ಸಿನಿಮಾ

ಅವನು, ಅವಳಾಗಿ ಸ್ಯಾಂಡಲ್ ವುಡ್ ಗೆ ನಾಯಕಿಯಾಗಿ ಎಂಟ್ರಿ ಕೊಟ್ಟ ಕಾಜಲ್

ಮೂರು ವರ್ಷದ ಹಿಂದೆ ಸ್ಯಾಂಡಲ್ ವುಡ್ ನಲ್ಲಿ ನಾನು ಅವನಲ್ಲ ಅವಳು ಎಂಬ ಚಿತ್ರ ಬಂದಿತ್ತು. ಅದರಲ್ಲಿ ಅವನು ಅವಳಾಗುವ ಕಥೆ ಇತ್ತು. ಇದೀಗ ಕನ್ನಡದಲ್ಲಿ ಮತ್ತೊಂದು ಚಿತ್ರ ಬರುತ್ತಿದೆ. ಅದು ಅವನು ಅವಳಾಗಿರುವ ಕಥೆ. ಕಾಜಲ್ ನಟಿಸುತ್ತಿರುವ ಸಿನೆಮಾ. ಕಾಜಲ್ ಯಾರು ಎಂಬ ಬಗ್ಗೆ ಸ್ಟ್ರೋರಿ ಇಲ್ಲಿದೆ.. ಹುಡುಗನಾಗಿ ಹುಟ್ಟಿ ನಂತರ ತನ್ನ ಸ್ವಾ ಇಚ್ಚೆಯಿಂದ ಹುಡುಗಿಯಾಗಿ ಪರಿವರ್ತನೆಗೊಂಡಿರುವ ಉಡುಪಿಯ ಕಾಜಲ್ ಲವ್ ಬಾಬಾ ಎಂಬ ಚಿತ್ರದಲ್ಲಿ ಹಿರೋಯಿನ್ ಆಗಿ ಅಭಿನಯ ಮಾಡುತ್ತಿದ್ದಾರೆ.

ಮೈಸೂರಿನ ಚಂದನ್ ಗೌಡ ನಿರ್ದೇಶಕ, ನಿರ್ಮಾಪಕರಾಗಿರುವ ‘ಲವ್ ಬಾಬಾ’ ಸಿನೆಮಾಗೆ ನಾಯಕಿಯಾಗಲಿರುವ ಕಾಜೋಲ್(28) ಉತ್ತಮ ಡ್ಯಾನ್ಸರ್ ಆಗಿದ್ದು, ಮುಂಬೈಯ ಬಾಂದ್ರಾದಲ್ಲಿ ನವ ನಿರ್ಮಾಣ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂದರೆ 2008 ರಲ್ಲಿ ನಟಿ ಬಿಪಾಶಾ ಬಸು ಜೊತೆ ಹೆಜ್ಜೆ ಹಾಕಿದ್ದರು. ‘ಕಾಲಚಕ್ರ’ ಎಂಬ ಸಧ್ಯದಲ್ಲಿಯೇ ಬಿಡುಗಡೆಯಾಗಬೇಕಿರುವ ಚಿತ್ರದಲ್ಲಿ ಪತ್ರಕರ್ತೆಯ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

 

ಇದು ಕನ್ನಡದ ಪ್ರಥಮ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿದೆ. ಇದುವರೆಗೆ ತೃತೀಯ ಲಿಂಗಿಗಳನ್ನು ಅಥವಾ ಮಂಗಳಮುಖಿಯರನ್ನು ಚಿತ್ರಗಳಲ್ಲಿ ಕಾಮಿಡಿ ಪಾತ್ರಗಳಲ್ಲಿ ಅಥಾವಾ ವಿಲನ್ ಪಾತ್ರಗಳಲ್ಲಿ ತೋರಿಸುತ್ತಿದ್ದರು. ಈ ಪಾತ್ರಗಳನ್ನು ಕೂಡಾ ಅವರಿಂದಲೇ ಮಾಡಿಸದೇ ಗಂಡಸರಿಂದಲೇ ಮಾಡಿಸುತ್ತಿದ್ದರು. ಆದರೆ ಈಗ ತೃತೀಯ ಲಿಂಗಿಗಳನ್ನು ಹಿರೋಯಿನ್ ಆಗಿ ರೂಪಿಸುವ ಮಟ್ಟಿಗೆ ಮಾನಸಿಕತೆ ಬದಲಾಗಿದೆ. ಇದು ತೃತೀಯ ಲಿಂಗಿಗಳಿಗೆ ದೊರಕುತ್ತಿರುವ ಗೌರವವೂ ಹೌದು.

ಸಿನಿಮಾ ನಾಯಕಿಯಾಗುವ ಮೂಲಕ ತನ್ನ ಕನಸನ್ನು ನನಸು ಮಾಡಿಕೊಳ್ಳುತ್ತಿರುವ ಕಾಜಲ್ ಅವರಿಗೆ ಶುಭವಾಗಲಿ ಎಂದು ಹಾರೈಸೋಣ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top