ಸಿನಿಮಾ

ಮಾಜಿ ಪ್ರಿಯಕರನ ತಾಯಿಯನ್ನ ನೋಡ್ತಿದ್ದಂತೆ ಕಾಲ್ಕಿತ್ತ ಕತ್ರಿನಾ ಕೈಫ್

ಬಾಲಿವುಡ್ ಮಾಜಿ ಪ್ರೇಮ ಪಕ್ಷಿಗಳಾದ ಕತ್ರಿನಾ ಕೈಫ್ ಮತ್ತು ರಣಬೀರ್ ಕಪೂರ್ ಯಾವಾಗಲು ಒಂದಲ್ಲಾ ಒಂದು ವಿಷಯದಲ್ಲಿ ಸುದ್ದಿಯಲ್ಲಿರುತ್ತಾರೆ. ಕೇವಲ ಕೆಲವೇ ವರ್ಷಗಳ ಹಿಂದಷ್ಟೇ ತೆರೆ ಮೇಲೆ ರಣಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ಕೆಮಿಸ್ಟ್ರಿ ನೋಡಿ ಜನರು ಮಾರ್ಡನ್ ಶಾರುಖ್ ಖಾನ್ ಹಾಗು ಕಾಜೋಲ್ ಎಂದೇ ಹೋಲಿಸುತ್ತಿದ್ದರು. ಆದರೆ ಈ ಇಬ್ಬರು ಕಡೆಯದಾಗಿ ಕಾಣಿಸಿಕೊಂಡಿದ್ದು 2015 ರ ‘ತಮಷಾ’ ಚಿತ್ರದಲ್ಲಿ. ನಂತರ ಯಾವುದೇ ಚಿತ್ರದಲ್ಲೂ ಒಟ್ಟಾಗಿ ದೀಪಿಕಾ ಮತ್ತು ರಣಬೀರ್ ತೆರೆ ಹಂಚಿಕೊಂಡಿಲ್ಲ.

 

 

ಬಹಳ ದಿನಗಳ ವರೆಗೂ ರಿಲೇಶನ್ ನಲ್ಲಿದ್ದ ಜೋಡಿ ಬೇರೆಯಾಗಿ ತುಂಬಾ ದಿನವಾಯ್ತು. ರಣಬೀರ್ ಮಾಜಿ ಪ್ರೇಯಸಿ ದೀಪಿಕಾ ಜೊತೆ ಮಾತನಾಡ್ತಿದ್ದ ಎಂಬುದು ಕತ್ರಿನಾ ಮುನಿಸಿಗೆ ಕಾರಣವಾಗಿತ್ತು ಎನ್ನಲಗಿದೆ. ಈಗ ಇಬ್ಬರೂ ಈ ಬಗ್ಗೆ ಮಾತನಾಡ್ತಿಲ್ಲ ಬಿಡಿ. ಕೆಲವು ದಿನಗಳ ಹಿಂದೆ ರಣಬೀರ್ ಕಪೂರ್ ತಾಯಿ ನೀತು ಕತ್ರಿನಾ ಮುಂದೆ ಬಂದಿದ್ದರು. ಇದ್ರಿಂದ ಕತ್ರಿನಾ ಸ್ವಲ್ಪ ಕಾಲ ವಿಚಲಿತರಾದರು. ನೀತು ಕಣ್ಣು ತಪ್ಪಿಸಿಕೊಂಡು ಓಡಾಡುವ ಯತ್ನ ನಡೆಸಿದ್ರು ಕತ್ರಿನಾ. ನೀತುರನ್ನು ನಿರ್ಲಕ್ಷ್ಯಿಸಿದ್ದಲ್ಲದೆ ಛಾಯಾಗ್ರಾಹಕರಿಗೆ ಗಳಿಗೆ ಫೋಟೋ ಕ್ಲಿಕ್ಕಿಸದಂತೆ ಮನವಿ ಕೂಡ ಮಾಡಿದರು ಎನ್ನಲಾಗಿದೆ.

ಸ್ಫೋರ್ಟ್ಸ್ ಬ್ರಾ ನಲ್ಲಿ ತರಬೇತಿಗೆ ಬಂದಿದ್ದ ಕತ್ರಿನಾ ಲಿಫ್ಟ್ ಬಳಿ ರಣಭೀರ್ ಕಪೂರ್ ತಾಯಿ ನೀತು ಅವರನ್ನು ನೋಡಿದ್ದಾರೆ. ನೀತು ಜೊತೆ ರೀಮಾ ಜೈನ್ ಹಾಗೂ ಲಾಲಿ ಧವನ್ ಕೂಡ ಇದ್ದರು. ಅವರನ್ನು ನೋಡಿದ ಬಳಿಕ ಕತ್ರಿನಾ ಲಿಫ್ಟ್ ಬಿಟ್ಟು ಮೆಟ್ಟಿಲೇರಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಮಾಹಿತಿ ಪ್ರಕಾರ ನೀತೂ, ಕತ್ರಿನಾರನ್ನು ನೋಡಿರಲಿಲ್ಲವಂತೆ. ಆದ್ರೆ ಕತ್ರಿನಾ ನೀತೂರನ್ನು ನೋಡಿ ಪೀಚೆ ಮೂಡ್ ಎಂದಿದ್ದರು ಎಂದು ಹೇಳಲಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top