ಆರೋಗ್ಯ

ಸಿಗರೇಟ್ ಸೇದಿ ಸೇದಿ ನಿಮ್ಮ ತುಟಿಗಳು ಕಪ್ಪಾಗಿದ್ರೆ ಅದನ್ನ ಸರಿ ಮಾಡ್ಕೊಳ್ಳೋಕೆ ಇಷ್ಟು ಮಾಡಿ ಸಾಕು .

ಸಿಗರೇಟ್ ಸೇದಿ ಸೇದಿ ಕಪ್ಪಾದ ತುಟಿ ಕಪ್ಪಾಗಲು ಕಾರಣಗಳು :

ಹೊಗೆಯ ಶಾಖವು ದೇಹದ ತುಟಿಯ ಪ್ರದೇಶದಲ್ಲಿ ಬಿಡುಗಡೆಯಾಗುವ ಮೆಲನಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ , ಇದು ಗಾಢವಾದ ನಿಮ್ಮ ಚರ್ಮದ ಬಣ್ಣಕ್ಕೆ ಕಾರಣವಾಗುತ್ತದೆ.

ಸಿಗರೆಟ್ನಲ್ಲಿ ಅಗಾಧವಾಗಿ ಕಾಣಿಸಿಕೊಳ್ಳುವ ಟಾರ್ ನಿಮ್ಮ ತುಟಿಗಳು, ಹಲ್ಲುಗಳು ಮತ್ತು ಒಸಡುಗಳ ಮೇಲೆ ಕಪ್ಪು ಕಲೆ ಉಂಟುಮಾಡುತ್ತದೆ.

ನಿಮ್ಮ ತುಟಿಗಳ ಮೇಲ್ಮೈಗಿಂತ ಕೆಳಗಿರುವ ಸಣ್ಣ ಸಣ್ಣ ನಾಳಗಳು ಒಡೆದು ಅದು ಸಹ ಕಪ್ಪು ಬಣ್ಣಕ್ಕೆ ತಿರುಗುತ್ತದೆ.

ನಿಮ್ಮ ದೇಹದಲ್ಲಿ ಆಮ್ಲಜನಕದ ಕೊರತೆಯು ಸಹ ನಿಮ್ಮ ತುಟಿಗಳ ಬಣ್ಣವನ್ನು ಕಪ್ಪು ಮಾಡುತ್ತದೆ.

ತುಟಿ ಕಪ್ಪು ಸಮಸ್ಯೆಗೆ ಪರಿಹಾರ :

ನಿಮ್ಮ ತುಟಿಗಳಿಗೆ ಆಲಿವ್ ಎಣ್ಣೆ ಹಚ್ಚಿ ಹಲ್ಲುಜ್ಜುವ ಬ್ರಷ್ ಬಳಸಿ ಮೂರು ನಾಲ್ಕು ನಿಮಿಷಗಳ ಕಾಲ ನಿಧಾನವಾಗಿ ವೃತ್ತಾಕಾರದ ಚಲನೆಯಲ್ಲಿ ನಿಮ್ಮ ತುಟಿಗಳ ಮೇಲೆ ಉಜ್ಜಿ  ನಂತರ ಬೆಚ್ಚಗಿನ ನೀರಿನಿಂದ ನಿಮ್ಮ ತುಟಿಗಳನ್ನು ತೊಳೆದುಕೊಳ್ಳಿ ತುಟಿ ಒಣಗಿದ ಮೇಲೆ ಸ್ವಲ್ಪ ತುಪ್ಪ ಹಚ್ಚಿ .

 

 

ಒಂದು ಟೀಚಮಚ ಸಕ್ಕರೆಯನ್ನು ತೆಗೆದುಕೊಂಡು ಸ್ವಲ್ಪ ಆಲಿವ್ ಎಣ್ಣೆ ಮತ್ತು ನಿಂಬೆಹಣ್ಣಿನ ಮಿಶ್ರಣವನ್ನು ಸೇರಿಸಿ. ಈಗ ಈ ಪೇಸ್ಟ್ ತೆಗೆದುಕೊಂಡು ಅದನ್ನು ನಿಮ್ಮ ತುಟಿಗಳಿಗೆ ಹಚ್ಚಿ . ಮೃದುವಾಗಿ ವೃತ್ತಾಕಾರದ ಚಲನೆಗಳನ್ನು ಬಳಸಿ ಮಸಾಜ್ ಮಾಡಿ ನಂತರ ಬೆಚ್ಚಗಿನ ನೀರಿನಿಂದ ನಿಮ್ಮ ತುಟಿಗಳನ್ನು ತೊಳೆದುಕೊಳ್ಳಿ.

ನಿಂಬೆ ನಿಮ್ಮ ತುಟಿಗಳ ಬಣ್ಣವನ್ನು ಬದಲಿಸಲು ಸಹಾಯ ಮಾಡುತ್ತದೆ ಮತ್ತು ಜೇನುತುಪ್ಪವು ತುಟಿಗಳನ್ನು ಪೋಷಿಸುತ್ತದೆ, ಮೃದುಗೊಳಿಸುತ್ತದೆ, ನಿಂಬೆ ಮತ್ತು ಜೇನುತುಪ್ಪದ ರಸವನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಳ್ಳಿ. ಅದನ್ನು ಚೆನ್ನಾಗಿ ಮಿಶ್ರಮಾಡಿ ನಿಮ್ಮ ತುಟಿಗಳಿಗೆ ಅನ್ವಯಿಸಿ. ಇಪ್ಪತ್ತು ರಿಂದ ಮೂವತ್ತು ನಿಮಿಷಗಳ ಕಾಲ ಬಿಟ್ಟು ಬೆಚ್ಚಗಿನ ನೀರಿನಿಂದ ನಿಮ್ಮ ತುಟಿಗಳನ್ನು ತೊಳೆದುಕೊಳ್ಳಿ

ಸ್ವಲ್ಪ ತಾಜಾ ಬೀಟ್ರೂಟ್ ಅನ್ನು ತುರಿ ಮಾಡಿ ಸ್ವಲ್ಪ ನಿಂಬೆ ಮತ್ತು ಹಾಲಿನ ಕೆನೆ ಮಿಶ್ರಣ ಮಾಡಿ ಈ ಪೇಸ್ಟ್ ಅನ್ನು ನಿಮ್ಮ ತುಟಿಗಳಿಗೆ ಅನ್ವಯಿಸಿ, ಹದಿನೈದು ಇಪ್ಪತ್ತು ನಿಮಿಷಗಳ ನಂತರ ತೊಳೆಯಿರಿ.

 

 

ಒಂದು ಟೀಚಮಚ ಅರಿಶಿನ ತೆಗೆದುಕೊಂಡು ಅದಕ್ಕೆ ನಿಂಬೆ ರಸವನ್ನು ಸೇರಿಸಿ ಮಿಶ್ರಣ ಮಾಡಿ ಈ ಪೇಸ್ಟ್ ಅನ್ನು ನಿಮ್ಮ ತುಟಿಗಳಿಗೆ ಅನ್ವಯಿಸಿ, ಹತ್ತು ನಿಮಿಷಗಳ ನಂತರ ತೊಳೆಯಿರಿ.

ಕೆಲವು ದಾಳಿಂಬೆ ಬೀಜಗಳನ್ನು ಅರೆದು ಪೇಸ್ಟ್ ಮಾಡಿ ಸ್ವಲ್ಪ ಹಾಲಿನ ಕೆನೆ ಸೇರಿಸಿ ನಿಮ್ಮ ತುಟಿಗಳಿಗೆ ಅನ್ವಯಿಸಿ. ಕೆಲವು ನಿಮಿಷಗಳ ಕಾಲ ಉಳಿಯಲು ಬಿಟ್ಟು ನೀರಿನಿಂದ ತೊಳೆದುಕೊಳ್ಳಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top