ಸಿನಿಮಾ

ಪ್ರಿಯಾಂಕಾ ಚೋಪ್ರಾ ಸಂಭಾವನೆ ಕೇಳಿ ಕಕ್ಕಾಬಿಕ್ಕಿಯಾದ ದೀಪಿಕಾ ಪಡುಕೋಣೆ

ಹಾಲಿವುಡ್ ನ ಎಬಿಸಿ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಅಮೆರಿಕದ ಜನಪ್ರಿಯ ಧಾರವಾಹಿ ‘ಕ್ವಾಂಟಿಕೊ’ ದಲ್ಲಿ ಮುಖ್ಯ ಭೂಮಿಕೆಯಲ್ಲಿರುವ ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಇದೀಗ ಹಾಟ್‌ ಸೆಕ್ಸ್‌ ಸೀನ್‌ ಒಂದರಲ್ಲಿ ಕಾಣಿಸಿಕೊಂಡು ಭಾರೀ ಸುದ್ದಿಯಾಗಿದ್ದರು. ಕ್ವಾಂಟಿಕೊ ಸರಣಿ ಬಳಿಕ ಈಗ ನಟಿ ಪ್ರಿಯಾಂಕ ಚೋಪ್ರಾ ಬಾಲಿವುಡ್ ಗೆ ವಾಪಸ್ ಆಗುತ್ತಿದ್ದಾರೆ. ಸಲ್ಮಾನ್ ಖಾನ್ ಅಭಿನಯದ ಸಿನಿಮಾ ಭಾರತ್ ನಲ್ಲಿ ಪ್ರಿಯಾಂಕ ಅಭಿನಯ ಮಾಡಲಿದ್ದಾರೆ. ಈ ಸಿನಿಮಾದಲ್ಲಿ ಪ್ರಿಯಾಂಕಾಗೆ ಭರ್ಜರಿ ಸಂಭಾವನೆ ನೀಡಲಾಗ್ತಿದೆ. ವರದಿ ಪ್ರಕಾರ ಪ್ರಿಯಾಂಕಾಗೆ 12 ಕೋಟಿ ರೂಪಾಯಿ ನೀಡಲಾಗ್ತಿದೆಯಂತೆ.

 

 

ಮೂಲಗಳ ಮಾಹಿತಿಯ ಪ್ರಕಾರ ಪ್ರಿಯಾಂಕ ಚೋಪ್ರಾ 14 ಕೋಟಿ ಆಫರ್ ಮಾಡುತ್ತಿದ್ದರಂತೆ. ಮಾತುಕತೆ ನಂತ್ರ 12 ಕೋಟಿಗೆ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಪ್ರಿಯಾಂಕಾಗೆ ಭಾರತ್ ಚಿತ್ರಕ್ಕಾಗಿ ಸಿಗ್ತಿರುವ ಸಂಭಾವನೆ ದೀಪಿಕಾಗೆ ಪದ್ಮಾವತಿಯಲ್ಲಿ ಸಿಕ್ಕ ಸಂಭಾವನೆಗೆ ಸರಿಸಮಾನವಾಗಿದೆ ಎನ್ನಲಾಗಿದೆ.

ಬಾಲಿವುಡ್ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟಿ ಎಂಬ ಹೆಗ್ಗಳಿಕೆಗೆ ದೀಪಿಕಾ ಪಡುವುಕೋಣೆ ಪಾತ್ರಳಾಗಿದ್ದಳು. ದೀಪಿಕಾಗೆ ಟಕ್ಕರ್ ಕೊಡಲು ಪ್ರಿಯಾಂಕ ಬಾಲಿವುಡ್ ಗೆ ವಾಪಸ್ ಆಗುತ್ತಿದ್ದಾಳೆ. ಕೆಲವು ದಿನಗಳ ಹಿಂದೆ ಬಿಬಿಸಿ ಜೊತೆ ಮಾತನಾಡಿದ್ದ ಪ್ರಿಯಾಂಕ, ಸಹ ನಟನಿಗಿಂತ ಕಡಿಮೆ ಸಂಭಾವನೆ ಪಡೆಯಲು ನನಗೆ ಇಷ್ಟವಿಲ್ಲ. ಆದ್ರೆ ಈವರೆಗೂ ಅವ್ರ ವೇತನಕ್ಕಿಂತ ಶೇಕಡಾ 5ರಷ್ಟು ಕಡಿಮೆ ಸಂಭಾವನೆ ನನಗೆ ಸಿಕ್ಕಿದೆ ಎಂದು ಹೇಳಿಕೊಂಡಿದ್ದಳು ಎಂದು ವರದಿಯಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top