ಆರೋಗ್ಯ

ಮಕ್ಕಳ ಹೊಟ್ಟೇಲಿ ಜಂತು ಹುಳು ಜಾಸ್ತಿ ಬೇಗ ಬೆಳೆಯುತ್ತೆ ,ಇದು ಮಕ್ಕಳ ಪ್ರಾಣಕ್ಕೆ ಅಪಾಯ ಆದ್ರಿಂದ ಬೇಗ ಮನೆ ಮದ್ದುಗಳು ಮಾಡಿ ವಾಸಿ ಮಾಡ್ಕೊಳ್ಳಿ

ಜಂತು ಹುಳು ಸಮಸ್ಯೆ

ಚಿಕ್ಕ ಮಕ್ಕಳಲ್ಲಿ ಈ ಜಂತು ಹುಳುವಿನ ಸಮಸ್ಯೆಯ ಬಗ್ಗೆ ನೀವು ಕೇಳಿರುತ್ತಿರ ,ಚಿಕ್ಕ ಮಕ್ಕಳು ಜಾಸ್ತಿ ಹೊರಗಡೆ ಆಟವಾಡುವುದರಿಂದ ಜಂತು ಹುಳುವಿನ ಸಮಸ್ಯೆ ಜಾಸ್ತಿ ನೋಡಬಹುದು.

ಈ ಜಂತು ಹುಳು ಜಾಸ್ತಿ ಬೇಗ ಬೆಳೆಯುತ್ತಾ ಹೋಗ್ತಾವೆ ,ಮಕ್ಕಳು ಸಾಯುವ ಪರಿಸ್ಥಿತಿಗೆ ಹೋಗುತ್ತದೆ.

ಆದ್ದರಿಂದ ಆದಷ್ಟು ನಾವು ಹೇಳೋ ಮನೆಮದ್ದನ್ನು ಅನುಸರಿಸಿ ನಿಮ್ಮ ಮತ್ತು ನಿಮ್ಮ ಮಕ್ಕಳ ಅರೋಗ್ಯ ಕಾಪಾಡಿಕೊಳ್ಳಿ :

ಜಂತು ಹುಳು ಸಮಸ್ಯೆಯ ಗುಣ ಲಕ್ಷಣಗಳು :

೧.ಕೆಟ್ಟ ಉಸಿರಾಟ

೨.ಪದೇ ಪದೇ ಭೇದಿ ಆಗುವುದು

೩.ಕಣ್ಣಿನ ಕೆಳಗೆ ಕಪ್ಪು ವರ್ತುಲ ಕಾಣಿಸಿಕೊಳ್ಳುವುದು

೪.ಜಾಸ್ತಿ ಹೊಟ್ಟೆ ಹಸಿವು

೫.ಯಾವಾಗೂ ತಲೆ ನೋವು

 

ಜಂತು ಹುಳು ತಡೆಯಲು ಮನೆಮದ್ದು.

ಕೊಬ್ಬರಿ ಮತ್ತು ಹಾಲು:

ಬೆಳಗ್ಗೆ ತಿಂಡಿಯ ಜೊತೆ ಸ್ವಲ್ಪ ಕೊಬ್ಬರಿ ತಿನ್ನಿ ೨೦ ನಿಮಿಷದ ನಂತರ ಒಂದು ಲೋಟ ಹಾಲಿಗೆ ೩ ಚಮಚ ಅರಳೆ ಎಣ್ಣೆ ಬೆರೆಸಿ ಕುಡಿಯಿರಿ.

ಪರಂಗಿ ಕಾಯಿ ಮತ್ತು ಜೇನು ತುಪ್ಪ:

ಕಾಯಿಯಾಗಿರುವ ಪರಂಗಿಯನ್ನು ಚೆನ್ನಾಗಿ ರುಬ್ಬಿಕೊಳ್ಳಿ ನಂತರ ರುಬ್ಬಿಕೊಂಡ ಪರಂಗಿಗೆ ೨ ಚಮಚ ಜೇನಿನ ತುಪ್ಪ ಮತ್ತು ಸ್ವಲ್ಪ ಬಿಸಿ ನೀರು  ಸೇರಿಸಿ ದಿನ ಕುಡಿಯಬೇಕು.

ಬೆಳ್ಳುಳ್ಳಿ ಮತ್ತು ಜೇನು ತುಪ್ಪ:

ಬೆಳ್ಳುಳ್ಳಿಯನ್ನು ಜಜ್ಜಿಕೊಂಡು ಅದಕೆ ಸ್ವಲ್ಪ ಜೇನು ತುಪ್ಪ ಸೇರಿಸಿ ತಿನ್ನಬಹುದು ಇಲ್ಲವಾದರೆ,ಹಸಿ ಬೆಳ್ಳುಳ್ಳಿಯನ್ನು ಹಾಗೇ ತಿನ್ನಬಹುದು.

ಹಾಗಲಕಾಯಿ ರಸ:

 

ಹಾಗಲಕಾಯಿ ರಸವನ್ನು ದಿನ ಇಲ್ಲವಾದರೆ ವಾರಕ್ಕೆ ೪ ಬಾರಿ ಕುಡಿಯುವುದರಿಂದ ಜಂತು ಹುಳು ಸಾಯುತ್ತದೆ.

ಹರಳೆಣ್ಣೆ:

ಒಂದು ಲೋಟ ಹಾಲಿಗೆ ಅರ್ಧ ಚಮಚ ಹರಳೆಣ್ಣೆಯನ್ನು ಸೇರಿಸಿ ಕುಡಿಯಬೇಕು ಹೀಗೆ ಎರಡು ದಿನ ಸೇವಿಸಿದರೆ ಜಂತುಹುಳುಗಳ ಸಮಸ್ಯೆ ನಿವಾರಣೆಯಾಗುತ್ತದೆ.

ಬೆಲ್ಲ:

ಎರಡು ಟೇಬಲ್ ಚಮಚ ಬೆಲ್ಲವನ್ನು ತಿಂದು ನಂತರ ಐದು ನಿಮಿಷಗಳು ಹಾಗೇ ಬಿಟ್ಟು ಎರಡು ಚಮಚ ಮೊಸರು ಹಾಗೂ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ತಿನ್ನಬೇಕು ಹೀಗೆ ಮಾಡಿದರೆ ಜಂತುಹುಳುಗಳ ಸಮಸ್ಯೆಯಿಂದ ನಿವಾರಣೆ ಹೊಂದಬಹುದು .

ಬೆಲ್ಲ ಮತ್ತು ಓಂ ಕಾಳು:

ಒಂದುವರೆ ಚಮಚದಷ್ಟು ಬೆಲ್ಲಕ್ಕೆ ಒಂದು ಚಮಚ ಓಂಕಾಳನ್ನು ಬೆರೆಸಿ ತಿನ್ನಬೇಕು ಹೀಗೆ ಮಾಡಿದರೂ ಸಹ ಜಂತು ಹುಳುಗಳ ಸಮಸ್ಯೆಯಿಂದ ನಿವಾರಣೆ ಹೊಂದಬಹುದು .

ಬೆಳಗ್ಗೆ ಖಾಲಿ ಹೊಟ್ಟೆ ಯಲ್ಲಿ ಸ್ವಲ್ಪ ಬೆಲ್ಲ ತಿನ್ನಿ ಆಮೇಲೆ ೧೫ ನಿಮಿಷ ಆದಮೇಲೆ ೨ ಚಮಚ ಓಂ ಕಾಳನ್ನು ತಿಂದು ಒಂದು ಲೋಟ ನೀರು ಕುಡಿಯಿರಿ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top