತೆಲುಗು ಚಿತ್ರರಂಗದ ಸ್ಟಾರ್ ನಿರ್ದೇಶಕನಾದ ಕೆ.ವಿಶ್ವನಾಥ್ ಅವರೂ ಕೂಡ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಶೂಟಿಂಗ್ ಬಿರುಸಿನಿಂದ ಸಾಗುತ್ತಿದೆ.

ಇತ್ತೀಚಿಗೆ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ದ್ರುವ ಸರ್ಜಾ ಭೇಟಿ ನೀಡಿದ್ದಾಗ ಅಲ್ಲೇ ಇದ್ದ ವಿಶ್ವನಾಥ್ ಅವರನ್ನು ನೋಡಿ ಅವರ ಆಶೀರ್ವಾದವನ್ನು ಪಡೆದಿದ್ದಾರೆ.. ಅಂದಹಾಗೆ ಈ ಚಿತ್ರವನ್ನು ರಾಮ್ ಗೋಪಾಲ್ ವರ್ಮಾ ಅವರ ಗರಡಿಯಲ್ಲಿ ಪಳಗಿರುವ ನಿರ್ದೇಶಕ ಜೆ.ಡಿ.ಚಕ್ರವರ್ತಿ ನಿರ್ದೇಶನ ಮಾಡುತ್ತಿದ್ದು ಬಹು ದಿನಗಳ ನಂತರ ರಾಧಿಕಾ ಕುಮಾರಸ್ವಾಮಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top