ಸಮಾಚಾರ

70 ವರ್ಷದಿಂದ ಈ ಸ್ವಾಮೀಜಿ ಆಹಾರ, ನೀರು ಸೇವಿಸಿಯೇ ಇಲ್ಲ

ಅಂಬಾ ಭವಾನಿ ಆರಾಧಕರಾಗಿರುವ ಪ್ರಹ್ಲಾದ ಜಾನಿ ಎಂಬ ಸ್ವಾಮೀಜಿ ಅವರು ಊಟ ಮಾಡ್ದೆ 85 ವರ್ಷ ಬದುಕಿದ್ದಾರೆ. 2010ರಲ್ಲಿ 15 ದಿನ ಇವ್ರನ್ನ ಒಂದು ಕೋಣೆಯಲ್ಲಿಟ್ಟು ಸುತ್ಲೂ ಕ್ಯಾಮೆರಾ ಫಿಕ್ಸ್ ಮಾಡಿದ್ರು. 15 ದಿನ ಒಂದೇ ಒಂದು ತೊಟ್ಟು ನೀರು, ಊಟ ಮಾಡ್ದೆ ಬದುಕಿದ್ರು. ಅಷ್ಟುದಿನ ಇದ್ರೂ ಅವರಿಗೆ ಹಸಿವಾಗಿರ್ಲಿಲ್ಲ. ಇದೆಲ್ಲಾ ಹೇಗೆ ಸಾಧ್ಯ ಆಯ್ತು ಅನ್ನೋ ರಹಸ್ಯ ಇನ್ನೂ ಗೊತ್ತಾಗಿಲ್ಲ. ಉಸಿರಾಟವೊಂದರಲಿಂದಲೇ ಅತೀ ದೀರ್ಘಕಾಲ ಜೀವಿಸಿದ ಈ ಸ್ವಾಮೀಜಿ ಉಸಿರಾಟದ ದೇವರು ಎಂದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಗುಜರಾತ್​ನ ಅಂಬಾಜಿಯಲ್ಲಿ ವಾಸವಾಗಿರುವ 88 ವರ್ಷದ ಪ್ರಹ್ಲಾದ ಜಾನಿ ಕಳೆದ 70 ವರ್ಷಗಳಿಂದ ಆಹಾರವಾಗಲಿ, ನೀರು ಏನನ್ನೂ ಕೂಡ ಸೇವನೆ ಮಾಡದೇ ಜೀವಿಸಿದ್ದಾರೆ! ವಿಶೇಷ ಅಂದರೆ ಯಾವುದೇ ಸಮಸ್ಯೆಯಿಲ್ಲದೇ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.

 

 

ಅಂಬಾ ಭವಾನಿ ದೇವರ ಆರಾಧನೆ ಮಾಡುವ ಈ ಸ್ವಾಮೀಜಿ ಅವರು ಸದಾ ಕೆಂಪು ವಸ್ತ್ರದಲ್ಲಿ ಕಾಣಸಿಕೊಳ್ಳುತ್ತಾರೆ. 70 ವರ್ಷಗಳಿಂದ ಆಹಾರ, ನೀರು ಸೇವನೆ ಮಾಡದೇ ಹೇಗಿದ್ದಾರೆ ಎಂಬುದು ವಿಜ್ಞಾನಿಗಳಿಗೆ ಕೂಡ ತಲೆ ನೋವಾಗಿದೆ. ಇವರ ದಿನಚರಿ ಬಗ್ಗೆ ಜಗತ್ತಿನಾದ್ಯಂತ ವಿಜ್ಞಾನಿಗಳು ಸಂಶೋಧನೆ ಮಾಡುತ್ತಿದ್ದಾರೆ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಕೂಡ ಈ ಸಂಶೋಧನೆ ಮಾಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ರಾಜಕೀಯ ಗಣ್ಯರು ಕೂಡ ಈ ಸ್ವಾಮೀಜಿ ಅವರನ್ನು ಭೇಟಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top