ಸಿನಿಮಾ

ಫಿಟ್ನೆಸ್ ಚಾಲೆಂಜ್ ವಿಡಿಯೋ ಹಾಕಿದ ಮಾಸ್ಟರ್ ಪೀಸ್ ಹುಡುಗಿ ಶಾನ್ವಿ ಶ್ರೀವಾಸ್ತವ್

ಇತ್ತೀಚಿಗೆ ಕೇಂದ್ರ ಸಚಿವರಾಗಿರುವ ರಾಜ್ಯವರ್ಧನ್ ಸಿಂಗ್ ರಾಥೋಡ್ ರವರು ದೈಹಿಕ ಫಿಟ್ನೆಸ್ ಅಂದರೆ ದೈಹಿಕ ಕ್ಷಮತೆಯನ್ನು ಕಾಯ್ದುಕೊಳ್ಳಲು ಸೆಲೆಬ್ರಿಟಿಗಳಿಗೆ ಸವಾಲನ್ನು ನೀಡಿದ್ದರೂ ಈ ಸವಾಲನ್ನು ಒಂದೊಂದು ರೀತಿಯಲ್ಲಿ ಸ್ವೀಕರಿಸಿದ ಸೆಲೆಬ್ರಿಟಿಗಳು ತಮಗೆ ಅನಿಸಿದ ಹಾಗೆ ಚಿಕ್ಕಪುಟ್ಟ ಫಿಟ್ನೆಸ್ ಗೆ ಸಂಬಂಧಪಟ್ಟ ವ್ಯಾಯಾಮಗಳನ್ನು ಮಾಡಿ ಆ ವಿಡಿಯೋಗಳನ್ನು ಟ್ವಿಟ್ಟರ್ ನಲ್ಲಿ ಹಾಕುತ್ತಿದ್ದರು.

ರಾಜ್ಯವರ್ಧನ್ ಸಿಂಗ್ ಅವರು ಆರಂಭಿಸಿದ ಈ ಫಿಟ್ನೆಸ್ ಚಾಲೆಂಜ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಬಾಲಿವುಡ್ ಸುತ್ತಾಡಿ ಈಗ ಸ್ಯಾಂಡಲ್ ವುಡ್ ಅಂಗಳದಲ್ಲಿ ಬಂದು ನಿಂತಿದೆ , ಖ್ಯಾತ ಕ್ರಿಕೆಟ್ ಆಟಗಾರ ವಿನಯ್ ಕುಮಾರ್ ತಮ್ಮ ಫಿಟ್ನೆಸ್ ವಿಡಿಯೊವನ್ನು ಪೋಸ್ಟ್ ಮಾಡಿ ಸುದೀಪ್ ಅವರಿಗೆ ಚಾಲೆಂಜ್ ಹಾಕಿದ್ದರು, ಸುದೀಪ್ ಅವರು ಯಶ್ ಅವರಿಗೆ ಚಾಲೆಂಜ್ ಹಾಕಿದ್ದರು. ಪುನೀತ್ ಕೂಡ ಫಿಟ್ನೆಸ್ ವಿಡಿಯೋ ಹಾಕಿದ್ದರು.

 

 

ಸದ್ಯ ಸ್ಯಾಂಡಲ್ ವುಡ್ ನಟಿಯರು ಕೂಡ ನಾವು ಯಾರಿಗೂ ಕಮ್ಮಿ ಇಲ್ಲ ಎನ್ನುವಂತೆ #HumFitTohIndiaFit ಅಭಿಯಾನಕ್ಕೆ ಕೈ ಜೋಡಿಸಿರುವಂತಿದೆ. ಇದಕ್ಕೆ ಇಂಬು ನೀಡುವಂತೆ ಈಗ ನಟಿ ಶಾನ್ವಿ ಶ್ರೀ ವಾಸ್ತವ್ ಅವರು ಯಾರಿಗೂ ಸವಾಲು ಹಾಕದೆ ತಾವೇ ಜಿಮ್ ನಲ್ಲಿ ವರ್ಕ್ ಔಟ್ ಮಾಡುತ್ತಿರುವ ವೀಡಿಯೊವೊಂದನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಟ್ಟಿರುವ ವೀಡಿಯೊ ಸಖತ್ ವೈರಲ್ ಆಗಿದ್ದು , ಈ ವೀಡಿಯೊ ಇಲ್ಲಿದೆ ನೋಡಿ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top